ಆಸ್ಟ್ರೇಲಿಯಾ ಆಟಗಾರರು ಚಾರ್ಟರ್ಡ್ ಫ್ಲೈಟ್‌ನಲ್ಲಿ ಮಾಲ್ಡೀವ್ಸ್‌ಗೆ ಪ್ರಯಾಣ

ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರರಿಗೆ ಕಡೆಗೂ ನೆಮ್ಮದಿಯ ಸುದ್ದಿ ತಲುಪಿದೆ. ಆಸ್ಟ್ರೇಲಿಯಾದ ಎಲ್ಲಾ ಆಟಗಾರರು ತವರಿಗೆ ಪ್ರಯಾಣಿಸುವ ನಿಟ್ಟಿನಲ್ಲಿ ಬೆಳವಣಿಗೆಯಾಗಿದ್ದು ಮೊದಲಿಗೆ ಈ ಎಲ್ಲಾ ಆಟಗಾರರು ಮಾಲ್ಡೀವ್ಸ್‌ಗೆ ಪ್ರಯಾಣಿಸಲಿದ್ದಾರೆ. ಇದಕ್ಕಾಗಿ ಬಿಸಿಸಿಐ ಚಾರ್ಟರ್ಡ್ ಫ್ಲೈಟ್ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.
ಭಾರತದಲ್ಲಿ ಎರಡನೇ ಅಲೆಯ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ಭಾರತದಿಂದ ತೆರಳುವ ನಾಗರೀಕರ ಮೇಲೆ ಆಸ್ಟ್ರೇಲಿಯಾ ನಿರ್ಬಂಧವನ್ನು ವಿಧಿಸಿದೆ. ಹೀಗಾಗಿ ಭಾರತದಲ್ಲಿರುವ ಆಸ್ಟ್ರೇಲಿಯಾ ಮೂಲದ ಆಟಗಾರಿಗೆ ತವರಿಗೆ ಮರಳುವುದು ಕಠಿಣವಾಗಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆಯನ್ನು ಆಸ್ಟ್ರೇಲಿಯಾ ಮೂಲದ ಆಟಗಾರರು ಹಾಗೂ ಸಿಬ್ಬಂದಿಗಳಿಗೆ ಬಿಸಿಸಿಐ ಮಾಡಿಕೊಂಡಿದೆ.
ಕೆಕೆಆರ್ ತಂಡದ ಸಿಬ್ಬಂದಿಯೊಬ್ಬರು ಪಿಟಿಐಗೆ ಆಸ್ಟ್ರೇಲಿಯಾ ಆಟಗಾರರ ಪ್ರಯಾಣದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. "ಎಲ್ಲಾ ಆಸ್ಟ್ರೇಲಿಯನ್ನರು ಕೂಡ ದೆಹಲಿಯಲ್ಲಿ ಒಟ್ಟಾಗಿದ್ದು ಅಲ್ಲಿಂದ ಮಾಲ್ಡೀವ್ಸ್‌ಗೆ ಚಾರ್ಟರ್ಡ್ ವಿಮಾನದ ಮೂಲಕ ಪ್ರಯಾಣಿಸಲಿದ್ದಾರೆ" ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಲಿ ಕಾಮೆಂಟೇಟಲ್ ಮೈಕಲ್ ಸ್ಲೇಟರ್ ಅವರು ಐಪಿಎಲ್ ಬಯೋಬಬಲ್ ತೊರೆದು ಮಾಲ್ಡೀವ್ಸ್‌ಗೆ ಪ್ರಯಾಣವನ್ನು ಬೆಳೆಸಿದ್ದರು. ಈಗ ಉಳಿದ ಆಟಗಾರರು ಕೂಡ ಇದೇ ಹಾದಿ ಹಿಡಿದಂತಾಗುತ್ತದೆ. ಕೊರೊನಾ ವೈರಸ್ ಐಪಿಎಲ್ ಬಯೋಬಬಲ್‌ನ ಒಳಗೆ ಸ್ಪೋಟಗೊಂಡ ಕಾರಣ ಇದ್ದಕ್ಕಿಂತೆ ಐಪಿಎಲ್‌ಅನ್ನು ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications