Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup‌ ಅಭ್ಯಾಸ ಪಂದ್ಯಗಳಿಗೆ ಆಸ್ಟ್ರೇಲಿಯಾ ಆಟಗಾರರು ಅಲಭ್ಯ; ಕಾರಣ ತಿಳಿಯಿರಿ

ಮೇ 22 ಬುಧವಾರ, 2024ರ ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌) ಅಂತಿಮ ಘಟ್ಟ ತಲುಪಿದೆ. ಈ ಲೀಗ್‌ ಮುಗಿಯುತ್ತಿದ್ದಂತೆ ಜೂನ್‌ 1 ರಿಂದ ಭಾರೀ ನಿರೀಕ್ಷೆ ಐಸಿಸಿ ಟಿ20 ವಿಶ್ವಕಪ್‌ ಆರಂಭವಾಗಲಿದೆ.

ಮೊದಲ ಬಾರಿಗೆ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕಾದಲ್ಲಿ ಅತಿದೊಡ್ಡ ಟಿ20 ವಿಶ್ವಕಪ್‌ ಟೂರ್ನಿಯನ್ನು ನಡೆಸಲಾಗುತ್ತಿದೆ. ಈ ಮೆಗಾ ಟೂರ್ನಿಗೆ ತಂಡಗಳ ಭರ್ಜರಿಗೆ ಸಿದ್ಧತೆ ನಡೆಸುತ್ತಿವೆ. ಇದಕ್ಕೂ ಮುನ್ನ ಪಂದ್ಯಾವಳಿಗೆ ತಂಡಗಳು ಸರ್ವಸನ್ನದ್ಧವಾಗಲು ಅಭ್ಯಾಸ ಪಂದ್ಯಗಳನ್ನೂ ನಡೆಸಲಾಗುತ್ತಿದೆ.

Australian players unavailable for T20 World Cup 2024 warm-up matches

ಈಗಾಗಲೇ ಹಲವು ತಂಡಗಳು ಅಮೆರಿಕಾ ತೆರಳಿ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿವೆ. ಮತ್ತೊಂದೆಡೆ ಐಪಿಎಲ್‌ ಟೂರ್ನಿಯ ಕೊನೆ ಹಂತದಲ್ಲಿ ಇಂಗ್ಲೆಂಡ್‌ ಆಟಗಾರರು ಕೂಡ ತಮ್ಮ ದೇಶಕ್ಕೆ ತೆರಳಿದ್ದಾರೆ. ಆದರೆ ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡದ ಕೆಲ ಆಟಗಾರರು ಅಭ್ಯಾಸ ಪಂದ್ಯಗಳಿಂದ ಹೊರಗುಳಿದಿದ್ದಾರೆ.

ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗಿರುವ ಆಸ್ಟ್ರೇಲಿಯಾದ ಕೆಲ ಆಟಗಾರರು ಐಪಿಎಲ್‌ನಲ್ಲಿ ಪ್ಲೇ ಆಫ್‌ ತಲುಪಿರುವ ತಂಡಗಳಲ್ಲಿ ಆಡುತ್ತಿದ್ದಾರೆ. ಅವರು ಅಭ್ಯಾಸ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಪ್ಲೇ ಆಫ್‌ಗೆ ತಲುಪಿರುವ ತಂಡಗಳ ಪೈಕಿ ರಾಜಸ್ಥಾನ ರಾಯಲ್ಸ್​ ಮಾತ್ರ ಆಸೀಸ್​ ಆಟಗಾರರನ್ನು ಹೊಂದಿಲ್ಲ. ಉಳಿದ ಮೂರೂ ಟೀಮ್‌ಗಳು ಆಸೀಸ್‌ ಆಟಗಾರನ್ನು ಹೊಂದಿವೆ.

ಕಾಂಗೂರು ಪಡೆಯ ಕೋಚ್‌ ಹೇಳಿಕೆ

ಮಾಧ್ಯಮವೊಂದರ ಜೊತೆ ಮಾತನಾಡಿರುವ ಕಾಂಗೂರು ಪಡೆಯ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರು, ಟೂರ್ನಿಗೂ ಮುನ್ನ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯುವ ಅಭ್ಯಾಸ ಪಂದ್ಯಗಳಲ್ಲಿ ನಮೀಬಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.

ಈ 2 ಪಂದ್ಯಗಳಿಗೆ ತಂಡದ ಎಲ್ಲ ಆಟಗಾರರು ಭಾಗವಹಿಸುವುದಿಲ್ಲ. ಜೂನ್ 5 ರಂದು ಒಮಾನ್ ವಿರುದ್ಧ ನಡೆಯುವ ಮೊದಲ ಪಂದ್ಯಕ್ಕೂ ಮುನ್ನ ಪ್ರಸ್ತುತ ಐಪಿಎಲ್‌ ಆಡುತ್ತಿರುವ ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್ ಮತ್ತು ಮಿಚೆಲ್ ಸ್ಟಾರ್ಕ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಯಾವ ತಂಡ ಫೈನಲ್‌ಗೆ ಹೋಗುವುದಿಲ್ಲವೋ ಅದರಲ್ಲಿನ ಆಟಗಾರು ತಂಡ ಸೇರಲಿದ್ದಾರೆ. ಈಗಿರುವ ಆಟಗಾರರ ಜೊತೆ ಅಭ್ಯಾಸ ಪಂದ್ಯ ನಡೆಸಲಿದ್ದೇವೆ.

ವಿಶ್ವಕಪ್‌ನ ಮೊದಲ ಪಂದ್ಯಕ್ಕೂ 5 ದಿನ ಮುನ್ನ ಎಲ್ಲ ಆಟಗಾರರು ತಂಡ ಸೇರಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಕಾರಣ ನಾಯಕ ಮಿಚೆಲ್ ಮಾರ್ಷ್ ಅವರು ಅಭ್ಯಾಸ ಪಂದ್ಯಗಳಲ್ಲಿ ಬೌಲಿಂಗ್ ಮಾಡುವುದಿಲ್ಲ ಎಂದು ಕೋಚ್‌ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಆಡುತ್ತಿರುವ ಆಟಗಾರರು

1) ಕೋಲ್ಕತ್ತಾ ನೈಟ್‌ ರೈಡರ್ಸ್‌‌- ಮಿಚೆಲ್​ ಸ್ಟಾರ್ಕ್​
2) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು- ಗ್ಲೆನ್​ ಮ್ಯಾಕ್ಸ್​ವೆಲ್​, ಕ್ಯಾಮರೂನ್​ ಗ್ರೀನ್​
3) ಸನ್‌ ರೈಸರ್ಸ್ ಹೈದರಾಬಾದ್‌- ಪ್ಯಾಟ್​ ಕಮಿನ್ಸ್​, ಟ್ರಾವಿಸ್​ ಹೆಡ್​
4) ರಾಜಸ್ಥಾನ ರಾಯಲ್ಸ್‌- ಯಾವುದೇ ಆಸೀಸ್‌ ಆಟಗಾರರನ್ನು ಹೊಂದಿಲ್ಲ.

Story first published: Wednesday, May 22, 2024, 11:31 [IST]
Other articles published on May 22, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+