45 ವರ್ಷಗಳ ಸುದೀರ್ಘ ಕಾಮೆಂಟರಿ ವೃತ್ತಿ ಬದುಕಿಗೆ ವಿದಾಯ ಹೇಳಿದ ಇಯಾನ್ ಚಾಪೆಲ್

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಇಯಾನ್ ಚಾಪೆಲ್ ಸುದೀರ್ಘ ಕಾಲದ ಕಾಮೆಂಟೇಟರಿ ವೃತ್ತಿ ಬದುಕಿಗೆ ನಿವೃತ್ತಿ ಹೇಳುವ ನಿರ್ಧಾರ ಮಾಡಿದ್ದಾರೆ. ಕಳೆದ 45 ವರ್ಷಗಳಿಂದ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸಿರುವ ಇಯಾನ್ ಚಾಪೆಲ್ ತಮ್ಮ ವಿಶ್ಲೇಷಣೆಗಳಿಂದ ಜಗತ್ತಿನಾದ್ಯಂತ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಸದ್ಯ 78ರ ಹರೆಯದ ಇಯಾನ್ ಚಾಪೆಲ್ ಆಸ್ಟ್ರೇಲಿಯಾ ತಂಡವನ್ನು ನಾಯಕನಾಗಿಯೂ ಮುನ್ನಡೆಸಿದ ಅನುಭವ ಹೊಂದಿದ್ದಾರೆ.
ಆಸ್ಟ್ರೇಲಿಯಾ ತಂಡದ ಪರವಾಗಿ 75 ಟೆಸ್ಟ್ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ ಇಯಾನ್ ಚಾಪೆಲ್. ನಿವೃತ್ತಿಯ ಬಳಿಕ ಕಾಮೆಂಟೇಟರ್ ಆಗಿ ಕರ್ತವ್ಯವನ್ನು ಆರಂಭಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 5345 ರನ್‌ಗಳಿಸಿರುವ ಇಯಾನ್ ಚಾಪೆಲ್ ನಿವೃತ್ತಿಯನ್ನು ಘೋಷಣೆ ಮಾಡಿದ ಬಳಿಕ 1977ರಲ್ಲಿ ಮೊದಲ ಬಾರಿಗೆ ಮೈಕ್ ಹಿಡಿದು ಕಾಮೆಂಟರಿ ಹೇಳಲು ಆರಂಭಿಸಿದ್ದರು.
ಇನ್ನು ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಕಾಮೆಂಟೇಟರ್ ಆಗಿ ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳನ್ನು ಸ್ಮರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಕಾಮೆಂಟೇಟರ್ ಆಗಿ ತಮ್ಮ ವೃತ್ತಿ ಜೀವನ ಆರಂಭದಲ್ಲಿಯೇ ಅಂತ್ಯಗೊಳ್ಳುವ ಸಾಧ್ಯತೆಯಿತ್ತು ಎಂಬ ಅಂಶವನ್ನು ಹೇಳಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಧ್ಯಮದ ಖ್ಯಾತ ಉದ್ಯಮಿ ಕೆರಿ ಪ್ಯಾಕರ್ ಅವರ ವರ್ತನೆಯಿಂದಾಗಿ ಅಂಥಾ ಸಂದರ್ಭ ಬಂದಿತ್ತು ಎಂದಿದ್ದಾರೆ ಇಯಾನ್ ಚಾಪೆಲ್.
" ಕಾಮೆಂಟೇಟರ್ ಆಗಿ ನನ್ನ ವೃತ್ತಿ ಜೀವನದ ಆರಂಭಿಕ ಹಂತದಲ್ಲಿಯೇ ಒಂದೆರಡು ಬಾರಿ ಕೆರಿ ನನ್ನನ್ನು ಕಿತ್ತೆಸೆಯಲು ಬಯಸಿದ್ದರು. ಅವರು ಏಕದಿನ ಕ್ರಿಕೆಟ್‌ನ ಬಗ್ಗೆ ಮಾತ್ರವೇ ತಲೆಕೆಡಿಸಿಕೊಳ್ಳುತ್ತಿದ್ದರು. ಯಾಕೆಂದರೆ ಅದು ಅವರ ಮಗುವಾಗಿತ್ತು. ಕೆರಿ ಇರುವವರೆಗೆ ಕೂಡ ಏಕದಿನ ಕ್ರಿಕೆಟ್‌ನ ಅಬ್ಬರ ಅತ್ಯಂತ ಜೋರಾಗಿಯೇ ಇತ್ತು" ಎಂದಿದ್ದಾರೆ ಇಯಾನ್ ಚಾಪೆಲ್.
ಇನ್ನು ಈ ಸಂದರ್ಭದಲ್ಲಿ ಸುದೀರ್ಘ ಕಾಲದಿಂದ ತಮ್ಮ ಕಾಮೆಂಟರಿ ಕೇಳುತ್ತಿದ್ದ ಪ್ರೇಕ್ಷಕರು ಯಾವ ರೀತಿಯ ಅಭಿಪ್ರಾಯವನ್ನು ಹೊಂದಿದ್ದರು ಎಂಬುದನ್ನು ಕೂಡ ಹೇಳಿಕೊಂಡಿದ್ದಾರೆ ಇಯಾನ್ ಚಾಪೆಲ್. ಕೇಲುಗಳು ತನ್ನನ್ನು ಕಿವಿಗೆ ನೋವುಂಟು ಮಾಡುವ ವ್ಯಕ್ತಿಯಾಗಿ ನೆನಪಿಸಿಕೊಳ್ಳಬಹುದು ಎಂದಿದ್ದಾರೆ ಇಯಾನ್ ಚಾಪೆಲ್. ಆದರೆ ತಾನು ಕಾಮೆಂಟರಿ ಹೇಳ ಬಲ್ಲೆ ಎಂಬುದನ್ನು ಕ್ರಿಕೆಟ್ ಆಡುತ್ತಿದ್ದಾಲೇ ಯೋಚನೆ ಮಾಡಿದ್ದೆ ಎಂಬ ಸಂಗತಿಯನ್ನು ಕೂಡ ಇಯಾನ್ ಚಾಪೆಲ್ ವಿವರಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಚಾಪೆಲ್ ಕಳವಳ: ಇನ್ನು ಈ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ವಿಶ್ವಾದ್ಯಂತ ಫ್ರಾಂಚೈಸಿ ಕ್ರಿಕೆಟ್‌ಗಳ ಭರಾಟೆ ಜೋರಾಗಿದೆ. ಈ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್ ಯಾವ ರೀತಿಯಾಗಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಇಯಾನ್ ಚಾಪೆಲ್ ಪ್ರಶ್ನಿಸಿದರು. ಆದರೆ ತನ್ನ ಜೀವಿತಾವಧಿಯಲ್ಲಿ ಟೆಸ್ಟ್ ಕ್ರಿಕೆಟ್ ಸಾಯುವುದಿಲ್ಲ ಎಂಬ ಮಾತನ್ನು ಆಡಿದ್ದಾರೆ.
"ಆಟಗಾರರು ಈಗ ಟಿ20 ಕ್ರಿಕೆಟ್ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರೆ. ಅದಕ್ಕೆ ಕಾರಣ ಅದರಿಂದಾಗಿ ಹಣವನ್ನು ಗಳಿಸಬಹುದು. ಟೆಸ್ಟ್ ಕ್ರಿಕೆಟ್ ನನ್ನ ಜೀವಿತಾವಧಿಯಲ್ಲಿ ಸಾಯುವುದಿಲ್ಲ. ಆದರೆ ಅದನ್ನು ಆಡೋರು ಯಾರು? ಅದು ಈಗ ಇರುವ ದೊಡ್ಡ ಪ್ರಶ್ನೆಯಾಗಿದೆ" ಎಂದಿದ್ದಾರೆ ಇಯಾನ್ ಚಾಪೆಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications