Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸಿಸ್ ಆಟಗಾರರು ತವರಿಗೆ ಮರಳಲು ವಿಶೇಷ ವಿಮಾನ ನೀಡಲ್ಲ: ಆಸ್ಟ್ರೇಲಿಯಾ ಪ್ರಧಾನಿ

Australian PM says no special flights to bring back australian cricketers from IPL

ಭಾರತದಲ್ಲಿ ಐಪಿಎಲ್‌ನಲ್ಲಿ ಭಾಗಿಯಾಗಿರುವ ಆಸ್ಟ್ರೇಲಿಯಾದ ಕ್ರಿಕೆಟಿಗರು ತವರಿಗೆ ಮರಳಲು ಯಾವುದೇ ವಿಶೇಷ ವಿಮಾನದ ವ್ಯವಸ್ಥೆಯನ್ನು ಆಸ್ಟ್ರೇಲಿಯಾ ಸರ್ಕಾರ ಮಾಡುವುದಿಲ್ಲ ಎಂದು ಅಲ್ಲಿನ ಪ್ರಧಾನಿ ಸ್ಕಾಟ್ ಮಾರಿಸನ್ ಸ್ಪಷ್ಟಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಕ್ರಿಸ್ ಲಿನ್ ಚಾರ್ಟರ್ಡ್ ಫ್ಲೈಟ್‌ಗೆ ಮನವಿ ಮಾಡಿದ ನಂತರ ಆಸಿಸ್ ಪ್ರಧಾನ ಮಂತ್ರಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದಿಂದ ನೇರವಾಗಿ ಆಸ್ಟ್ರೇಲಿಯಾಗೆ ತೆರಳುವ ಪ್ರಯಾಣಿಕ ವಿಮಾನವನ್ನು ಆಸ್ಟ್ರೇಲಿಯಾ ಮೇ 15ನೇ ತಾರೀಕಿನವರೆಗೆ ರದ್ದುಗೊಳಿಸಿದೆ. ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಈ ಕ್ರಮವನ್ನು ಕೂಗೊಂಡಿದೆ.

"ಭಾರತದಲ್ಲಿ ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಆಸ್ಟ್ರೇಲಿಯಾದ ಆಟಗಾರರು ಅವರ ವೈಯಕ್ತಿಕ ಭಾಗವಾಗಿ ವ್ಯವಸ್ಥೆಗಳೊಂದಿಗೆ ತೆರಳಿದ್ದಾರೆ. ಇದು ಆಸ್ಟ್ರೇಲಿಯಾ ತಂಡದ ಪ್ರವಾಸದ ಭಾಗವಾಗಿಲ್ಲ" ಎಂದು ಆಸಿಸ್ ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ಆಸ್ಟ್ರೇಲಿಯಾ ಪ್ರಧಾನಿಯ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

"ಅವರು ತಮ್ಮದೇ ಆದ ವ್ಯವಸ್ಥೆಗಳ ಒಳಗಿದ್ದಾರೆ. ಅಲ್ಲಿನ ವ್ಯವಸ್ಥೆಗಳನ್ನು ಆವರು ಬಳಸಿಕೊಳ್ಳುತ್ತಾರೆ. ಅವರ ಸ್ವಂತ ವ್ಯವಸ್ಥೆಯೊಂದಿಗೆ ಆಸ್ಟ್ರೇಲಿಯಾಗೆ ಅವರು ಮರಳುವುದನ್ನು ನಾನು ಬಯಸುತ್ತೇನೆ" ಎಂದು ಸ್ಕಾಟ್ ಮಾರಿಸನ್ ಪ್ರತಿಕ್ರಿಯಿಸಿದ್ದಾರೆ.

ಆಸ್ಟ್ರೇಲಿಯಾದ ಮೂವರು ಕ್ರಿಕೆಟಿಗರಾದ ಆಂಡ್ರೋ ಟೈ, ಆಡಂ ಜಂಪಾ ಹಾಗೂ ಕೇನ್ ರಿಚರ್ಡ್ಸನ್ ಇತ್ತೀಚೆಗಷ್ಟೇ ಟೂರ್ನಿಯನ್ನು ಮೊಟಕುಗೊಳಿಸಿ ತವರಿಗೆ ವಾಪಾಸಾಗಿದ್ದಾರೆ.

Story first published: Tuesday, April 27, 2021, 15:50 [IST]
Other articles published on Apr 27, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+