For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಒಪ್ಪಂದ ಮಾಡಿಕೊಂಡ ಆಸ್ಟ್ರೇಲಿಯಾದ ವೇಗಿ ನೇಥನ್ ಎಲ್ಲಿಸ್

Australian pacer Nathan Ellis bags IPL contract, But franchise name was not revealed

ಸಿಡ್ನಿ: ಆಸ್ಟ್ರೇಲಿಯಾದ ವೇಗಿ ನೇಥನ್ ಎಲ್ಲಿಸ್ ಭಾರತದ ನಗದು ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಆಡಲಿದ್ದಾರೆ. ಯಾಕೆಂದರೆ ಎಲ್ಲಿಸ್ ಅವರು ಶುಕ್ರವಾರ (ಆಗಸ್ಟ್ 20) ಐಪಿಎಲ್ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಫ್ರಾಂಚೈಸಿ ಹೆಸರು ಇನ್ನೂ ಬಹಿರಂಗಗೊಂಡಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್‌ ದ್ವಿತೀಯ ಹಂತದ ಪಂದ್ಯಗಳು ಸೆಪ್ಟೆಂಬರ್‌ 19ರಿಂದ ಅಕ್ಟೋಬರ್‌ 15ರ ವರೆಗೆ ನಡೆಯಲಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ದ್ವಿತೀಯ ಹಂತದ ಐಪಿಎಲ್‌ ವೇಳೆ ನೇಥನ್ ಎಲ್ಲಿಸ್ ಆಡುವ ನಿರೀಕ್ಷೆಯಿದೆ. ಆದರೆ ಯಾವ ತಂಡದ ಪರ ಕಣಕ್ಕಿಳಿಯಬಹುದು ಅನ್ನೋದು ಕುತೂಹಲ ಮೂಡಿಸಿದೆ. ಬಹುಶಃ ಆಸ್ಟ್ರೇಲಿಯಾದ ಒಂದಿಬ್ಬರು ಆಟಗಾರರು ದ್ವಿತೀಯ ಹಂತದಲ್ಲಿ ಆಡುತ್ತಿಲ್ಲವಾದ್ದರಿಂದ ಆ ಜಗಕ್ಕೆ ಎಲ್ಲಿಸ್ ಅವರನ್ನು ಕರೆತಂದಿರಬಹುದು.

ಒಪ್ಪಂದ ಮಾಡಿಕೊಳ್ಳಲು ಮೂರು ಫ್ರಾಂಚೈಸಿಗಳು ಫೈಟ್
"ನೇಥನ್ ಎಲ್ಲಿಸ್ ಅವರನ್ನು ಮೂರು ಫ್ರಾಂಚೈಸಿಗಳು ಬೆಂಬತ್ತಿದ್ದವು. ಮುಂಬರಲಿರುವ ಐಪಿಎಲ್‌ಗಾಗಿ ಎಲ್ಲಿಸ್ ಹೆಸರು ಹೇಳಲಾಗದ ಫ್ರಾಂಚೈಸಿಯೊಂದಕ್ಕೆ ಗುರುವಾರ (ಆಗಸ್ಟ್ 19) ಒಪ್ಪಂದ ಮಾಡಿಕೊಂಡಿದ್ದಾರೆ," ಎಂದು cricket.com.auಗೆ ಮೂಲವೊಂದು ತಿಳಿಸಿದೆ. ಇಲ್ಲೀವರೆಗೆ 2 ಟಿ20 ಪಂದ್ಯಗಳನ್ನಾಡಿರುವ ಎಲ್ಲಿಸ್ 5 ವಿಕೆಟ್ ಪಡೆದಿದ್ದಾರೆ. 26ರ ಹರೆಯದ ಎಲ್ಲಿಸ್ ಅವರನ್ನು ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ ತಂಡದಲ್ಲಿ ಮೀಸಲು ಆಟಗಾರರಾಗಿ ಹೆಸರಿಸಲಾಗಿತ್ತು. ಟಿ20 ವಿಶ್ವಕಪ್‌ಗಾಗಿ ಯುಎಇಗೆ ತೆರಳುವ ಆಸೀಸ್ ತಂಡದಲ್ಲಿ ಎಲ್ಲಿಸ್ ಕೂಡ ಮೀಸಲು ಆಟಗಾರರಾಗಿ ತಂಡದ ಜೊತೆಗಿರಲಿದ್ದಾರೆ. ಆಸೀಸ್ ಟಿ20 ವಿಶ್ವಕಪ್‌ ತಂಡದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಅವರಿಗೆ ಐಪಿಎಲ್ ಒಪ್ಪಂದ ಆಫರ್‌ ಕೂಡ ಸಿಕ್ಕಿತ್ತು.

27 ದಿನಗಳವರೆಗೆ ದ್ವಿತೀಯ ಹಂತದ ಐಪಿಎಲ್ ಟೂರ್ನಿ
ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್‌ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.

ಬಯೋಬಬಲ್ ನಿರ್ಬಂಧ ಸಡಿಲಿಕೆ
ಐಪಿಎಲ್ ದ್ವಿತೀಯ ಹಂತದ ಪಂದ್ಯಗಳು ಆರಂಭವಾಗುವಾಗ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಆಟಗಾರರು, ಸಿಬ್ಬಂದಿಗಳು ಪ್ರವಾಸ ಸರಣಿಯಲ್ಲಿರುತ್ತಾರೆ. ಅವರೆಲ್ಲಾ ಬಯೋಬಬಲ್ ಒಳಗೇ ಇರುವುದರಿಂದ ಅಲ್ಲಿನ ಬಯೋಬಬಲ್‌ನಿಂದ ನೇರವಾಗಿ ಯುಎಇಯಲ್ಲಿರುವ ಐಪಿಎಲ್ ಬಯೋಬಬಲ್‌ಗೆ ಪ್ರವೇಶಿಸಬಹುದು ಎಂದು ಬಿಸಿಸಿಐ ಹೇಳಿದೆ. ಹೀಗಾಗಿ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಆಟಗಾರರು ಐಪಿಎಲ್ ಆರಂಭಕ್ಕೂ ಮುನ್ನ ಬೇರೆ ಬಯೋಬಬಲ್ ಒಳಗಿದ್ದರೆ ಅವರು ನೇರವಾಗಿ ಐಪಿಎಲ್ ಬಯೋಬಬಲ್ ಒಳಗೆ ಪ್ರವೇಶಿಸಬಹುದು ಎಂದು ಬಿಸಿಸಿಐ ಹೇಳಿದೆ. ಅಂದ್ಹಾಗೆ ಐಪಿಎಲ್ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಗಸ್ಟ್ 13ರಂದು ಐಪಿಎಲ್‌ಗಾಗಿ ಯುಎಇಗೆ ತೆರಳಿದೆ. ಯುಎಇಗೆ ತೆರಳುವುದಕ್ಕೂ ಮುನ್ನ ಎಲ್ಲಾ 8 ತಂಡಗಳ ಆಟಗಾರರು ಕೋವಿಡ್-19 ವ್ಯಾಕ್ಸಿನೇಶನ್ ಮುಗಿಸಿರಬೇಕು ಎಂದು ಬಿಸಿಸಿಐ ತಿಳಿಸಿದೆ.

Story first published: Friday, August 20, 2021, 19:27 [IST]
Other articles published on Aug 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+