ಕೊಹ್ಲಿ ಎಂತಹ ನಾಯಕ ಎಂಬುದು ಐಪಿಎಲ್ ವೇಳೆಯೇ ತಿಳಿದಿತ್ತು: ಸ್ಟಾರ್ಕ್


ಮೆಲ್ಬರ್ನ್, ಡಿಸೆಂಬರ್ 24: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂಥವರು ಎಂಬುದನ್ನು ಆಸ್ಟ್ರೇಲಿಯಾ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಅವರು ಐಪಿಎಲ್ ವೇಳೆಯೇ ತಿಳಿದಿದ್ದಾರಂತೆ. ಕೊಹ್ಲಿ ಬಗ್ಗೆ ಸ್ಟಾರ್ಕ್ ಸೋಮವಾರ (ಡಿಸೆಂಬರ್ 24) ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ 'ಅದ್ಭುತ ನಾಯಕ' ಎಂದು ಮಿಚೆಲ್ ಹೇಳಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದಾಗ ಸ್ಟಾರ್ಕ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಕೊಹ್ಲಿಯನ್ನು, ಅವರ ಒಳ್ಳೆಯತನ, ತಮಾಷೆಯ ಸ್ವಭಾವವನ್ನು ಕಂಡಿದ್ದರಂತೆ.
ಸ್ಟಾರ್ಕ್ ಅವರು ಕೊಹ್ಲಿ ಬಗ್ಗೆ ಒಳ್ಳೆಯ ಮಾತುಗಳನ್ನಾಡಲು ಕಾರಣವಿದೆ. ಭಾರತ-ಆಸೀಸ್ ನಡುವಿನ ಮೂರನೇ ಟೆಸ್ಟ್ ವೇಳೆ ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆ ಮತ್ತು ವಿರಾಟ್ ಕೊಹ್ಲಿ ಪರಸ್ಪರ ವ್ಯಂಗ್ಯ ಮಾಡಿಕೊಂಡು ಕ್ರಿಕೆಟ್ ಪರಿಣಿತರಿಂದ ಟೀಕೆಗೆ ಗುರಿಯಾಗಿದ್ದರು. ಆಸೀಸ್ ಮಾಜಿ ವೇಗಿ ಮಿಚೆಲ್ ಜಾನ್ಸನ್ ಕೂಡ ಕೊಹ್ಲಿ ವರ್ತನೆಯನ್ನು ಟೀಕಿಸಿದ್ದರು.
ಐಪಿಎಲ್ ವೇಳೆ ಒಂದೇ ತಂಡದಲ್ಲಿದ್ದು, ಕೊಹ್ಲಿಯನ್ನು ಇನ್ನಷ್ಟು ಹತ್ತಿರದಿಂದ ಕಂಡಿರುವ ಸ್ಟಾರ್ಕ್, ಕೊಹ್ಲಿ ಮತ್ತು ಪೈನೆ ವರ್ತನೆಯನ್ನು ಸಮರ್ಧಿಸಿಕೊಂಡಿರು. 'ನಾನು ಕೊಹ್ಲಿ ನಾಯಕತ್ವದಡಿಯಲ್ಲಿ ಆಡಿಯೇ ಹೇಳುತ್ತಿದ್ದೇನೆ; ಕೊಹ್ಲಿ ಒಬ್ಬ ಅದ್ಭುತ ನಾಯಕ' ಎಂದು ಸ್ಟಾರ್ಕ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications