ಕೊಹ್ಲಿಯಿಂದ ಸಿರಾಜ್‌ಗೆ ಸಿಕ್ಕ ಬೆಂಬಲ ಈತನಿಗೂ ಸಿಗಬೇಕು ಎಂದ ಇರ್ಫಾನ್ ಪಠಾಣ್

ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಹಲವಾರು ಭಾರತೀಯ ವೇಗಿಗಳು ಬೆಳಕಿಗೆ ಬಂದಿದ್ದು, ಅವರಲ್ಲಿ ಆವೇಶ್ ಖಾನ್ ಕೂಡ ಒಬ್ಬರು. ಐಪಿಎಲ್ ಟೂರ್ನಿಯಲ್ಲಿ ಆವೇಶ್ ಖಾನ್ ನೀಡಿದ್ದ ಉತ್ತಮ ಪ್ರದರ್ಶನವನ್ನು ಹೊಗಳಿದ್ದ ಹಲವಾರು ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪಂಡಿತರು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗಲಿದ್ದಾರೆ ಎಂದು ಊಹಿಸಿದ್ದರು. ಅದರಂತೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ 10 ಕೋಟಿ ರೂಪಾಯಿಗಳಿಗೆ ಅವೇಶ್ ಖಾನ್ ನೂತನ ಫ್ರಾಂಚೈಸಿಯಾದ ಲಕ್ನೋ ಸೂಪರ್ ಜೈಂಟ್ಸ್ ಪಾಲಾದರು. ಹೀಗೆ ಐಪಿಎಲ್ ಟೂರ್ನಿಗಳಲ್ಲಿ ತಾನು ನೀಡಿದ ಉತ್ತಮ ಪ್ರದರ್ಶನದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವೇಶವನ್ನು ಕೂಡ ಮಾಡಿದ ಅವೇಶ್ ಖಾನ್ ಕುರಿತು ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಅವೇಶ್ ಖಾನ್ ಕುರಿತು ಸ್ಟಾರ್ ಸ್ಪೋರ್ಟ್ ಚಾನೆಲ್‌ನಲ್ಲಿ ಮಾತನಾಡಿದ್ದು, ಮೊಹಮ್ಮದ್ ಸಿರಾಜ್ ಅವರಿಗೆ ಸಿಕ್ಕ ರೀತಿಯೇ ಅವೇಶ್ ಖಾನ್ ಅವರಿಗೂ ಬೆಂಬಲ ಸಿಗಬೇಕು ಎಂದಿದ್ದಾರೆ.
ಓರ್ವ ಕ್ರಿಕೆಟಿಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವಾಗ ಆತನಿಗೆ ಒಳ್ಳೆಯ ದಿನಗಳಿಗಿಂತ ಕೆಟ್ಟ ದಿನಗಳೇ ಹೆಚ್ಚು ಇರುತ್ತವೆ ಎಂದಿರುವ ಇರ್ಫಾನ್ ಪಠಾಣ್ ಹೀಗಾಗಿ ಆಟಗಾರರಿಗೆ ಬೆಂಬಲ ಅತಿ ಮುಖ್ಯವಾದದ್ದು ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಓರ್ವ ಕ್ರಿಕೆಟಿಗ ಇದೇ ರೀತಿ ಕೆಟ್ಟ ದಿನಗಳನ್ನು ಎದುರಿಸಲು ಆರಂಭಿಸಿದಾಗ ಆತನ ನಾಯಕ ಮತ್ತು ತಂಡ ಆತನಿಗೆ ಬೆಂಬಲ ಸೂಚಿಸುವುದು ಅತಿ ಮುಖ್ಯವಾದದ್ದು ಎಂದಿರುವ ಇರ್ಫಾನ್ ಪಠಾಣ್ ಮೊಹಮ್ಮದ್ ಸಿರಾಜ್ ಅವರಿಗೆ ವಿರಾಟ್ ಕೊಹ್ಲಿ ನಾಯಕನಾಗಿ ನೀಡಿದ್ದ ಬೆಂಬಲದ ಹಾಗೆ ಉತ್ತಮ ಕ್ರಿಕೆಟಿಗರಿಗೆ ಬೆಂಬಲ ಸಿಗಬೇಕು ಎಂದಿದ್ದಾರೆ. ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮೊಹಮ್ಮದ್ ಸಿರಾಜ್ ಇಷ್ಟರ ಮಟ್ಟಿಗಿನ ವಿಶ್ವಾಸದೊಂದಿಗೆ ಪ್ರದರ್ಶನ ನೀಡುತ್ತಿದ್ದಾರೆ ಎಂದರೆ ಅದಕ್ಕೆ ವಿರಾಟ್ ಕೊಹ್ಲಿ ರೀತಿಯ ಬೆಂಬಲಿಗ ಕಾರಣ ಎಂದು ಇರ್ಫಾನ್ ಪಠಾಣ್ ವಿರಾಟ್ ಕೊಹ್ಲಿಯ ಬೆಂಬಲವನ್ನು ಶ್ಲಾಘಿಸಿದರು.
ಹೀಗಾಗಿ ಓರ್ವ ಆಟಗಾರನಿಗೆ ಬೆಂಬಲ ಅತಿ ಮುಖ್ಯವಾಗಿದ್ದು, ಅವೇಶ್ ಖಾನ್ ಅವರಿಗೂ ಕೂಡ ಮೊಹಮ್ಮದ್ ಸಿರಾಜ್ ಅವರಿಗೆ ಸಿಕ್ಕ ರೀತಿಯ ನಾಯಕನ ಬೆಂಬಲ ಮತ್ತು ತಂಡದ ಬೆಂಬಲ ಸಿಗಬೇಕು ಏಕೆಂದರೆ ಆ ಪ್ರತಿಭೆ ಆತನಲ್ಲಿದೆ ಎಂದು ಇರ್ಫಾನ್ ಪಠಾಣ್ ಅವೇಶ್ ಖಾನ್ ಪ್ರತಿಭೆಯನ್ನು ಹೊಗಳಿದ್ದಾರೆ.
ಇತ್ತೀಚೆಗಷ್ಟೇ ಭಾರತ ಅಂತಾರಾಷ್ಟ್ರೀಯ ತಂಡ ಸೇರಿದ್ದ ಅವೇಶ್ ಖಾನ್
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿದು ಉತ್ತಮ ಪ್ರದರ್ಶನವನ್ನು ನೀಡಿ ಎಲ್ಲರ ಗಮನ ಸೆಳೆದಿದ್ದ ಅವೇಶ್ ಖಾನ್ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯುವ ಅವಕಾಶ ಪಡೆದುಕೊಳ್ಳುವುದರ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದರು ಹಾಗೂ ನಂತರ ಶ್ರೀಲಂಕಾ ವಿರುದ್ಧ ನಡೆದ ಟಿ ಟ್ವೆಂಟಿ ಸರಣಿಯಲ್ಲಿ ಕೂಡ ಆಡುವ ಅವಕಾಶವನ್ನು ಪಡೆದುಕೊಂಡರು. ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಆವೇಶ್ ಖಾನ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ 10 ಕೋಟಿಗೆ ಲಕ್ನೋ ಸೂಪರ್ ಜಯಂಟ್ಸ್ ತಂಡದ ಪಾಲಾಗಿದ್ದು, ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications