Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾದ ಟೆನ್ಷನ್‌ ಹೆಚ್ಚಿಸಿದ ಆಸೀಸ್ ಬೌಲರ್ಸ್‌

ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್‌ ಗವಾಸ್ಕರ್‌ ಟೆಸ್ಟ್ ಸರಣಿಯು ಇದೇ ತಿಂಗಳ ಅಂತ್ಯದಲ್ಲಿ ಆರಂಭವಾಗಲಿದೆ. ಈ ಟೆಸ್ಟ್‌ಗೆ ದಿನಗಣನೆ ಆರಂಭವಾಗಿದ್ದು, ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಮೆಲ್ಬೋರ್ನ್‌ನ ಅಂಗಳದಿಂದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ ನಿದ್ದೆಯನ್ನು ಗೆಡಿಸಿದೆ. ಮಹತ್ವದ ಸಮಯದಲ್ಲಿ ಆಸೀಸ್ ಬೌಲರ್‌ಗಳು ಲಯಕ್ಕೆ ಮರಳಿದ್ದಾರೆ.

ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 46.4 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲೌಟ್‌ ಆಯಿತು. ಗುರಿಯನ್ನು ಹಿಂಬಾಲಿಸಿದ ಆಸೀಸ್‌ 33.3 ಓವರ್‌ಗಳಲ್ಲಿ 8 ವಿಕೆಟ್‌ಗೆ 204 ರನ್‌ ಸೇರಿಸಿ ಜಯ ಕಂಡಿತು. ಈ ವೇಳೆ ಆಸೀಸ್‌ ತಂಡದ ಸ್ಟಾರ್‌ ವೇಗದ ಬೌಲರ್‌ಗಳು ಭರ್ಜರಿ ಫಾರ್ಮ್‌ಗೆ ಮರಳಿದ್ದು, ಆಸೀಸ್‌ ಮ್ಯಾನೇಜ್ಮೆಂಟ್‌ ಮುಖದಲ್ಲಿ ಮಂದಹಾಸ ಮೂಡಿಸಿದೆ.

Australia s Bowlers in Form Tensions Rise for Team India

ಫಾರ್ಮ್‌ಗೆ ಮರಳಿದ ಸ್ಟಾರ್ಕ್‌

ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಜೋಡಿ ಅಬ್ಬರದ ಫಾರ್ಮ್‌ಗೆ ಮರಳಿದ್ದಾರೆ. ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಅಮೋಘ ದಾಳಿಯನ್ನು ಸಂಘಟಿಸಿದರು. ಇವರ ಬೌಲಿಂಗ್‌ ಎದುರಿಸುವಲ್ಲಿ ಪಾಕ್‌ ಬ್ಯಾಟರ್‌ಗಳು ವಿಫಲರಾದರು. ಇವರು 10 ಓವರ್‌ ಬೌಲಿಂಗ್‌ ನಡೆಸಿ 3.30 ಎಕನಾಮಿಯಲ್ಲಿ 33 ರನ್‌ ನೀಡಿ 3 ವಿಕೆಟ್‌ ಪಡೆದು ಅಬ್ಬರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾಕ್ಕೆ ಸರಣಿಗೆ ಮುನ್ನವೇ ಎಚ್ಚರಿಕೆಯ ಘಂಟೆ ಪಾಡಿಸಿದ್ದಾರೆ.

ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್‌ ಸಹ ಸೊಗಸಾದ ಬೌಲಿಂಗ್‌ ನಡೆಸಿದರು. ಇವರು 9.4 ಓವರ್‌ಗಳಲ್ಲಿ 4.03 ಎಕನಾಮಿಯಲ್ಲಿ 39 ರನ್‌ ನೀಡಿ 2 ವಿಕೆಟ್‌ ಪಡೆದು ಬೀಗಿದರು. ಈ ಮೂಲಕ ಆಸ್ಟ್ರೇಲಿಯಾ ತಂಡ, ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ಭರದ ಸಿದ್ಧತೆ ನಡೆಸಿದೆ. ಆಸ್ಟ್ರೇಲಿಯಾದ ಸ್ಟಾರ್ ಸ್ಪಿನ್ ಬೌಲರ್‌ ಆಡಂ ಜಂಪಾ ಸಹ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಇವರು 64 ರನ್‌ ನೀಡಿ 2 ವಿಕೆಟ್‌ ಪಡೆದು ಬೀಗಿದರು.

Australia s Bowlers in Form Tensions Rise for Team India

ಟೀಮ್ ಇಂಡಿಯಾದ ಟೆನ್ಷನ್‌ ಹೆಚ್ಚಿಸಿದೆ

ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ಫಾರ್ಮ್‌ಗೆ ಬಂದಿರುವುದು ಟೀಮ್ ಇಂಡಿಯಾದ ಕೆಟ್ಟ ಸುದ್ದಿಯಾಗಿದೆ. ಈ ಇಬ್ಬರೂ ಸ್ಟಾರ್ ಆಟಗಾರರು ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ರೋಹಿತ್ ಪಡೆಗೆ ಕಾಟ ನೀಡಬಲ್ಲರು. ಈ ಇಬ್ಬರು ಭರ್ಜರಿ ಫಾರ್ಮ್‌ಗೆ ಮರಳಿರುವುದು ಆತಿಥೇಯ ತಂಡದ ಮ್ಯಾನೇಜ್ಮೆಂಟ್‌ನಲ್ಲಿ ಮಂದಹಾಸ ಮೂಡಿಸಿದರೆ, ಪ್ರವಾಸ ಬೆಳೆಸುವ ಮುನ್ನವೇ ಟೀಮ್ ಇಂಡಿಯಾದ ಟೆನ್ಷನ್‌ ಹೆಚ್ಚು ಆಗುವಂತೆ ಮಾಡಿದೆ.

ಭಾರತ ಸತತ ಮೂರನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಡಬೇಕಾದರೆ, ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಪೈಕಿ ನಾಲ್ಕರಲ್ಲಿ ಆದರೂ ಟೀಂ ಇಂಡಿಯಾ ಗೆಲುವು ಸಾಧಿಸುವುದು ಅನಿವಾರ್ಯ.

Story first published: Monday, November 4, 2024, 16:21 [IST]
Other articles published on Nov 4, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+