Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದಲ್ಲಿ ಟೆಸ್ಟ್ ಆಡುವುದು ಯಾವಾಗಲೂ ಇಷ್ಟ: ಆಸಿಸ್ ಆಲ್‌ರೌಂಡರ್ ಆಶ್ಟನ್ ಅಗರ್ ಹೇಳಿಕೆ

Australian cricketer Ashton Agar said Always wanted to play Test cricket in India

ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡು ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲು ಸಜ್ಜಾಗುತ್ತಿದೆ. ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಆಶ್ಟನ್ ಅಗರ್ ಪ್ರತಿಕ್ರಿಯೆ ನೀಡಿದ್ದು ಭಾರತ ಪ್ರವಾಸವನ್ನು ಎದುರುನೋಡುತ್ತಿರುವುದಾಗಿ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೂ ಮುನ್ನ ಆಷ್ಟನ್ ಅಗರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಭಾರತದಲ್ಲಿ ಟೆಸ್ಟ್ ಆಡುವುದೆಂದರೆ ಯಾವಾಗಲೂ ಇಷ್ಟ. ಅಲ್ಲದೆ ಟಿವಿಯಲ್ಲಿ ಟೆಸ್ಟ್ ಸರಣಿಯನ್ನು ವೀಕ್ಷಿಸುವುದು ಕೂಡ ಸಾಕಷ್ಟು ಉತ್ಸಾಹ ನೀಡುತ್ತದೆ ಎಂದಿದ್ದಾರೆ.

"ಭಾರತದಲ್ಲಿ ಟೆಸ್ಟ್ ಸರಣಿ ಆದಾಗ ಟಿವಿಯಲ್ಲಿ ವೀಕ್ಷಿಸುವುದು ಬಹಳ ಖುಷಿ ನೀಡುತ್ತದೆ. ಇನ್ನು ಭಾರತದಲ್ಲಿ ಟೆಸ್ಟ್ ಆಡುವುದೆಂದರೆ ನನಗೆ ಯಾವಾಗಲೂ ಬಹಳ ಇಷ್ಟ. ಟಿವಿಯಲ್ಲಿ ವೀಕ್ಷಿಸುವುದು ಕೂಡ ರೋಮಾಂಚನಕಾರಿ ಅನುಭವ. ಯಾಕೆಂದರೆ ಅಲ್ಲಿನ ವಿಕೆಟ್‌ಗಳು ಬಹಳ ಕಾಡುತ್ತವೆ" ಎಂದು ಆಶ್ಟನದ ಅಗರ್ ಹೇಳಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಭಾರತ ಪ್ರವಾಸಕ್ಕೆ ತಾನು ಆಯ್ಕೆಯಾಗುವ ವಿಶ್ವಾಸವನ್ನು ಕೂಡ ಆಶ್ಟನ್ ಅಗರ್ ವ್ಯಕ್ತಪಡಿಸಿದ್ದು ಏನಾಗಲಿದೆ ಎಂಬುದನ್ನು ಕಾದು ನೋಡೋಣ ಎಂದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಅವರು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಜವಾಬ್ಧಾರಿಯುತ ಪ್ರದರ್ಶನ ನೀಡುವುದನ್ನು ಇಷ್ಟಪಡುವುದಾಗಿ ಹೇಳಿದ್ದಾರೆ. ಈ ರೀತಿಯ ಜವಾಬ್ಧಾರಿ ತನ್ನ ಆಟವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ ಎಂದಿದ್ದಾರೆ ಅಷ್ಟನ್ ಅಗರ್.

ಫೆಬ್ರವರಿ 9ರಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಗುವ ಮೂಲಕ ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು ಮೊದಲ ಪಂದ್ಯ ನಾಗ್ಪುರದಲ್ಲಿ 2ನೇ ಪಂದ್ಯ ದೆಹಲಿಯಲ್ಲಿ 3ನೇ ಪಂದ್ಯ ಧರ್ಮಶಾಲಾದಲ್ಲಿ ಹಾಗೂ 4ನೇ ಪಂದ್ಯ ಅಹ್ಮದಾಬಾದ್‌ನಲ್ಲಿ ನಡೆಯಲಿದೆ. ಟೆಸ್ಟ್ ಸರಣಿಯ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

Story first published: Monday, January 2, 2023, 2:35 [IST]
Other articles published on Jan 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+