Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ಟೆಸ್ಟ್‌ ಕ್ಯಾಪ್‌ ಭರ್ಜರಿ ಬೆಲೆಗೆ ಮಾರಾಟ

Australian cricketer Don Bradman’s Test cap sells for $340,000

ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ ಡೊನಾಲ್ಡ್ ಬ್ರಾಡ್ಮನ್‌ ಅವರ ಜನಪ್ರಿಯ, ಚೊಚ್ಚಲ ಬ್ಯಾಗಿ ಗ್ರೀನ್‌ ಕ್ಯಾಪ್‌ ಅನ್ನು ಆಸ್ಟ್ರೇಲಿಯಾದ ಬ್ಯುಸಿನೆಸ್ ಮ್ಯಾನ್ ಒಬ್ಬರು $340,000ಗೆ (2,51,26,952 ರೂ.) ಖರೀದಿಸಿದ್ದಾರೆ. ಇದು ಹರಾಜೊಂದರಲ್ಲಿ ಕ್ರಿಕೆಟ್ ಸ್ಮರಣಿಕೆಗಾಗಿ ಪಾವತಿಸಿದ ಎರಡನೇ ಅತಿ ಹೆಚ್ಚು ಬೆಲೆಯಾಗಿ ಗುರುತಿಸಿಕೊಂಡಿದೆ.

ಈ ವರ್ಷದ ಆರಂಭದಲ್ಲಿ, ಅಮೆರಿಕಾದ ಗೀತೆ ರಚನೆಕಾರ, ಸಂಗೀತಕಾರ ಕರ್ಟ್ ಕೊಬೈನ್ ಅವರು ಬಳಸಿದ್ದ ಗಿಟಾರ್ ಅನ್ನು (50,25,74,400 ರೂ.) $6.8 ಮಿಲಿಯನ್ ಡಾಲರ್ ಗೆ ಖರೀದಿಸಿದ್ದ, ರೋಡ್ ಮೈಕ್ರೋಫೋನ್‌ನ ಸ್ಥಾಪಕ ಪೀಟರ್ ಫ್ರೀಡ್ಮನ್ ಅವರು ಬ್ರಾಡ್ಮನ್ ಅವರ ಕ್ಯಾಪ್‌ ಅನ್ನು ಖರೀದಿಸಿದ್ದಾರೆ.

ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್ ಅವರ ಟೆಸ್ಟ್ ಕ್ಯಾಪ್‌ ಈ ವರ್ಷದ ಆರಂಭದಲ್ಲಿ $760,000ಗೆ (5,61,55,412 ರೂ.) ಖರೀದಿಸಲ್ಪಟ್ಟಿತ್ತು. ಇದು ಕ್ರಿಕೆಟ್ ಸ್ಮರಣಾರ್ಥ ವಸ್ತುವೊಂದು ಅತೀ ಹೆಚ್ಚಿಗೆ ಹರಾಜಾದ ವಿಶ್ವ ದಾಖಲೆಗೆ ಕಾರಣವಾಗಿತ್ತು. ಇದಕ್ಕಿಂತ ಕೊಂಚ ಕಡಿಮೆ ಬೆಲೆಗೆ ಡೊನಾಲ್ಡ್ ಕ್ಯಾಪ್‌ ಹರಾಜಾಗಿದೆ.

ಅಂದ್ಹಾಗೆ, ಸರ್ ಡೊನಾಲ್ಡ್ ಬ್ರಾಡ್ಮನ್‌ ಅವರು ಈ ಬ್ಯಾಗೀ ಗ್ರೀನ್ ಕ್ಯಾಪ್‌ ಅನ್ನು 1928ರಲ್ಲಿ ಧರಿಸಿದ್ದರು. ಆಸ್ಟ್ರೇಲಿಯಾ ರಾಷ್ಟ್ರೀಯ ಕ್ರಿಕೆಟ್‌ ತಂಡವನ್ನು 20 ವರ್ಷಗಳ ಕಾಲ ಪ್ರತಿನಿಧಿಸಿದ್ದ ಬ್ರಾಡ್ಮನ್, 1928ರಿಂದ 1948ರವರೆಗೆ 52 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಟೆಸ್ಟ್‌ನಲ್ಲಿ ವಿಶ್ವದಾಖಲೆಯ 99.94ರ ಸರಾಸರಿಯಲ್ಲಿ ಬ್ರಾಡ್ಮನ್ 6996 ರನ್ ಬಾರಿಸಿದ್ದಾರೆ.

Story first published: Tuesday, December 22, 2020, 15:59 [IST]
Other articles published on Dec 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+