ಅಭಿಮಾನಿಗಳ ಕಣ್ಣಿಂದ ತಪ್ಪಿಸಿಕೊಳ್ಳಲು ಧೋನಿ ಏಕಾಂಗಿ ಅಭ್ಯಾಸ


ಬೆಂಗಳೂರು, ಜೂನ್ 18: ಇಂಗ್ಲೆಂಡ್ ಪ್ರವಾಸಕ್ಕಾಗಿ ಕಠಿಣ ತಯಾರಿ ನಡೆಸಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಅಭಿಮಾನಿಗಳ ಕಣ್ತಪ್ಪಿಸಿ ಅಭ್ಯಾಸ ಮಾಡುತ್ತಿದ್ದಾರೆ.
ಇಲ್ಲಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಧೋನಿ, ಏಕಾಂಗಿಯಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ.
ಭಾರತವು ಜೂನ್ 23ಕ್ಕೆ ಐರ್ಲೆಂಡ್‌ಗೆ ತೆರಳಲಿದ್ದು, ಅಲ್ಲಿ ಎರಡು ಟಿ 20 ಪಂದ್ಯಗಳನ್ನು ಆಡಲಿದೆ. ಬಳಿಕ ಅಲ್ಲಿಂದ ಇಂಗ್ಲೆಂಡ್‌ಗೆ ತೆರಳಿ ಜುಲೈ 3ರಿಂದ ಮೂರು ಟಿ 20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
ಧೋನಿ ನೂರಾರು ಎಸೆತಗಳನ್ನು ಎದುರಿಸಿದ ಅಭ್ಯಾಸ ನಡೆಸಿದರು. ಬಹುತೇಕ ಪ್ರಮುಖ ಹಿರಿಯ ಆಟಗಾರರು ತಮ್ಮ ವೃತ್ತಿಯ ಅಂತ್ಯದ ವೇಳೆಗೆ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಒಂದು ನಿರ್ದಿಷ್ಟ ಅಭ್ಯಾಸ ಕ್ರಮವನ್ನು ಅನುಸರಿಸುತ್ತಾರೆ.
ಸಚಿನ್ ತೆಂಡೂಲ್ಕರ್ ಅವರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ನ ಕೊನೆಯ ಕೆಲವು ವರ್ಷ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಸ್ವತಃ ತಯಾರಿ ನಡೆಸಿದ್ದರು. ಧೋನಿ ಅವರು ಎನ್‌ಸಿಎದಲ್ಲಿ ನಡೆಸಿದ ಅಭ್ಯಾಸವೂ ಅದೇ ರೀತಿ ಇದೆ.
ಎನ್‌ಸಿಎದಲ್ಲಿ ಜೂನ್ 15ರಂದು ಯೋಯೋ ಪರೀಕ್ಷೆಗೆ ಒಳಪಟ್ಟಿರುವ ಧೋನಿ ಅವರು ಇಲ್ಲಿಯೇ ಉಳಿದುಕೊಂಡು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ.
ಅವರಿಗೆ ಎನ್‌ಸಿಎದ ನೆಟ್ ಪರಿಣತ ರಘು ಹಾಗೂ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಬೌಲ್ ಮಾಡಿದರು. ಸಿದ್ಧಾರ್ಥ್ ಕೌಲ್ ಅವರೂ ಕೆಲ ಕಾಲ ಬೌಲಿಂಗ್ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications