For Quick Alerts
ALLOW NOTIFICATIONS  
For Daily Alerts
 

ಆತ ಭವಿಷ್ಯದ ಸೂಪರ್ ಸ್ಟಾರ್: ಯುವ ಆಟಗಾರನಿಗೆ ಟೆಸ್ಟ್‌ನಲ್ಲಿ ಅವಕಾಶ ನೀಡುವಂತೆ ಬ್ರೆಟ್ ಲೀ ಮನವಿ

Australian legend Brett Lee said Umran Malik should make Test debut for India

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಅಹ್ಮದಾಬಾದ್‌ನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯದಲ್ಲಿ ಆಡುತ್ತಿರುವ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಡುವ ಬಳಗದ ಬಗ್ಗೆ ಆಸಿಸ್ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಪ್ರತಿಕ್ರಿಯಿಸಿದ್ದಾರೆ. ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಭಾರತದ ಭವಿಷ್ಯ ವೇಗದ ಬೌಲಿಂಗ್ ಸೂಪರ್ ಸ್ಟಾರ್‌ಗೆ ಅವಕಾಶ ನೀಡಬೇಕು ಎಂದಿದ್ದಾರೆ ಆಸಿಸ್ ದಿಗ್ಗಜ ಬ್ರೆಟ್ ಲೀ.

ಅಂದಹಾಗೆ ಬ್ರೆಟ್ ಲೀ ಹೇಳಿದ ಆ ಆಟಗಾರ ಬೇರೆ ಯಾರೂ ಅಲ್ಲ. ಯುವ ವೇಗದ ಬೌಲರ್ ಉಮ್ರಾನ್ ಮಲಿಕ್ ವಿಚಾರವಾಗಿಯೇ ಬ್ರೆಟ್ ಲೀ ಮಾತನಾಡಿದ್ದಾರೆ. ಐಪಿಎಲ್‌ನಲ್ಲಿ ತನ್ನ ಘಾತಕ ವೇಗದಿಂದ ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದಿದ್ದ ಉಮ್ರಾನ್ ಬಳಿಕ ಟೀಮ್ ಇಂಡಿಯಾ ವೈಟ್‌ಬಾಲ್ ತಂಡಕ್ಕೂ ಕಾಲಿಟ್ಟಿದ್ದಾರೆ. ಇದೀಗ ಭಾರತದ ಟೆಸ್ಟ್ ತಂಡಕ್ಕೂ ಉಮ್ರಾನ್ ಮಲಿಕ್ ಪದಾರ್ಪಣೆ ಮಾಡಿದರೆ ಅದರಿಂದ ಭಾರತ ತಂಡಕ್ಕೆ ಖಂಡಿತಾ ಲಾಭವಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ ಆಸಿಸ್ ಮಾಜಿ ವೇಗಿ.

"ನನ್ನ ಪ್ರಕಾರ ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಬೇಕಿರುವ ಎಲ್ಲಾ ಅರ್ಹತೆಯಗಳು ಕೂಡ ಆತನಲ್ಲಿದೆ. ಆತ ಭವಿಷ್ಯದ ಸೂಪರ್ ಸ್ಟಾರ್ ಎನಿಸಬಲ್ಲ ಆಟಗಾರ. ಆತನಲ್ಲಿ ಅದ್ಭುತ ವೇಗವಿದೆ, ಆತನ ಬೌಲಿಂಗ್ ಶೈಲಿಯೂ ಅದ್ಭುತವಾಗಿದೆ. ಅಲ್ಲದೆ ಆತನ ದಾಳಿಯೂ ಸಕಾರಾತ್ಮಕವಾಗಿದೆ. ಹಾಗಾಗಿ ಭಾರತ ಟೆಸ್ಟ್ ತಂಡದಲ್ಲಿ ಆತ ಸ್ಥಾನ ಪಡೆಯಲು ಅರ್ಹ ಆಟಗಾರ" ಎಂದಿದ್ದಾರೆ ಬ್ರೆಟ್ ಲೀ. ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಭಾಗುವಹಿಸಿರುವ ಬ್ರೆಟ್ ಲೀ ದೋಹಾದಲ್ಲಿ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಅನಿಸಿಕೆ ಹಂಚಿಕೊಂಡಿದ್ದಾರೆ.

ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಗಾಯದ ಕಾರಣದಿಂದಾಗಿ ಸುದೀರ್ಘ ಕಾಲ ದೂರವಿದ್ದು ಇನ್ನೂ ಕೆಲ ತಿಂಗಳುಗಳ ಕಾಲ ಬೂಮ್ರಾ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವುದು ಅಸಾಧ್ಯವಾಗಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ, ಏಷ್ಯಾ ಕಪ್‌ನಂಥಾ ಟೂರ್ನಿಯಲ್ಲಿ ಬೂಮ್ರಾ ಕಣಕ್ಕಿಳಿಯುವುದಿಲ್ಲ. ಇನ್ನು ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿಯೂ ಬೂಮ್ರಾ ಭಾಗವಹಿಸುವುದು ಅಸ್ಪಷ್ಟವಾಗಿದೆ. ಹೀಗಾಗಿ ಟೀಮ್ ಇಂಡಿಯಾದ ಉಮ್ರಾನ್ ಮಲಿಕ್ ಅವರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರೆಟ್ ಲೀ.

ಇನ್ನು ಯುವ ವೇಗಿ ಉಮ್ರಾನ್ ಮಲಿಕ್ ಕಳೆದ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. 2022ರ ಐಪಿಎಲ್ ಆವೃತ್ತಿಯಲ್ಲಿ ಅವರು 22 ವಿಕೆಟ್ ಪಡೆದು ಗಮನಸೆಳೆದಿದ್ದರು. ಅದಾದ ಬಳಿಕ ಭಾರತ ಟಿ20 ತಂಡಕ್ಕೆ ಪದಾರ್ಪಣೆ ಮಾಡಿದ ಮಲಿಕ್, ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಚೊಚ್ಚಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡರು.

Story first published: Monday, March 13, 2023, 12:43 [IST]
Other articles published on Mar 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+