IND vs BAN 2nd Test: ಸ್ಪಿನ್ ಆಡುವ ಅಭ್ಯಾಸ ಮಾಡಿದ ವಿರಾಟ್: ಕಠಿಣ ಪ್ರಶ್ನೆ ಕೇಳಿದ ಅಕ್ಷರ್
ಕಾನ್ಪುರ್: ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯ ಇಲ್ಲಿನ ಗ್ರೀನ್ ಪಾರ್ಕ್ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ, ಸರಣಿಯನ್ನು ವೈಟ್ ವಾಶ್ ಮಾಡುವ ಕನಸು ಭಾರತ ತಂಡದ್ದಾಗಿದೆ. ಅಲ್ಲದೆ ದಾಖಲೆಯ ಪುಟಕ್ಕೆ ಎಂಟ್ರಿ ನೀಡಲು ಟೀಮ್ ಇಂಡಿಯಾ ಸಿದ್ಧತೆ ನಡೆಸಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮೈದಾನದಲ್ಲಿ ಅಭ್ಯಾಸ ನಡೆಸಿದರು.
ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿತು. ಆದರೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ಕಾನ್ಪುರ್ ಅಂಗಳದಲ್ಲಿ ಭರ್ಜರಿ ಅಭ್ಯಾಸ ನಡೆಸಿದರು. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಬೌಲರ್‌ಗಳು ವಿರಾಟ್ ಅವರಿಗೆ ಕಾಟ ನೀಡಿದರು.

ಬುಧವಾರ, ಟೀಂ ಇಂಡಿಯಾ ಆಟಗಾರರು ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸಿದರು. ನೆಟ್ಸ್ ಅಭ್ಯಾಸದ ವೇಳೆ ಎಲ್ಲರ ಕಣ್ಣು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಮೇಲಿತ್ತು. ಅನುಭವಿ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಮತ್ತು ಸ್ಪಿನ್ ಬೌಲರ್‌ಗಳ ವಿರುದ್ಧ ವಿರಾಟ್ ಅಭ್ಯಾಸ ನಡೆಸಿದರು.
ಕ್ಲೀನ್ ಬೌಲ್ಡ್
ವರದಿಗಳ ಅನುಸಾರ ವಿರಾಟ್ ಕೊಹ್ಲಿ ಬುಧವಾರ ಹಲವು ಬಾರಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ಕಷ್ಟ ಪಟ್ಟರು. ಅಲ್ಲದೆ ಕೆಲವು ಬಾರಿ ಔಟ್ ಸಹ ಆದರು. ಸ್ಪಿನ್ ಬೌಲಿಂಗ್ ಆಡಲು ಅವರು ಹೆಣಗಾಟ ನಡೆಸಿದರು. ವಿರಾಟ್ ಕೊಹ್ಲಿ ಅವರಿಗೆ ಅಕ್ಷರ್ ಪಟೇಲ್ ಬೌಲ್ ಮಾಡಿದರು. ಈ ವೇಳೆ ವಿರಾಟ್ ಕೊಹ್ಲಿ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಕಷ್ಟ ಪಟ್ಟರು.
ಭಾರತ ಹಾಗೂ ಬಾಂಗ್ಲಾದೇಶದ ನಡುವಣ ಎರಡನೇ ಟೆಸ್ಟ್ ಪಂದ್ಯ ಕಾನ್ಪುರ್‌ದಲ್ಲಿ ನಡೆಯಲಿದ್ದು, ಈ ಪಿಚ್ ಸ್ಪಿನ್ ಬೌಲರ್‌ಗಳಿಗೆ ನೆರವಾಗುತ್ತದೆ. ಹೀಗಾಗಿ ವಿರಾಟ್ ಸ್ಪಿನ್ ಬೌಲಿಂಗ್ ಆಡುವುದನ್ನು ಅಭ್ಯಾಸದ ವೇಳೆ ಪ್ರ್ಯಾಕ್ಟಿಸ್ ಮಾಡಿದರು. ವಿರಾಟ್ ಕೊಹ್ಲಿ ತನ್ನ ತಪ್ಪುಗಳನ್ನು ಬಹುಬೇಗನೆ ತಿದ್ದಿಕೊಳ್ಳುವ ಸ್ವಭಾವದ ಆಟಗಾರ ಹೀಗಾಗಿ ಅವರು ಸ್ಪಿನ್ ಆಡುವಾಗ ರಕ್ಷಣಾತ್ಮಕ ಆಟಕ್ಕೆ ಮಣೆ ಹಾಕಿದರು.
ಸ್ಪಿನ್ ಬೌಲಿಂಗ್ ವಿರುದ್ಧ ವಿರಾಟ್ ಆಕ್ರಮಣಕಾರಿ ಆಟವನ್ನು ಆಡಲು ಹೋಗಿ ಔಟ್ ಸಹ ಆದರು. ಇನ್ನು ಸ್ಪಿನ್ ಬೌಲರ್‌ಗಳ ಸ್ಪಿನ್ ಗುರುತಿಸುವಲ್ಲಿ ವಿರಾಟ್ ಹಲವು ಬಾರಿ ಎಡವಿದರು. ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ಅಶ್ವಿನ್ ಸಹ ವಿರಾಟ್ ಕೊಹ್ಲಿ ಅವರಿಗೆ ಕಾಟ ನೀಡಿದರು. ವಿರಾಟ್ ಕೊಹ್ಲಿ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 6, ಎರಡನೇ ಇನಿಂಗ್ಸ್‌ನಲ್ಲಿ 17 ರನ್ ಬಾರಿಸಿ ನಿರಾಸೆ ಅನುಭವಿಸಿದ್ದರು. ಎರಡನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಬಿಗ್ ಇನಿಂಗ್ಸ್ ಕಟ್ಟುವ ಕನಸು ಹೊಂದಿದ್ದು, ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications