
ಕ್ಯಾನ್ ಬೆರಾ, ಅಕ್ಟೋಬರ್ 31: ಕ್ರಿಕೆಟ್ ನಲ್ಲಿ ಅದರಲ್ಲೂ ಏಕದಿನ ಕ್ರಿಕೆಟ್ ನಲ್ಲಿ ಹೊಸ ಹೊಸ ಮಾದರಿಯನ್ನು ಪರಿಚಯಿಸುವಲ್ಲಿ ಆಸ್ಟ್ರೇಲಿಯನ್ನರೇ ಮೊದಲಿಗರು ಎಂದರೆ ತಪ್ಪಾಗಲಾರದು. ಆಸ್ಟ್ರೇಲಿಯಾದ ಆಟಗಾರ ಜಾರ್ಜ್ ಬೇಲಿ ಕ್ರೀಸ್ ನಲ್ಲಿ ನಿಂತ ರೀತಿ ಚರ್ಚೆಗೆ ಕಾರಣವಾಗಿದೆ.
ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಇಲೆವೆನ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಜಾರ್ಜ್ ಬೇಲಿ ಕ್ರೀಸ್ ನಲ್ಲಿ ಅಡ್ಡಡ್ಡವಾಗಿ ನಿಂತು ಬ್ಯಾಟಿಂಗ್ ಮಾಡಿದರು.
ಪ್ರಧಾನಮಂತ್ರಿ ಇಲೆವನ್ ಪರ ಆಡುತ್ತಿದ್ದ ಬೇಲಿ ಅವರನ್ನೊಳಗೊಂಡ ತಂಡಕ್ಕೆ 174 ರನ್ಗಳ ಗುರಿ ನೀಡಲಾಗಿತ್ತು. 53 ರನ್ನಿಗೆ 3ನೇ ವಿಕೆಟ್ ಪತನವಾದಾಗ ಬೇಲಿ ಕ್ರೀಸಿಗೆ ಎಂಟ್ರಿ ಕೊಟ್ಟಿದ್ದರು.
ಜಾರ್ಜ್ ಬೇಲಿ ಕ್ರೀಸ್ ನಲ್ಲಿ ಕೊಂಚ ಅಡ್ಡಲಾಗಿ ನಿಂತು, ಬೌಲಿಂಗ್ ಎದುರಿಸಲು ಸಜ್ಜಾಗಿದ್ದರು. ಸ್ಲಿಪ್ನಲ್ಲಿದ್ದ ದಕ್ಷಿಣ ಆಫ್ರಿಕಾದ ಆಟಗಾರ ಫಾಫ್ ಡು ಪ್ಲೆಸಿಸ್ ಇದನ್ನು ಗಮನಿಸಿ ನಕ್ಕು ಸುಮ್ಮನಾದರು.