Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೈವಾಹಿನ ಜೀವನಕ್ಕೆ ಕಾಲಿಟ್ಟ ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್

Australian test captain Pat Cummins marries fiancee Becky Boston

ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ವೈವಾಹಿನ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘ ಕಾಲದ ಗೆಳತಿ ಬೇಕಿ ಬೋಸ್ಟನ್ ಅವರನ್ನು ಪ್ಯಾಟ್ ಕಮ್ಮಿನ್ಸ್ ವರಿಸಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಮದುವೆ ಸಮಾರಂಭದಲ್ಲಿ 29 ವರ್ಷದ ಪ್ಯಾಟ್ ಕಮ್ಮಿನ್ಸ್ ಕಪ್ಪು ಸೂಟ್ ಮತ್ತು ಬೌಟಿಯನ್ನು ಧರಿಸಿ ಮಿಂಚುತ್ತಿದ್ದರೆ ಬೆಕಿ ಬಿಳಿ ಗೌನ್‌ನಲ್ಲಿ ಕಂಗೊಳಿಸಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಹಂಚಿಕೊಂಡಿರುವ ಫೋಟೋಗೆ ಅಭಿಮಾನಿಗಳು ಸಾಕಷ್ಟು ಪ್ರಮಾಣದಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ. ನ್ಯೂ ಸೌತ್ ವೇಲ್ಸ್‌ ಈ ವಿವಾಹ ಸಮಾರಂಭ ನಡೆದಿದೆ ಎನ್ನಲಾಗಿದೆ.

ಕಳೆದ ವರ್ಷಾಂತ್ಯದಲ್ಲಿ ಟಿಮ್ ಪೈನ್ ಟೆಸ್ಟ್ ನಾಯಕತ್ವವನ್ನು ತೊರೆದ ಬಳಿಕ ಪ್ಯಾಟ್ ಕಮ್ಮಿನ್ಸ್‌ಗೆ ಟೆಸ್ಟ್ ತಂಡದ ನಾಯಕತ್ವದ ಹೊಣೆಗಾರಿಗೆ ನೀಡಲಾಗಿತ್ತು. ಈ ಮದುವೆಯ ಫೋಟೋದ ಜೊತೆಗೆ "ಊಗಷ್ಟೇ ಮದುವೆಯಾದೆ" ಎಂದು ಪ್ಯಾಟ್ ಕಮ್ಮಿನ್ಸ್ ಬರೆದುಕೊಂಡಿದ್ದಾರೆ. ಟೀವಿಡ್ ವಾರ್ನರ್, ಬ್ರೇಟ್ ಲೀ ಸೇರಿದಂತೆ ಅನೇಕ ಕ್ರಿಕೆಟ್ ಆಟಗಾರರು ಕೂಡ ಪ್ಯಾಟ್ ಕಮ್ಮಿನ್ಸ್‌ಗೆ ಶುಭಾಶಯ ಕೋರಿದ್ದಾರೆ.

https://www.instagram.com/p/CgtVRGeJJ0C/?utm_source=ig_web_copy_link

ಮದುವೆ ಸಮಾರಂಭದಲ್ಲಿ ಆಸಿಸ್ ತಂಡದ ತಾರೆಯರು: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಟ್ರಾವಿಸ್ ಹೆಡ್ ತಮ್ಮ ಗೆಳತಿಯ ಜೊತೆಗೆ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇನ್ನು ಟಿಮ್ ಪೈನ್ ಹಾಗೂ ಅವರ ಪತ್ನಿ ಬೋನಿ ಕೂಡ ಭಾಗವಹಿಸಿದ್ದರು. ಮಿಚೆಲ್ ಸ್ಟಾರ್ಕ್, ಆಂಡ್ರ್ಯೂ ಮೆಕ್‌ಡೊನಾಲ್ಡ್ ಮತ್ತು ಜೋಶ್ ಹ್ಯಾಝೆಲ್‌ವುಡ್ ಹಾಗೂ ಇನ್ನೂ ಕೆಲ ಪ್ರಮುಖರು ಆಸಿಸ್ ಟೆಸ್ಟ್ ನಾಯಕನ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಶುಭ ಹಾರೈಸಿದ ಸಿಎ, ಕೆಕೆಆರ್: ಇನ್ನು ಆಸ್ಟ್ರೇಲಿಯಾದ ಕ್ರಿಕೆಟ್ ಆಡಳಿತ ಮಂಡಳಿ ಕ್ರಿಕೆಟ್ ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ಶುಭಹಾರೈಕೆ ಮಾಡಿದೆ. ಇನ್ನು ಐಪಿಎಲ್‌ನ ಫ್ರಾಂಚೈಸಿಯಾದ ಕೊಲ್ಕತ್ತಾ ನೈಟ್ ರೈಡರ್ಸ್ ಕೂಡ ಕಮ್ಮಿನ್ಸ್‌ಗೆ ಹಾರೈಸಿದೆ. 2019ರ ಬಳೀಕ ಪ್ಯಾಟ್ ಕಮ್ಮಿನ್ಸ್ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದಾರೆ. ಈ ಮೂಲಕ ಭಾರತದಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಪ್ಯಾಟ್ ಕಮ್ಮಿನ್ಸ್ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ.

ಮದುವೆಗೂ ಮುನ್ನವೇ ಹೆತ್ತವರಾಗಿರುವ ಜೋಡಿ: ಇನ್ನು ಈ ಜೋಡಿ ಈಗಾಗಲೇ ಒಂದು ಮಗುವಿನ ಹತ್ತವರಾಗಿದ್ದಾರೆ. 2013ರಲ್ಲಿ ಮೊದಲಿಗೆ ಭೇಟಿಯಾಗಿದ್ದ ಈ ಜೋಡಿ 2020ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಾದ ಬಳಿಕ ಪ್ಯಾಟ್ ಕಮ್ಮಿನ್ಸ್ ತಾವು ತಂದೆಯಾಗುತ್ತಿರುವುದಾಗಿ ಘೋಷಿಸಿಕೊಂಡಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬೇಕಿ ಮಗುವಿಗೆ ಜನ್ಮ ನೀಡಿದ್ದು ಅಲ್ಬೀ ಬೋಸ್ಟನ್ ಕಮ್ಮಿನ್ಸ್ ಎಂದು ಮಗುವಿಗೆ ನಾಮಕರಣ ಮಾಡಲಾಗಿದೆ. ತಮ್ಮ ಪತ್ನಿ ಗರ್ಭವತಿಯಾಗಿದ್ದ ಸಂದರ್ಭದ ವಿಡಿಯೋವನ್ನು ಕೂಡ ಪ್ಯಾಟ್ ಕಮ್ಮಿನ್ಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇನ್ನು ಮದುವೆ ಸಮಾರಂಭದ ಸಂಪ್ರದಾಯಗಳು ನಡೆಯುವ ಸಮಯದಲ್ಲಿ ಅವರ ಮಗ ಆಲ್ಬಿಯನ್ನು ಅತಿಥಿಯೊಬ್ಬರು ಹಿಡಿದುಕೊಂಡಿದ್ದರು.

ಯಶಸ್ವಿ ವೃತ್ತಿ ಜೀವನ: ಪ್ಯಾಟ್ ಕಮ್ಮಿನ್ಸ್ ಟೆಸ್ಟ್ ಮಾದರಿಗೆ ತಮ್ಮ 18ನೇ ವಯಸ್ಸಿನಲ್ಲಿ 2011ರಲ್ಲಿ ಪದಾರ್ಪಣೆ ಮಾಡಿದ್ದರು. ನಂತರ ಒಂದಾದ ಬಳಿಕ ಒಂದರಂತೆ ಯಶಸ್ಸು ಸಾಧಿಸುತ್ತಲೇ ಸಾಗಿದ ಅವರು ಪ್ರಸ್ತುತ ಮೂರು ಮಾದರಿಯಲ್ಲಿಯೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರಮುಖ ಭಾಗವಾಗಿದ್ದಾರೆ ಪ್ಯಾಟ್ ಕಮ್ಮಿನ್ಸ್. ಟೆಸ್ಟ್ ತಂಡದಲ್ಲಿ ಉಪನಾಯಕನಾಗಿದ್ದ ಕಮ್ಮಿನ್ಸ್ ಇದೀಗ ನಾಯಕನಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Story first published: Monday, August 1, 2022, 17:16 [IST]
Other articles published on Aug 1, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+