Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾದ ಪ್ರಮುಖ ವೇಗಿಗೆ ಕೊರೊನಾವೈರಸ್ ಸೋಂಕು?

Australian Cricketer Kane Richardson Tested For Coronavirus After Reporting Illness

ಸಿಡ್ನಿ, ಮಾರ್ಚ್ 13: ವಿಶ್ವದೆಲ್ಲೆಡೆ ಕ್ರೀಡಾಕೂಟಗಳನ್ನು ಬಂದ್ ಮಾಡಿಸುತ್ತಿರುವ ಕೊರೊನಾವೈರಸ್ ಭೀತಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಸರಣಿಗೂ ತಟ್ಟಿದೆ. ಶುಕ್ರವಾರದಂದು ನಡೆದಿರುವ ಮೊದಲ ಏಕದಿನ ಪಂದ್ಯದಲ್ಲಿ ಆಡಬೇಕಿದ್ದ ವೇಗಿ ಕೇನ್ ರಿಚರ್ಡ್ಸನ್ ಈಗ ವೈದ್ಯಕೀಯ ಪರೀಕ್ಷೆಗೊಳಪಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆಂದು ತೆರಳಿದ್ದ ಕೇನ್ ರಿಚರ್ಡ್ಸನ್ ಅವರು ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದು, ಇಂದು ಪಂದ್ಯವಾಡಬೇಕಿತ್ತು. ಆದರೆ, ಗಂಟಲು ಬೇನೆ ಹಾಗೂ ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದು, ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಟ್ರೇಲಿಯಾ ಸರ್ಕಾರ ನೀಡಿರುವ ಆದೇಶದಂತೆ ನಾವು ಕ್ರಮ ಜರುಗಿಸಿದ್ದೇವೆ. ಸೂಕ್ತ ಪರೀಕ್ಷೆ ನಂತರ ಮುಂದಿನ ಅಪ್ಡೇಟ್ ನೀಡಲಾಗುವುದು ವಿದೇಶಿ ಯಾತ್ರೆ ಬಳಿಕ ಆಸ್ಟ್ರೇಲಿಯಾಕ್ಕೆ ಬಂದಿದ್ದರಿಂದ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ವಕ್ತಾರರು ಹೇಳಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದಿರುವ ಪಂದ್ಯದಲ್ಲಿ ನಾಯಕ ಆರೋನ್ ಫಿಂಚ್ ಟಾಸ್ ಗೆದ್ದಿದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲು ಸಜ್ಜಾಗಿದ್ದರು.

Story first published: Friday, March 13, 2020, 12:02 [IST]
Other articles published on Mar 13, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+