Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಾಲ್ಡೀವ್ಸ್‌ನಲ್ಲಿರುವ ಆಸ್ಟ್ರೇಲಿಯಾ ಆಟಗಾರರು ಭಾನುವಾರ ಸಿಡ್ನಿಗೆ ಪ್ರಯಾಣ ಸಾಧ್ಯತೆ

Australian cricketers, support staff may leave for Sydney in chartered plane on Sunday

ಕೊರೊನಾ ವೈರಸ್‌ನ ಕಾರಣದಿಂದಾಗಿ ಐಪಿಎಲ್ ಮುಂದೂಡಿಕೆಯಾದ ನಂತರ ಮಾಲ್ಡೀವ್ಸ್‌ಗೆ ತೆರಳಿರುವ ಆಸ್ಟ್ರೇಲಿಯಾ ಆಟಗಾರರು ಕಡೆಗೂ ತಮ್ಮ ತವರಿಗೆ ಮರಳಲು ಪೂರಕ ಬೆಳವಣಿಗೆಗಳು ನಡೆಯುತ್ತಿದೆ. ಮಾಲ್ಡೀವ್ಸ್‌ನಲ್ಲಿರುವ ಆಸ್ಟ್ರೇಲಿಯಾದ ಎಲ್ಲಾ ಆಟಗಾರರು ಹಾಗೂ ಇತರ ಸಿಬ್ಬಂದಿಗಳು ಚಾರ್ಟರ್ಡ್ ಫ್ಲೈಟ್ ಮೂಲಕ ಭಾನುವಾರ ಸಿಡ್ನಿಗೆ ಪ್ರಯಾಣಿಸುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್, ರಿಕಿ ಪಾಂಟಿಂಗ್, ಮೈಕಲ್ ಸ್ಲೇಟರ್ ಮತ್ತು ಇತರ ಆಟಗಾರರು ಹಾಗೂ ಸಿಬ್ಬಂದಿಗಳು ಮಾಲ್ಡೀವ್ಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಐಪಿಎಲ್ ಟೂರ್ನಿಯನ್ನು ಮುಂದೂಡಿದ ನಂತರ ಈ ಎಲ್ಲ ಆಟಗಾರರು ಮಾಲ್ಡೀವ್ಸ್‌ಗೆ ವಾಸ್ತವ್ಯಕ್ಕೆ ತೆರಳಿದ್ದರು.

ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣ ತೀವ್ರವಾಗಿ ಹೆಚ್ಚಾಗುತ್ತಿದ್ದ ಕಾರಣ ಆಸ್ಟ್ರೇಲಿಯಾ ಸರ್ಕಾರ ಭಾರತದಿಂದ ತೆರಳುವ ಎಲ್ಲಾ ವಿಮಾನಗಳನ್ನು ರದ್ದು ಪಡಿಸಿತ್ತು. ಜೊತೆಗೆ ಪ್ರಯಾಣಿಕರಿಗೂ ಸಂಪೂರ್ಣ ನಿರ್ಬಂಧವನ್ನು ವಿಧಿಸಿತ್ತು. ಈ ಕಾರಣದಿಂದಾಗಿ ಆಸಿಸ್ ಆಟಗಾರರು ತವರಿಗೆ ಮರಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಭಾರತಿಂದ ಮಾಲ್ಡೀವ್ಸ್‌ಗೆ ಪ್ರಯಾಣಿಸಿದ್ದರು.

ಆಸ್ಟ್ರೇಲಿಯಾ ಸರ್ಕಾರ ಈ ಕಠಿಣ ನಿರ್ಬಂಧ ಮೇ 15ರ ವರೆಗೆ ಮುಂದುವರಿಯಲಿದೆ. ಅದಾದ ನಂತರ ಇತರ ಪ್ರಯಾಣಿಕರಿಗೆ ಈ ನಿರ್ಬಂಧ ಮುಂದುವರಿಯುವ ಸಾಧ್ಯತೆಯಿದ್ದರೂ ತನ್ನದೇ ರಾಷ್ಟ್ರದ ಪ್ರಯಾಣಿಕರಿಗೆ ತವರಿಗೆ ಮರಳಲು ಅನುವು ಮಾಡಿಕೊಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆಸ್ಟ್ರೇಲಿಯಾ ಆಟಗಾರರು ತವರಿಗೆ ಮರಳಲು ಸಿದ್ಧತೆಯನ್ನು ನಡೆಸುತ್ತಿದ್ದಾರೆ.

Story first published: Thursday, May 13, 2021, 16:01 [IST]
Other articles published on May 13, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+