For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದ ದಿಗ್ಗಜ ವಿಕೆಟ್ ಕೀಪರ್ ರಾಡ್ ಮಾರ್ಶ್ ಹೃದಯಾಘಾತದಿಂದ ನಿಧನ

Australian legendary wicketkeeper batter Rod Marsh died at 74

ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಆಟಗಾರ ದಿಗ್ಗಜ ವಿಕೆಟ್ ಕೀಪರ್ ಎನಿಸಿಕೊಮಡಿದ್ದ ರಾಡ್ ಮಾರ್ಶ್ ನಿಧನರಾಗಿದ್ದಾರೆ. ವಾರದ ಹಿಂದೆ ಅವರು ಕ್ವೀನ್ಸ್‌ಲ್ಯಾಂಡ್‌ನಲ್ಲಿ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅದಾಗಲೇ ರಾಡ್ ಮಾರ್ಶ್ ಕೋಮಾಗೆ ಜಾರಿದ್ದರು. ಒಂದು ವಾರಗಳ ಬಳಿಕ ಶುಕ್ರವಾರ ರಾಡ್ ಮಾರ್ಶ್ ನಿಧನರಾಗಿದ್ದಾರೆ.

ರಾಡ್ ಮಾರ್ಶ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರವಾಗಿ 1970 ಹಾಗೂ 1980ರ ಅವಧಿಯಲ್ಲಿ ಸೇವೆಸಲ್ಲಿಸಿದ್ದಾರೆ. 96 ಟೆಸ್ಟ್ ಪಂದ್ಯಗಳು ಹಾಗೂ 92 ಏಕದಿನ ಮಾದರಿಯಲ್ಲಿ ಮಾರ್ಶ್ ತಮ್ಮ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಸಾಧನೆ ಮಾಡಿದ್ದಾರೆ. ವಿಕೆಟ್ ಕೀಪರ್ ಆಗಿ ಮಾರ್ಶ್ ಟೆಸ್ಟ್ ಕ್ರಿಕೆಟ್‌ನಲ್ಲಿ 355 ಬಲಿ ಪಡೆದಿರುವುದು ಅವರ ಮಹತ್ವದ ಸಾಧನೆಯಾಗಿದೆ. 1984ರಲ್ಲಿ ರಾಡ್ ಮಾರ್ಶ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಎಡಗೈ ಆಟಗಾರನಾಗಿದ್ದ ಮಾರ್ಶ್ ಆಸ್ಟ್ರೇಲಿಯಾ ಪರವಾಗಿ ಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡಿದ್ದರು. ನಿವೃತ್ತಿಯ ಸಂದರ್ಭದಲ್ಲಿ ಅವರು ಮೂರು ಶತಕಗಳನ್ನು ಗಳಿಸಿದ್ದರು.

ಇನ್ನು 2014ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಯ್ಕೆಮಂಡಳಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು ರಾಡ್ ಮಾರ್ಶ್. ಸುಮಾರು ಎರಡು ವರ್ಷಗಳ ಕಾಲ ಅವರು ಈ ಸ್ಥಾನದಲ್ಲಿ ಮುಂದುವರಿದಿದ್ದರು. 1985ರಲ್ಲಿ ಸ್ಪೋರ್ಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್ ಗೌರವಕ್ಕೆ ರಾಡ್ ಮಾರ್ಶ್ ಅವರನ್ನು ಸೇರ್ಪಡೆಗೊಳಿಸಿತ್ತು.

1970ರ ನವೆಂಬರ್‌ನಲ್ಲಿ ರಾಡ್ ಮಾರ್ಶ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಸುಮಾರು 13 ವರ್ಷಗಳ ವೃತ್ತಿ ಜೀವನದಲ್ಲಿ ಮಾರ್ಶ್ 96 ಟೆಸ್ಟ್ ಪಂದ್ಯಗಳಲ್ಲಿ 26.51ರ ಸರಾಸರಿಯಲ್ಲಿ 3633 ರನ್‌ಗಳಿಸಿದ್ದಾರೆ. ಮೂರು ಶತಕ ಹಾಗೂ 16 ಶತಕಗಳು ಮಾರ್ಶ್ ಹೆಸರಿನಲ್ಲಿ ದಾಖಲಾಗಿದೆ. ವಿಕೆಟ್ ಕೀಪರ್ ಆಗಿ ಟೆಸ್ಟ್ ಕ್ರಿಕೆಟ್‌ನಲ್ಲಿ 355 ಬಲಿ ಪಡೆದಿದ್ದರೆ ಎಕದಿನ ಕ್ರಿಕೆಟ್‌ನಲ್ಲಿ 124 ಬಲಿ ಪಡೆದಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚ ಬಲಿ ಪಡೆದ ವಿಕೆಟ್ ಕೀಪರ್‌ಗಳ ಪಟ್ಟಿಯಲ್ಲಿ ಮಾರ್ಶ್ ಇಗಲೂ ನಾಲ್ಕನೇ ಸ್ಥಾನದಲ್ಲಿದ್ದಾರೆ. 555 ಬಲಿ ಪಡೆದಿರುವ ಬೌಷರ್ ಮೊದಲ ಸ್ಥಾನದಲ್ಲಿದ್ದರೆ 416 ಬಲಿ ಪಡೆದಿರುವ ಗಿಲ್‌ಕ್ರಿಸ್ಟ್ ಎರಡನೇ ಸ್ಥಾನದಲ್ಲಿ ಹಾಗೂ ಇಯಾನ್ ಹೀಲಿ 395 ಔಟ್‌ಗಳಿಗೆ ಕಾರಣವಾಗಿದ್ದಾರೆ. ಟೆಸ್ಟ್ ಇನ್ನಿಂಗ್ಸ್‌ವೊಂದರಲ್ಲಿ 6 ಔಟ್‌ಗೆ ಕಾರಣವಾಗಿರುವುದು ರಾಡ್ ಮಾರ್ಡ್ ದಾಖಲೆಯಾಗಿದೆ.

ಇನ್ನು ದಿಗ್ಗಜ ಕ್ರಿಕೆಟಿಗ ರಾಡ್ ಮಾರ್ಶ್ ಅಗಲಿಕೆಗೆ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ. ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರನಿ ಆರಂಬವಾಗಿದ್ದು ಈ ಪಂದ್ಯದ ಆರಂಭಕ್ಕೂ ಮುನ್ನ ಎರಡೂ ತಂಡಗಳ ಆಟಗಾರರು ಅಗಲಿದ ಮಾಜಿ ಕ್ರಿಕೆಟಿಗನಿಗೆ ಮೌನ ಪ್ರಾರ್ಥನೆ ಸಲ್ಲಿಸಿದರು.

Story first published: Friday, March 4, 2022, 11:54 [IST]
Other articles published on Mar 4, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+