ಸ್ಟಾರ್ ಮಧ್ಯಮ ಕ್ರಮಾಂಕದ ಆಟಗಾರ ಕ್ಯಾಮರೂನ್ ಗ್ರೀನ್ ಸಿಡಿಸಿದ ಅಬ್ಬರ ಶತಕ ಹಾಗೂ ಆರಂಭಿಕರ ಸ್ಫೋಟಕ ಆಟದ ನೆರವಿನಿಂದ ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ಆಸೀಸ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಜಯ ದಾಖಲಿಸಿದೆ. ದಕ್ಷಿಣ ಆಫ್ರಿಕಾ ಈ ಸರಣಿಯನ್ನು 2-1 ರಿಂದ ಗೆದ್ದು ಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಆರಂಭಿಕರಾದ ಟ್ರಾವಿಸ್ ಹೆಡ್ ಹಾಗೂ ನಾಯಕ ಮಿಚೆಲ್ ಮಾರ್ಷ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 34.1 ಓವರ್‌ಗಳಲ್ಲಿ 250 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಆರಂಭಿಕ ಟ್ರಾವಿಸ್ ಹೆಡ್ 103 ಎಸೆತಗಳಲ್ಲಿ 17 ಬೌಂಡರಿ, 5 ಸಿಕ್ಸರ್ ಸಹಾಯದಿಂದ 142 ರನ್ ಸಿಡಿಸಿ ಔಟ್ ಆದರು. ಈ ಮೂಲಕ ಹೆಡ್ ತಮ್ಮ ವೃತ್ತಿ ಜೀವನದ 7ನೇ ಶತಕ ಬಾರಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಎದುರಾಳಿ ತಂಡದ ಇಬ್ಬರೂ ಆರಂಭಿಕರು 22 ವರ್ಷದ ಬಳಿ ಶತಕ ಬಾರಿಸಿದ್ದಾರೆ. ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಷ್‌ಗಿಂತ ಮೊದಲು, ಇಂಗ್ಲೆಂಡ್‌ನ ವಿ. ಸೋಲಂಕಿ (106 ರನ್) ಮತ್ತು ಮಾರ್ಕಸ್ ಟ್ರೆಸ್ಕೊಥಿಕ್ (114 ರನ್) 2003 ರಲ್ಲಿ ಶತಕ ಗಳಿಸಿದ್ದರು. ಈಗ ಆಸೀಸ್ ಬ್ಯಾಟರ್‌ಗಳು ಈ ದಾಖಲೆ ಅಳಿಸಿ ಹಾಕಿದ್ದಾರೆ. ಇನ್ನೋರ್ವ ಆಟಗಾರ ಮಿಚೆಲ್ ಮಾರ್ಷ್ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಮೂರಂಕಿ ಮುಟ್ಟಿ ಸಂಭ್ರಮಿಸಿದರು. ಮಾರ್ಷ್ ತಮ್ಮ ವೃತ್ತಿ ಜೀವನದ ಏಳನೇ ಶತಕ ಬಾರಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಸ್ಟಾರ್ ಬ್ಯಾಟರ್ ಕ್ಯಾಮರೂನ್ ಗ್ರೀನ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರು ಜಸ್ಟ್ 55 ಎಸೆತಗಳಲ್ಲಿ ಅಜೇಯ 118 ರನ್ ಸಿಡಿಸಿದರು. ಇವರು 6 ಬೌಂಡರಿ, 8 ಸಿಕ್ಸರ್ ಬಾರಿಸಿದರು. ಇವರು 214 ರನ್ ಸಿಡಿಸಿದರು. ಪರಿಣಾಮ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 431 ರನ್ ಸಿಡಿಸಿತು.
ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಐಡನೇ ಮಾರ್ಕ್ರಮ್ (2), ರಯಾನ್ ರಿಕಲ್ಟನ್ (11), ತೆಂಬು ಬವುಮಾ (19), ಟ್ರಿಸ್ಟನ್ ಸ್ಟಬ್ಸ್ (1), ರನ್ ಕಲೆ ಹಾಕುವಲ್ಲಿ ವಿಫಲರಾದರು. ಟೋನಿ ಡಿಜೋರ್ಜಿ 6 ಬೌಂಡರಿ ನೆರವಿನಿಂದ 33 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್ 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ 49 ರನ್ ಸಿಡಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 24.5 ಓವರ್‌ಗಳಲ್ಲಿ 155 ರನ್ ಸೇರಿಸಿತು. ಆಸ್ಟ್ರೇಲಿಯಾದ ಪರ ಕೂಪರ್ ಕಾನೋಲಿ ಬಿಗುವಿನ ದಾಳಿ ನಡೆಸಿದರು. ಇವರು 22 ರನ್ ನೀಡಿ 5 ವಿಕೆಟ್ ಕಬಳಿಸಿದರು.