Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸ್ಟ್ರೇಲಿಯಾ: ಬಾಕ್ಸಿಂಗ್ ಡೇ ಟೆಸ್ಟ್‌ಗೆ ಬರ್ನ್ಸ್‌ ಲಭ್ಯ, ವಿಲ್ ಪುಕೋವ್ಸ್ಕಿ ಹೊರಕ್ಕೆ

Australian opener Joe Burns cleared for Boxing Day Test: Will Pucovski ruled out

ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಜೋ ಬರ್ನ್ಸ್ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಲಭ್ಯವಾಗುವುದು ಭಾನುವಾರ ಖಚಿತವಾಗಿದೆ. ಬಾರತದ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬರ್ನ್ಸ್‌ ಗಾಯಗೊಂಡಿದ್ದರು. ಆದರೆ ಇನ್ನೋರ್ವ ಯುವ ಆರಂಭಿಕ ಆಟಗಾರ ವಿಲ್ ಪುಕೋವ್ಸ್ಕಿ ಎರಡನೇ ಪಂದ್ಯದಿಂದಲೂ ಹೊರಬಿದ್ದಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಅವರ ತಲೆಗೆ ಚೆಂಡು ಬಡಿದಿತ್ತು.

ಜಸ್ಪ್ರೀತ್ ಬೂಮ್ರಾ ಅವರ ಎಸೆತದಲ್ಲಿ ಜೋ ಬರ್ನ್ಸ್ ಶನಿವಾರದಂದು ಏಟನ್ನು ತಿಂದಿದ್ದರು. ಬೂಮ್ರಾ ಎಸೆತ ಬರ್ನ್ಸ್‌ ಅವರ ಮೊಣಕೈಗೆ ಬಡಿದು ಭಾರೀ ನೋವು ಅನುಭವಿಸಿದ್ದರು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 8 ವಿಕೆಟ್‌ಗಳಿಂದ ಮಣಿಸಿ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.

ಆಸ್ಟ್ರೇಲಿಯಾ ತಂಡದಲ್ಲಿ ಸಾಕಷ್ಟು ಆಟಗಾರರು ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಬರ್ನ್ಸ್‌ ಬಗ್ಗೆಯೂ ಆಸಿಸ್ ಪಾಳಯದಲ್ಲಿ ಆತಂಕ ಮೂಡಿಸಿತ್ತು. ಆದರೆ ಸ್ಕ್ಯಾನಿಂಗ್ ವರದಿ ಲಭ್ಯವಾಗಿದ್ದು ಬರ್ನ್ಸ್ ಕೈಗೆ ಯಾವುದೇ ಗಂಭೀರ ಏಟುಗಳು ಆಗಿಲ್ಲ ಎಂಬುದು ದೃಢಪಟ್ಟಿದೆ.

ಮತ್ತೊಂದೆಡೆ ಯುವ ಆಟ ಪುಕೋವ್ಸ್ಕಿಗೆ 9ನೇ ಬಾರಿಗೆ ಕನ್ಕುಶನ್ ನಡೆಸಲಾಗಿದ್ದು ಇನ್ನೂ ಚೇತರಿಕೆಯ ಹಂತದಲ್ಲಿದ್ದಾರೆ. ಡೇವಿಡ್ ವಾರ್ನರ್ ಬದಲಿಗೆ ಮೊದಲ ಟೆಸ್ಟ್‌ನಲ್ಲಿ ಪುಕೋವ್ಸಕಿ ಕಣಕ್ಕಿಳಿಯುವ ಮೂಲಕ ಟೆಸ್ಟ್‌ಗೆ ಆಸಿಸ್ ಪರವಾಗಿ ಪದಾರ್ಒಣೆ ಮಾಡಲು ಸಿದ್ಧರಾಗಿದ್ದರು. ಆದರೆ ಮೊದಲ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಚೆಂಡು ತಲೆಗೆ ಬಡಿದು ಕನ್ಕುಶನ್‌ಗೆ ಒಳಗಾಗಿದ್ದರು.

ಮತ್ತೊಂದೆಡೆ ಡೇವಿಡ್ ವಾರ್ನರ್ ಎರಡನೇ ಟೆಸ್ಟ್ ಪಂದ್ಯವನ್ನು ಆಡಲು ಸಿದ್ಧರಾಗಿದ್ದಾರೆ. ಸಿಡ್ನಿಯಲ್ಲಿ ಕೊರೊನಾ ವೈರಸ್ ತೀವ್ರವಾದ ಕಾರಣ ನಿಗದಿಗಿಂತ ಮುನ್ನವೇ ವಾರ್ನರ್ ಬಾಕ್ಸಿಂಗ್ ಡೇ ಟೆಸ್ಟ್ ನಡೆಯುವ ಮೆಲ್ಬೋರ್ನ್‌ಗೆ ತೆರಳಿದ್ದಾರೆ. ಡಿಸೆಂಬರ್ 26ರಿಂದ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.

Story first published: Monday, December 21, 2020, 10:14 [IST]
Other articles published on Dec 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+