For Quick Alerts
ALLOW NOTIFICATIONS  
For Daily Alerts
 

IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ ಪಂಜಾಬ್‌ ಕಿಂಗ್ಸ್‌ಗೆ ಪೆಟ್ಟು: ವೇಗಿಗೆ ಗಾಯ

ಐಪಿಎಲ್ 2024 ರ ಋತುವಿನ ಆರಂಭದ ಮೊದಲು, ಪಂಜಾಬ್ ಕಿಂಗ್ಸ್‌ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಪಂಜಾಬ್ ಕಿಂಗ್ಸ್ ವೇಗದ ಬೌಲರ್ ನಾಥನ್ ಎಲ್ಲಿಸ್ ಗಾಯಕ್ಕೆ ತುತ್ತಾಗಿದ್ದಾರೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುವಾಗ ನಾಥನ್ ಎಲ್ಲಿಸ್ ಗಾಯಗೊಂಡಿದ್ದಾರೆ. ನಾಥನ್ ಎಲ್ಲಿಸ್ ಗಾಯಗೊಂಡಿರುವುದು ಪಂಜಾಬ್ ಕಿಂಗ್ಸ್‌ಗೆ ದೊಡ್ಡ ಹೊಡೆತವಾಗಿದೆ.

ಈ ಪಂದ್ಯದಲ್ಲಿ ನಾಥನ್ ಎಲ್ಲಿಸ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ನಾಥನ್ ಎಲ್ಲಿಸ್ ಅವರು ಎದುರಾಳಿ ತಂಡದ ಇಬ್ಬರು ಸ್ಟಾರ್ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿ ಅಬ್ಬರಿಸಿದರು. ಆದರೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Australian cricketer Nathan Ellis hurts himself during a diving catch attempt in BBL

ಬಿಗ್ ಬ್ಯಾಷ್‌ನ ಅಧಿಕೃತ ಸಾಮಾಜಿಕ ತಾಣದಲ್ಲಿ ಕ್ಯಾಚ್‌ ಹಿಡಯುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಫೀಲ್ಡಿಂಗ್ ವೇಳೆ ನಾಥನ್ ಎಲ್ಲಿಸ್ ಗಾಯಗೊಂಡಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ನಾಥನ್ ಎಲ್ಲಿಸ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಪಂಜಾಬ್ ಕಿಂಗ್ಸ್ ಅಭಿಮಾನಿಗಳು ನಾಥನ್ ಎಲ್ಲಿಸ್ ಅವರ ಗಾಯವು ತುಂಬಾ ಗಂಭೀರವಾಗದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ನಾಥನ್ ಎಲ್ಲಿಸ್ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂಬುದರ ಕುರಿತು ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

Australian cricketer Nathan Ellis hurts himself during a diving catch attempt in BBL

ಬಿಗ್ ಬ್ಯಾಷ್ ಲೀಗ್‌ ನಲ್ಲಿ ಹೊಬರ್ಟ್ ಹರಿಕೇನ್ಸ್ ಮೆಲ್ಬೋರ್ನ್ ಸ್ಟಾರ್ಸ್ ಅನ್ನು 7 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಹೋಬರ್ಟ್ ಹರಿಕೇನ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 187 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮೆಲ್ಬೋರ್ನ್ ಸ್ಟಾರ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 180 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಹೋಬರ್ಟ್ ಹರಿಕೇನ್ಸ್ ಪಂದ್ಯವನ್ನು ಗೆದ್ದುಕೊಂಡಿತು. ಹೋಬರ್ಟ್‌ ತಂಡ ಆಡಿದ 10 ಪಂದ್ಯಗಳಲ್ಲಿ 4 ಜಯ, 6 ಸೋಲು ಕಂಡಿದ್ದು, 8 ಅಂಕವನ್ನು ಕಲೆ ಹಾಕಿದೆ.

ನಾಥನ್ ಎಲ್ಲಿಸ್ ಐಪಿಎಲ್‌ನಲ್ಲಿ ಒಟ್ಟು 15 ಪಂದ್ಯಗಳನ್ನು ಆಡಿದ್ದು 17 ವಿಕೆಟ್‌ ಕಬಳಿಸಿದ್ದಾರೆ. ಅದರಲ್ಲೂ ಕಳೆದ ಸೀಸನ್‌ನಲ್ಲಿ ಅವರು ಆಡಿದ 10 ಪಂದ್ಯಗಳಲ್ಲಿ 13 ವಿಕೆಟ್‌ ಕಬಳಿಸಿ ಭರವಸೆ ಮೂಡಿಸಿದ್ದರು. ಅಲ್ಲದೆ ಒಂದೇ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ತಮ್ಮ ಕ್ಷಮತೆಯನ್ನು ಸಾಬೀತು ಮಾಡಿದ್ದರು. 29 ವರ್ಷದ ನಾಥನ್ ಎಲ್ಲಿಸ್ ಆಸೀಸ್ ಪರ ಎಂಟು ಏಕದಿನ ಹಾಗೂ 12 ಟಿ20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು 32 ವಿಕೆಟ್‌ ಕಬಳಿಸಿ ಮಿಂಚಿದ್ದಾರೆ.

Story first published: Monday, January 15, 2024, 22:47 [IST]
Other articles published on Jan 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+