ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರಾನ್ ವೈಟ್ ಕ್ರಿಕೆಟ್‌ನಿಂದ ನಿವೃತ್ತಿ

ಸಿಡ್ನಿ, ಆಗಸ್ಟ್ 21: ಆಸ್ಟ್ರೇಲಿಯಾದ ಮಾಜಿ ನಾಯಕ, ಆಲ್ ರೌಂಡರ್ ಕ್ಯಾಮರಾನ್ ವೈಟ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮೂರು ದಿನಗಳ ಹಿಂದಷ್ಟೇ, ಅಂದರೆ ಆಗಸ್ಟ್ 18ರಂದು ವೈಟ್ 37ರ ಹರೆಯಕ್ಕೆ ಕಾಲಿರಿಸಿದ್ದರು. ವೈಟ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
2008ರಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರವಾಸ ಬಂದಿದ್ದಾಗ ಕ್ಯಾಮರಾನ್ ವೈಟ್ 4 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು. ವೈಟ್ ಆಡಿದ ಕೊನೇ ಟೆಸ್ಟ್ ಸರಣಿ ಇದೇ. 2018ರಲ್ಲಿ ಅಡಿಲೇಡ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕ್ಯಾಮರಾನ್ ಅಡೇಯ ಒಡಿಐ ಆಡಿದ್ದರು.
ಆಸ್ಟ್ರೇಲಿಯಾ ಪರ ವೈಟ್ 4 ಟೆಸ್ಟ್ ಪಂದ್ಯಗಳಲ್ಲಿ 146 ರನ್, 91 ಏಕದಿನ ಪಂದ್ಯಗಳಲ್ಲಿ 2072 ರನ್, 2 ಶತಕ, 11 ಅರ್ಧ ಶತಕ, 47 ಟಿ20ಐ ಪಂದ್ಯಗಳಲ್ಲಿ 984 ರನ್, 5 ಅರ್ಧ ಶತಕ ಬಾರಿಸಿದ್ದಾರೆ. ಇನ್ನು ಟೆಸ್ಟ್‌ನಲ್ಲಿ 5 ವಿಕೆಟ್, ಏಕದಿನದಲ್ಲಿ 12 ವಿಕೆಟ್, ಟಿ20ಐನಲ್ಲಿ 1 ವಿಕೆಟ್ ದಾಖಲೆ ವೈಟ್ ಹೆಸರಲ್ಲಿದೆ.
'ನಾನು ಖಂಡಿತವಾಗಿಯೂ ಆಡುವುದನ್ನು ನಿಲ್ಲಿಸಿದ್ದೇನೆ. ಅದಂತೂ ಖಂಡಿತಾ. ನಾನು ಸ್ಟ್ರೈಕರ್ಸ್‌ನೊಂದಿಗೆ ಒಂದು ವರ್ಷದ ಆಟದ ಒಪ್ಪಂದವನ್ನು ಹೊಂದಿದ್ದೆ. ನಾನು ಕಳೆದ ವರ್ಷ ಅವರೊಂದಿಗೆ ಬೆರಳೆಣಿಕೆಯಷ್ಟು ಆಟಗಳನ್ನು ಮಾತ್ರ ಆಡಿದ್ದೇನೆ ಮತ್ತು ಆ ಪಂದ್ಯಗಳಲ್ಲಿ ನಾನು ಮತ್ತೊಂದು ಒಪ್ಪಂದವನ್ನು ಪಡೆಯಲು ನಿಜವಾಗಿಯೂ ಚೆನ್ನಾಗಿ ಆಡಬೇಕಾಗಿತ್ತು,' ಎಂದು ವೈಟ್ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications