ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ: ದಾಖಲೆ ಬರೆದ ಸ್ಮೃತಿ
ನವದೆಹಲಿಯಲ್ಲಿ ಟೀಮ್ ಇಂಡಿಯಾ ವನಿತೆಯರ ವಿರುದ್ಧ ಆಸ್ಟ್ರೇಲಿಯಾ ಮಹಿಳೆಯರು ದಾಖಲೆಯ ಪುಸ್ತಕಕ್ಕೆ ಎಂಟ್ರಿ ಪಡೆದಿದೆ. ಮೂರನೇ ಏಕದಿನ ಪಂದ್ಯದಲ್ಲಿ ಆಸೀಸ್ ಭರ್ಜರಿ ಪ್ರದರ್ಶನ ನೀಡಿದ್ದ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಕಲೆ ಹಾಕಿದ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್‌ನಲ್ಲಿ ತಂಡವೊಂದು 400ಕ್ಕೂ ಹೆಚ್ಚು ರನ್ ಬಾರಿಸಿ ಸಾಧನೆ ಮಾಡಿದೆ.
ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಮೊದಲು ಬ್ಯಾಟ್ ಮಾಡಿತು. ಈ ವೇಳೆ ತಂಡದ ಆರಂಭಿಕರು ಸಾಧಾರಣ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ಅಲಸ್ಯಾ ಹೀಲೆ (30) ರನ್ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಜಾರ್ಜಿಯಾ ವೋಲ್ ಹಾಗೂ ಎಲಿಸ್ ಪೆರ್ರಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಈ ಜೋಡಿ 101 ಎಸೆತಗಳಲ್ಲಿ 107 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಜಾರ್ಜಿಯಾ ವೋಲ್ 14 ಬೌಂಡರಿ ನೆರವಿನಿಂದ 81 ಸಿಡಿಸಿದರು.

ಮೂರನೇ ವಿಕೆಟ್‌ಗೆ ಬೆತ್ ಮೂನಿ ಅವರು ಎಲ್ಲಿಸ್ ಪೆರ್ರಿ ಅವರಿಗೆ ಉತ್ತಮ ಸಾಥ್ ನೀಡಿದರು. ಈ ಜೊಡಿ 72 ಎಸೆತಗಳಲ್ಲಿ 106 ರನ್ ಸೇರಿಸಿತು. ಎಲ್ಲಿಸ್ ಪೆರ್ರಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 68 ರನ್ ಬಾರಿಸಿ ಔಟ್ ಆದರು. ಆಶ್ಲೀ ಗಾರ್ಡ್ನರ್ 39, ತಹ್ಲಿಯಾ ಮೆಕ್‌ಗ್ರಾತ್ 14 ರನ್ ಕಲೆ ಹಾಕಿದರು.
ಬೆತ್ ಮೂನಿ ಅಬ್ಬರ
ಬೆತ್ ಮೂನಿ ಅವರ ಮೂರನೇ ಏಕದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 75 ಎಸೆತಗಳಲ್ಲಿ 23 ಬೌಂಡರಿ, 1 ಸಿಕ್ಸರ್ ಸಹಾಯದಿಂದ 138 ರನ್ ಗಳಿಸಿ ಅಬ್ಬರಿಸಿದರು. ಇದು ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟಾರೆ ಆರನೇ ಅತ್ಯಧಿಕ ಸ್ಕೋರ್ ಆಗಿದೆ. ಈ ಮೂಲಕ ಮಹಿಳಾ ಕ್ರಿಕೆಟ್‌ನಲ್ಲಿ ಏಳನೇ ಬಾರಿಗೆ ತಂಡವೊಂದು 400ಕ್ಕೂ ಹೆಚ್ಚು ರನ್ ಬಾರಿಸಿದ ಹಿರಿಮೆ ತನ್ನದಾಗಿಸಿಕೊಂಡಿತು. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು 60 ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದರು. ತಂಡವು ಕೇವಲ ಬೌಂಡರಿಗಳ ಮೂಲಕ 270 ರನ್‌ಗಳನ್ನು ಗಳಿಸಿತು.

ಭಾರತದ ವಿರುದ್ಧ ಗರಿಷ್ಠ ರನ್
412 ರನ್ - ಆಸ್ಟ್ರೇಲಿಯಾ
371 ರನ್ - ಆಸ್ಟ್ರೇಲಿಯಾ
338 ರನ್ - ಆಸ್ಟ್ರೇಲಿಯಾ
332 ರನ್ - ಆಸ್ಟ್ರೇಲಿಯಾ
321 ರನ್ - ದಕ್ಷಿಣ ಆಫ್ರಿಕಾ
ಭಾರತಕ್ಕೆ ಸೋಲು
ಗುರಿಯನ್ನು ಬೆನ್ನಟ್ಟಿದ ಭಾರತ ಮಹಿಳಾ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಪ್ರತಿಕಾ ರಾವಲ್ (10) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ಎಡವಿದರು. ಮಧ್ಯಮ ಕ್ರಮಾಂಕದಲ್ಲಿ ಹರ್ಲಿನ್ ಡಯಲ್ (11) ದೊಡ್ಡ ಸ್ಕೋರ್ ಬಾರಿಸಲಿಲ್ಲ. ನಾಯಕಿ ಹರ್ಮನ್ ಪ್ರೀತ್ ಕೌರ್ 52, ಆಲ್‌ರೌಂಡರ್ ಆಟಗಾರ್ತಿ ದೀಪ್ತಿ ಶರ್ಮಾ 72 ರನ್ ಬಾರಿಸಿದರು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ 63 ಎಸೆತಗಳಲ್ಲಿ 17 ಬೌಂಡರಿ, 5 ಸಿಕ್ಸರ್ ಸಹಾಯದಿಂದ 125 ರನ್ ಬಾರಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 369 ರನ್‌ಗಳಿಗೆ ಆಲೌಟ್ ಆಯಿತು. ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆ ಸ್ಮೃತಿ ಪಾಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications