ಮೂರನೇ ಬಾರಿ ತಂದೆಯಾದ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್

ಲಂಡನ್, ಜುಲೈ 01: ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮೂರನೇ ಬಾರಿ ತಂದೆಯಾಗಿದ್ದಾರೆ. ವಾರ್ನರ್ ದಂಪತಿಗೆ ಮೂರನೇ ಬಾರಿಯೂ ಹೆಣ್ಣು ಮಗು ಪ್ರಾಪ್ತಿಯಾಗಿದೆ
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
"ಕಳೆದ ರಾತ್ರಿ 10.30ರ ಸುಮಾರಿಗೆ ನಮ್ಮ ಕುಟುಂಬಕ್ಕೆ ನೂತನ ಸದಸ್ಯೆ ಇಸ್ಲಾ ರೋಸ್ ಆಗಮನವಾಗಿದೆ. ಕ್ಯಾಂಡಿಸ್ ವಾರ್ನರ್ ನಿಜಕ್ಕೂ ಅದ್ಭುತ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ. ಇಬ್ಬರು ಅಕ್ಕಂದಿರ ಸಂಭ್ರಮವಂತೂ ಮುಗಿಲು ಮುಟ್ಟಿದೆ,'' ಎಂದು ಡೇವಿಡ್ ವಾರ್ನರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಮೂರನೇ ಬಾರಿ ತಂದೆಯಾಗಿರುವ ವಿಷಯವನ್ನುಅಧಿಕೃತವಾಗಿ ಘೋಷಿಸಿದ್ದಾರೆ.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡ ತನ್ನ ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿ ಒಂದು ವಾರ ಕಾಲ ವಿಶ್ರಾಂತಿಯಲ್ಲಿದ್ದು, ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪೈಪೋಟಿ ನಡೆಸಲಿದೆ.
ಇನ್ನು ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಪತಿ ಡೇವಿಡ್ ವಾರ್ನರ್‌ಗೆ ಯಾವುದೇ ರೀತಿಯ ಆತಂಕ ಎದುರಾಗಬಾರದೆಂದು ಪತ್ನಿ ಕ್ಯಾಂಡಿಸ್ ವಾರ್ನರ್ ಲಂಡನ್‌ನಲ್ಲೇ ತಮ್ ಮೂರನೇ ಪುತ್ರಿಗೆ ಜನ್ಮ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾದಿಂದ ಲಂಡನ್‌ಗೆ ಆಗಮಿಸಿದ್ದರು.
ಕಳೆದ ವರ್ಷ ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ತಪ್ಪೊಪ್ಪಿಕೊಂಡು ಕ್ರಿಕೆಟ್ ಆಸ್ಟ್ರೇಲಿಯಾದಿಂದ ಡೇವಿಡ್ ವಾರ್ನರ್ ಒಂದು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಈ ಸಂದರ್ಭದಲ್ಲಿ ಕ್ಯಾಂಡಿಸ್ ವಾರ್ನರ್ ಗರ್ಭಪಾತಕ್ಕೆ ಒಳಪಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿನ ಬ್ಯಾಟಿಂಗ್ ನಡೆಸಿರುವ ಡೇವಿಡ್ ವಾರ್ನರ್, ಎರಡು ಶತಕಗಳ ಸಹಿತ ಒಟ್ಟು 516 ರನ್‌ಗಳನ್ನು ಚೆಚ್ಚುವ ಮೂಲಕ ಅತಿ ಹೆಚ್ಚು ರನ್‌ಗಳಿಸಿದವರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಅಂತೆಯೇ ಆಸ್ಟ್ರೇಲಿಯಾ ತಂಡ ಕೂಡ ನಾಕ್‌ಔಟ್ಸ್‌ಗೆ ಮುನ್ನಡೆದ ಮೊದಲ ತಂಡ ಎನಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications