Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಿಕಿ ಪಾಂಟಿಂಗ್ ಯುಗದ ದಾಖಲೆ ಸರಿದೂಗಿಸಿದ ಆಸೀಸ್ ಮಹಿಳಾ ತಂಡ

Australian women’s team equalise Ponting-eras record

ಬ್ರಿಸ್ಬೇನ್: ಆಸ್ಟ್ರೇಲಿಯಾಕ್ಕೆ ಪ್ರವಾಸ ಬಂದಿದ್ದ ನ್ಯೂಜಿಲೆಂಡ್ ಮಹಿಳಾ ತಂಡದ ವಿರುದ್ಧ, ಆಸ್ಟ್ರೇಲಿಯಾ ಮಹಿಳಾ ತಂಡ ಮೂರನೇ ಮತ್ತು ಕೊನೇಯ ಏಕದಿನ ಪಂದ್ಯದಲ್ಲಿ ಭರ್ಜರಿ 232 ರನ್‌ಗಳ ಜಯ ಗಳಿಸಿತ್ತು. ಆಸೀಸ್‌ ಮಹಿಳಾ ತಂಡದ ಈ ಸಾಧನೆ ಪುರುಷರ ವಿಭಾಗದ ನಾಯಕ ರಿಕಿ ಪಾಂಟಿಂಗ್ ಯುಗದ ದಾಖಲೆ ಸರಿದೂಗಿಸಿದೆ.

ರಿಕಿ ಪಾಂಟಿಂಗ್ ನಾಯಕತ್ವದ ಆಸ್ಟ್ರೇಲಿಯಾ ಪುರುಷರ ಏಕದಿನ ತಂಡ 2003ರಲ್ಲಿ ಸತತ 21 ಗೆಲುವುಗಳ ದಾಖಲೆ ನಿರ್ಮಿಸಿತ್ತು. ಇದೇ ದಾಖಲೆಯನ್ನೀಗ ಆಸ್ಟ್ರೇಲಿಯಾ ಮಹಿಳಾ ತಂಡವೂ ನಿರ್ಮಿಸಿದೆ. ಆಸೀಸ್ ವನಿತಾ ತಂಡ ಕೂಡ ಸತತ 21 ವಿಜಯದ ಸಾಧನೆ ತೋರಿದೆ.

ಆಸ್ಟ್ರೇಲಿಯಾ ಮಹಿಳಾ ಏಕದಿನ ತಂಡ ಕಡೇಯ ಸಾರಿ ಸೋತಿದ್ದೆಂದರೆ 29 ಅಕ್ಟೋಬರ್ 2017ರಲ್ಲಿ ಇಂಗ್ಲೆಂಡ್ ವಿರುದ್ಧ. ಅಗಾಗಿ 2018ರಿಂದಲೂ ಒಂದೇ ಒಂದು ಏಕದಿನ ಪಂದ್ಯವನ್ನು ಸೋತಿಲ್ಲ. ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ, ನ್ಯೂಜಿಲೆಂಡ್ ಈ ಎಲ್ಲಾ ತಂಡಗಳ ವಿರುದ್ಧವೂ ಆಸೀಸ್ ಸತತ ಜಯ ಗಳಿಸಿದೆ.

ಈಗ ಆಸ್ಟ್ರೇಲಿಯಾ ಏಕದಿನ ತಂಡಕ್ಕೆ ರಚೆಲ್ ಹೇನ್ಸ್ ನಾಯಕಿಯಾಗಿದ್ದಾರೆ. ವಿಶೇಷವೆಂದರೆ ಆಸ್ಟ್ರೇಲಿಯಾಕ್ಕೆ ಪ್ರವಾಸ ಬಂದಿರುವ ನ್ಯೂಜಿಲೆಂಡ್ ಮಹಿಳಾ ತಂಡ ಮೂರು ಟಿ20 ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಿತ್ತು. ಇದರಲ್ಲಿ 3ನೇ ಟಿ20ಐನಲ್ಲಿ ಕಿವೀಸ್ ಗೆದ್ದಿದ್ದು ಬಿಟ್ಟರೆ ಉಳಿದೆಲ್ಲಾ ಪಂದ್ಯಗಳನ್ನು ಆಸೀಸ್ ಗೆದ್ದಿದೆ.

Story first published: Thursday, October 8, 2020, 9:59 [IST]
Other articles published on Oct 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+