For Quick Alerts
ALLOW NOTIFICATIONS  
For Daily Alerts
 

ಸಿಹಿ ಸುದ್ದಿಯನ್ನು ಹಂಚಿಕೊಂಡ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್

Australian pacer Pat Cummins Set To Become Father In Spring

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಉಪನಾಯಕ ವೇಗಿ ಪ್ಯಾಟ್ ಕಮ್ಮಿನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಜೀವನದ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮೊದಲ ಮಗುವಿಗೆ ತಂದೆಯಾಗುತ್ತಿರುವ ಸಂಗತಿಯನ್ನು ಪ್ಯಾಟ್ ಕಮ್ಮಿನ್ಸ್ ತಿಳಿಸಿದ್ದಾರೆ.

ಸುದೀರ್ಘ ಕಾಲದ ಗೆಳತಿ ಬೆಕೀ ಬಾಸ್ಟನ್ ಅವರೊಂದಿಗೆ ನಿಶ್ವಿತಾರ್ಥವನ್ನು ಮಾಡಿಕೊಂಡಿರುವ ವಿಚಾರವನ್ನು ಪ್ಯಾಟ್ ಕಮ್ಮಿನ್ಸ್ ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಪ್ಯಾಟ್ ಕಮ್ಮಿನ್ಸ್ ಘೋಷಿಸಿಕೊಂಡಿದ್ದರು. ಈ ಜೋಡಿ ಮೊದಲ ಮಗುವಿಗೆ ತಂದೆಯಾಗುತ್ತಿರುವ ವಿಚಾರವನ್ನು ಸ್ವತಃ ಕಮ್ಮಿನ್ಸ್ ಹಾಗೂ ಅವರ ಭಾವಿ ಪತ್ನಿ ಬೆಕೀ ಬಾಸ್ಟನ್ ಇನ್ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದಾರೆ.

"ಈ ಸಂತಸದ ಸಂಗತಿಯನ್ನು ಹೆಚ್ಚು ಕಾಲ ಹಿಡಿದಿಡಲು ನನ್ನಿಂದ ಸಾಧ್ಯವಾಗದು. ಬಾಸ್ಟನ್ ಕಮ್ಮಿನ್ಸ್ ಮಗು ನಮ್ಮನ್ನು ಜೊತೆಯಾಗುವ ಸಮಯ ಹತ್ತಿರವಾಗುತ್ತಿದೆ. ನಿನ್ನನ್ನು ನೋಡಲು ಸಾಕಷ್ಟು ಉತ್ಸುಕನಾಗಿದ್ದೇನೆ" ಎಂದು ಬೆಕೀ ಬಾಸ್ಟನ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಇದಕ್ಕೆ ಪ್ಯಾಟ್ ಕಮ್ಮಿನ್ಸ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ನಾವು ಸಂತೋಷವಾಗಿದ್ದೇವೆ ಹಾಗೂ ಆರೋಗ್ಯವಾಗಿದ್ದೇವೆ. ಸಾಧ್ಯವಾದಾಗ ನಾವು ಮದುವೆಯಾಗಲಿದ್ದೇವೆ. ಆದರೆ ಈಗ ನಾವು ಪುಟಾಣಿಯನ್ನು ಎದುರು ನೋಡುತ್ತಿದ್ದೇವೆ. ಹಾಗಾಗಿ ನಾನು ಸಂತೋಷದಿಂದ ಉಬ್ಬಿ ಹೋಗಿದ್ದೇನೆ" ಎಂದು ಪ್ಯಾಟ್ ಕಮ್ಮಿನ್ಸ್ ಇನ್ಸ್ಟಾಗ್ರಾಮ್‌ನಲ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್ 14ನೇ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ಪ್ಯಾಟ್ ಕಮ್ಮಿಮ್ಸ್ ಈಗ ತವರಿಗೆ ಮರಳುವ ಸಲುವಾಗಿ ಮಾಲ್ಡೀವ್ಸ್‌ನಲ್ಲಿ ಉಳಿದುಕೊಂಡಿದ್ದಾರೆ. ಭಾರತದಿಂದ ನೇರವಾಗಿ ಆಸ್ಟ್ರೇಲಿಯಾಗೆ ಮರಳಲು ಅಲ್ಕಿನ ಸರ್ಕಾರ ನಿರ್ಬಂಧವನ್ನು ವಿಧಿಸಿರುವ ಕಾರಣ ಐಪಿಎಲ್‌ನಲ್ಲಿ ಭಾಗಿಯಾಗಿದ್ದ ಎಲ್ಲಾ ಆಸಿಸ್ ಆಟಗಾರರು ಹಾಗೂ ಸಿಬ್ಬಂದಿಗಳು ಕೂಡ ಸದ್ಯ ಮಾಲ್ಡೀವ್ಸ್‌ನಲ್ಲಿ ತಂಗಿದ್ದಾರೆ.

Story first published: Monday, May 10, 2021, 14:57 [IST]
Other articles published on May 10, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+