ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಜಾನ್ಸನ್
ಪರ್ತ್, ನ.17: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳುವುದಾಗಿ ಮಂಗಳವಾರ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್ ಘೋಷಿಸಿದ್ದಾರೆ.
34ವರ್ಷ ವಯಸ್ಸಿನ ಜಾನ್ಸನ್ ಅವರು ಆಸೀಸ್ ನ ಹಿರಿಯ ಆಟಗಾರರು ಹಿಡಿದ ಹಾದಿಯಲ್ಲೇ ಸಾಗುತ್ತಾ ಕಿರಿಯರಿಗೆ ಅವಕಾಶ ಸಿಗಲಿ ಎಂದು ಬಯಸಿದ್ದಾರೆ. ಕ್ರಿಕೆಟ್ ವೃತ್ತಿಗೆ ವಿದಾಯ ಹೇಳಲು ಇದು ಸಕಾಲ ಎಂದು ಜಾನ್ಸನ್ ಅವರು ವಾಕಾದಲ್ಲಿ ಹೇಳಿದ್ದಾರೆ.

ಇತ್ತೀಚಿನ ಆಷ್ಯಸ್ ಸರಣಿ ನಂತರ ಮೈಕಲ್ ಕ್ಲಾರ್ಕ್, ಬ್ರಾಡ್ ಹಡೀನ್, ರಿಯಾನ್ ಹ್ಯಾರಿಸ್, ಕ್ರಿಸ್ ರೋಜರ್ಸ್ ಹಾಗೂ ಶೇನ್ ವಾಟ್ಸನ್ ನಿವೃತ್ತಿ ಹೊಂದಿದ ನಂತರ ಮಿಚೆಲ್ ಜಾನ್ಸನ್ ಅವರು ಅವರ ಸಾಲಿಗೆ ಸೇರಿದ್ದಾರೆ.
ಕಿವೀಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 157 ರನ್ನಿತ್ತು 1 ವಿಕೆಟ್ ಮಾತ್ರ ಪಡೆದಿದ್ದಾರೆ. ಆಸ್ಟ್ರೇಲಿಯಾ ವೇಗಿಗಳ ಪಟ್ಟಿಯಲ್ಲಿ ಶೇನ್ ವಾರ್ನ್ (708), ಗ್ಲೆನ್ ಮೆಗ್ರಾ (563), ಡೆನ್ನಿಸ್ ಲಿಲ್ಲಿ (355) ಸಾಲಿನಲ್ಲಿ 311 ವಿಕೆಟ್ ಪಡೆದು ಜಾನ್ಸನ್ ಸೇರಿದ್ದಾರೆ.
2001ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಹಾಗೂ 2007ರಲ್ಲಿ ಮೊದಲ ಟೆಸ್ಟ್ ಪಂದ್ಯವಾಡಿದ್ದ ಜಾನ್ಸನ್ ಅವರು ದಕ್ಷಿಣ ಅಫ್ರಿಕಾ ವಿರುದ್ಧ 2008ರಲ್ಲಿ 61ರನ್ನಿತ್ತು 8 ವಿಕೆಟ್ ಪಡೆದು ಶ್ರೇಷ್ಠ ಪ್ರದರ್ಶನ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications