ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್ ಸ್ಪಿನ್‌ ದಂತಕತೆ ಶೇನ್ ವಾರ್ನ್‌ 1 ವರ್ಷ ವಾಹನ ಓಡಿಸುವಂತಿಲ್ಲ!

Australian great Shane Warne banned from driving

ಲಂಡನ್, ಸೆಪ್ಟೆಂಬರ್ 24: ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್ ಇನ್ನು 1 ವರ್ಷದ ಕಾಲ ವಾಹನ ಚಾಲನೆ ಮಾಡುವಂತಿಲ್ಲ. ಅತಿವೇಗದ ಚಾಲನೆಗಾಗಿ ವಾರ್ನ್ ವರ್ಷದ ಚಾಲನಾ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಇಂಗ್ಲೆಂಡ್‌ನ ಲಂಡನ್‌ನಲ್ಲಿರುವ ವಿಂಬಲ್ಡನ್ ಮ್ಯಾಜಿಸ್ಟ್ರೇಟರ್ ಕೋರ್ಟ್ ವಾರ್ನ್‌ಗೆ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.

ಪ್ರೊ ಕಬಡ್ಡಿ: ದಬಾಂಗ್ ಡೆಲ್ಲಿ-ಬೆಂಗಳೂರು ಬುಲ್ಸ್ ರೋಚಕ ಪಂದ್ಯ ಸಮಬಲ!ಪ್ರೊ ಕಬಡ್ಡಿ: ದಬಾಂಗ್ ಡೆಲ್ಲಿ-ಬೆಂಗಳೂರು ಬುಲ್ಸ್ ರೋಚಕ ಪಂದ್ಯ ಸಮಬಲ!

ಜಾಗ್ವಾರ್ ಕಾರು ಬಾಡಿಗೆ ಪಡೆದಿದ್ದ ಶೇನ್ ವಾರ್ನ್ ಲಂಡನ್‌ನ ಕೆನ್ಸಿಂಗ್ಟನ್‌ನಲ್ಲಿ 40mph ವೇಗದ ಮಿತಿಯನ್ನು ಮೀರಿ ಕಾರು ಚಾಲಾಯಿಸಿದ್ದರು. ಇದೊಂದೇ ಅಲ್ಲ, ಈ ಹಿಂದೆಯೂ ಐದುಬಾರಿ ವೇಗದ ಮಿತಿ ಮೀರಿ ವಾಹನ ಚಾಲನೆ ಮಾಡಿದ್ದ ದೂರು ವಾರ್ನ್ ಮೇಲಿತ್ತು.

ಅನುಚಿತ ವರ್ತನೆ: ವಿರಾಟ್‌ ಕೊಹ್ಲಿಗೆ ನಕಾರಾತ್ಮಕ ಅಂಕ ನೀಡಿದ ಐಸಿಸಿ!ಅನುಚಿತ ವರ್ತನೆ: ವಿರಾಟ್‌ ಕೊಹ್ಲಿಗೆ ನಕಾರಾತ್ಮಕ ಅಂಕ ನೀಡಿದ ಐಸಿಸಿ!

ಆಗಸ್ಟ್ 23ರಂದು ಮುಂಜಾನೆ 6.29am ಹೊತ್ತಿಗೆ ಶೇನ್ ವಾರ್ನ್ ಅತೀ ವೇಗವಾಗಿ ಕಾರು ಚಲಾಯಿಸಿದ್ದರು. ಮಾಪನದಲ್ಲಿ 47mph ವೇಗ ದಾಖಲಾಗಿತ್ತು. ವೇಗದ ಮಿತಿ ಮೀರಿ ವಾಹನ ಚಾಲನೆ ಮಾಡಿ ಈಗಾಗಲೇ ವಾರ್ನ್ 15 ಪೆನಾಲ್ಟಿ ಪಾಯಿಂಟ್‌ ಹೊಂದಿದ್ದಾರೆ. ಹೀಗಾಗಿ ಈ ಬಾರಿ ವಾಹನ ಚಾಲನಾ ನಿಷೇಧ ಶಿಕ್ಷೆ ವಿಧಿಸಲಾಗಿದೆ.

ಡ್ರೆಸ್ಸಿಂಗ್ ರೂಮ್‌ನಲ್ಲಿ ಕೊಹ್ಲಿ ಪ್ರಭಾವದ ಬಗ್ಗೆ ಮಾತನಾಡಿದ ಹನುಮ ವಿಹಾರಿ!ಡ್ರೆಸ್ಸಿಂಗ್ ರೂಮ್‌ನಲ್ಲಿ ಕೊಹ್ಲಿ ಪ್ರಭಾವದ ಬಗ್ಗೆ ಮಾತನಾಡಿದ ಹನುಮ ವಿಹಾರಿ!

53ರ ಹರೆಯದ ವಾರ್ನ್‌ಗೆ 1 ವರ್ಷದ ಚಾಲನಾ ನಿಷೇಧ ವಿಧಿಸಿರುವುದಷ್ಟೇ ಅಲ್ಲ, ಸುಮಾರು 1,62,000 ರೂ. ದಂಡ ಕೂಡ ವಿಧಿಸಲಾಗಿದೆ. ಆಸ್ಟ್ರೇಲಿಯಾ ಪರ ವಾರ್ನ್ ಟೆಸ್ಟ್‌ನಲ್ಲಿ 273 ಇನ್ನಿಂಗ್ಸ್‌ಗಳಲ್ಲಿ 708 ವಿಕೆಟ್, 191 ಏಕದಿನ ಇನ್ನಿಂಗ್ಸ್‌ಗಳಲ್ಲಿ 293 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Monday, September 23, 2019, 23:17 [IST]
Other articles published on Sep 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X