Australia's World Cup 2023 Schedule: 2023ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪೂರ್ಣ ವೇಳಾಪಟ್ಟಿ
ಮಂಗಳವಾರ, ಜೂನ್ 27ರಂದು ಮುಂಬೈನಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಪ್ರಕಟಿಸಿದೆ.
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

2023ರ ಐಸಿಸಿ ಏಕದಿನ ವಿಶ್ವಕಪ್ ಅಭಿಯಾನದ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತ ತಂಡವನ್ನು ಎದುರಿಸಲಿದೆ. ಐಸಿಸಿ ಟೂರ್ನಿಯಲ್ಲಿ ಆಸೀಸ್ ತಂಡವನ್ನು ಪ್ಯಾಟ್ ಕಮಿನ್ಸ್ ಮುನ್ನಡೆಸಲಿದ್ದಾರೆ.
ಈ ಹಿಂದೆ ಅಲನ್ ಬಾರ್ಡರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಭಾರತದಲ್ಲಿ ವಿಶ್ವಕಪ್ ಗೆದ್ದಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ಆದರೆ, ಆ ಗೆಲುವು 1987ರಲ್ಲಿ ಬಂದಿತ್ತು ಎಂಬುದು ಗಮನಾರ್ಹ. ಇದೀಗ ಪ್ಯಾಟ್ ಕಮ್ಮಿನ್ಸ್ ಪಡೆ ಇತಿಹಾಸವನ್ನು ಪುನರಾವರ್ತಿಸಲು ಮತ್ತು ತಮ್ಮ ಆರನೇ ವಿಶ್ವಕಪ್ ಗೆಲ್ಲಲು ಎದುರು ನೋಡುತ್ತಿದ್ದಾರೆ.
ಅಕ್ಟೋಬರ್ 8ರಂದು ಚೆನ್ನೈನಲ್ಲಿ ಭಾರತವನ್ನು ಎದುರಿಸಿದ ನಂತರ, ಆಸ್ಟ್ರೇಲಿಯಾ ತಂಡವು ಲಕ್ನೋಗೆ ತೆರಳಲಿದ್ದು, ಅಲ್ಲಿ ಸುಮಾರು ಒಂದು ವಾರಗಳ ಕಾಲ ಉಳಿಯುತ್ತಾರೆ. ಅಕ್ಟೋಬರ್ 13ರಂದು ದಕ್ಷಿಣ ಆಫ್ರಿಕಾ ಮತ್ತು ಅಕ್ಟೋಬರ್ 16ರಂದು ಕ್ವಾಲಿಫೈಯರ್ 2 ತಂಡವನ್ನು ಎದುರಿಸಲಿದ್ದಾರೆ.

ಅಕ್ಟೋಬರ್ 20ರಂದು ಬೆಂಗಳೂರಿನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಸೆಣಸಾಡಲಿದೆ. ಆ ಬಳಿಕ ಆಸ್ಟ್ರೇಲಿಯಾ ತಂಡ ದೆಹಲಿಗೆ ತೆರಳಲಿದ್ದು, ಅಕ್ಟೋಬರ್ 25ರಂದು ಕ್ವಾಲಿಫೈಯರ್ 1 ತಂಡದ ವಿರುದ್ಧ ಆಡಲಿದೆ.
ಅಕ್ಟೋಬರ್ 28ರಂದು ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ತಂಡವು ತಮ್ಮ ನೆರೆಯ ಪ್ರತಿಸ್ಪರ್ಧಿ ನ್ಯೂಜಿಲೆಂಡ್ ವಿರುದ್ಧ ಆಡುತ್ತದೆ. ನವೆಂಬರ್ 4ರಂದು ಅಹಮದಾಬಾದ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ತಂಡದ ವಿರುದ್ಧ ಸೆಣಸಾಡಲಿದೆ. ನವೆಂಬರ್ 7 ಮತ್ತು 12ರಂದು ಆಸ್ಟ್ರೇಲಿಯಾ ಮುಂಬೈ ಮತ್ತು ಪುಣೆಯಲ್ಲಿ ಕ್ರಮವಾಗಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳನ್ನು ಎದುರಿಸಲಿದೆ.
2023ರ ಏಕದಿನ ವಿಶ್ವಕಪ್ ಆಸ್ಟ್ರೇಲಿಯಾ ತಂಡದ ಪೂರ್ಣ ವೇಳಾಪಟ್ಟಿ
| ಕ್ರಮ ಸಂಖ್ಯೆ | ದಿನಾಂಕ | ಪಂದ್ಯ | ಸ್ಥಳ |
| 1 | ಅಕ್ಟೋಬರ್ 8 | ಆಸ್ಟ್ರೇಲಿಯಾ vs ಭಾರತ | ಚೆನ್ನೈ |
| 2 | ಅಕ್ಟೋಬರ್ 13 | ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ | ಲಕ್ನೋ |
| 3 | ಅಕ್ಟೋಬರ್ 16 | ಆಸ್ಟ್ರೇಲಿಯಾ vs ಕ್ವಾಲಿಫೈಯರ್ 2 | ಲಕ್ನೋ |
| 4 | ಅಕ್ಟೋಬರ್ 20 | ಆಸ್ಟ್ರೇಲಿಯಾ vs ಪಾಕಿಸ್ತಾನ | ಬೆಂಗಳೂರು |
| 5 | ಅಕ್ಟೋಬರ್ 25 | ಆಸ್ಟ್ರೇಲಿಯಾ vs ಕ್ವಾಲಿಫೈಯರ್ 1 | ದೆಹಲಿ |
| 6 | ಅಕ್ಟೋಬರ್ 28 | ಆಸ್ಟ್ರೇಲಿಯಾ vs ನ್ಯೂಜಿಲೆಂಡ್ | ಧರ್ಮಶಾಲಾ |
| 7 | ನವೆಂಬರ್ 4 | ಆಸ್ಟ್ರೇಲಿಯಾ vs ಇಂಗ್ಲೆಂಡ್ | ಅಹಮದಾಬಾದ್ |
| 8 | ನವೆಂಬರ್ 7 | ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ | ಮುಂಬೈ |
| 9 | ನವೆಂಬರ್ 12 | ಆಸ್ಟ್ರೇಲಿಯಾ vs ಬಾಂಗ್ಲಾದೇಶ | ಪುಣೆ |
ಪ್ಯಾಟ್ ಕಮ್ಮಿನ್ಸ್‌ಗೆ ವಿಶ್ವಕಪ್ ಗೆಲ್ಲುವ ಆಸೆಯಿದೆ
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ತಮ್ಮ ತಂಡದ ಆರನೇ ವಿಶ್ವಕಪ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಕೆಲವು ದಿನಗಳ ಹಿಂದೆ cricket.com.au ನಲ್ಲಿ ಮಾತನಾಡುತ್ತಾ, ಭಾರತದಲ್ಲಿ ವಿಶ್ವಕಪ್ ಗೆಲ್ಲುವ ಬಯಕೆಯನ್ನು ಪ್ಯಾಟ್ ಕಮ್ಮಿನ್ಸ್ ಬಹಿರಂಗಪಡಿಸಿದ್ದರು.
ಏಕದಿನ ವಿಶ್ವಕಪ್ ಗೆಲ್ಲುವುದೇ ದೊಡ್ಡ ಸಾಧನೆ ಎಂದ ಅವರು, ಏಕದಿನ ಹಾಗೂ ಟಿ20 ವಿಶ್ವಕಪ್ ಗೆದ್ದಿರುವುದು ಆಸ್ಟ್ರೇಲಿಯಾದ ಅದೃಷ್ಟ ಎಂದು ಹೇಳಿದ್ದರು. ಇದೀಗ ಮತ್ತೆ ತಂಡವು ಪ್ರಶಸ್ತಿ ಗೆಲ್ಲುವ ವಿಶ್ವಾಸವನ್ನು ಹೊಂದಿದೆ ಮತ್ತು ಅದನ್ನು ಮಾಡುವ ಅನುಭವವೂ ಇದೆ ಎಂದು ಪ್ಯಾಟ್ ಕಮ್ಮಿನ್ಸ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications