
ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಮುನ್ನ ಗಾಯಗೊಂಡಿದ್ದ ಅಕ್ಷರ್ ಪಟೇಲ್ ಎರಡನೇ ಟೆಸ್ಟ್‌ಗೆ ಫಿಟ್ ಆಗಿದ್ದಾರೆ. ಗಾಯದಿಂದ ಸಂಪೂರ್ಭವಾಗಿ ಚೇತರಿಸಿಕೊಂಡಿರುವ ಅಕ್ಷರ್ ಪಟೇಲ್ ಎರಡನೇ ಟೆಸ್ಟ್‌ನಲ್ಲಿ ಆಡುವ ಬಳಗದಲ್ಲಿ ಕಾಣಿಸಿಳ್ಳುವ ಸಾಧ್ಯತೆ ದಟ್ಟವಾಗಿದೆ.
ಅಕ್ಷರ್ ಪಟೇಲ್ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕಾಣಕ್ಕಿಳಿಯುವ ಮೂಲಕ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಉತ್ಸಾಹದಲ್ಲಿದ್ದರು. ಆದರೆ ಅಭ್ಯಾಸದ ವೇಳೆ ಮೊಣಕಾಲಿಗೆ ಗಾಯಮಾಡಿಕೊಂಡರು ಅಕ್ಷರ್ ಪಟೇಲ್. ಹೀಗಾಗಿ ಅವರ ಸ್ಥಾನಕ್ಕೆ ಮೀಸಲು ಆಟಗಾರನಾಗಿದ್ದ ಶಹ್ಬಾಜ್ ನದೀಮ್ ಅವರನ್ನು ತಂಡಕ್ಕೆ ಸೇರಿಸಿಕೊಂಡು ಆಡುವ ಬಳಗದಲ್ಲಿ ಅವಕಾಶ ನೀಡಲಾಯಿತು.
ಆದರೆ ಮೊದಲ ಟೆಸ್ಟ್‌ನಲ್ಲಿ ಅವಕಾಶ ಪಡೆದಿದ್ದ ಶಹ್ಬಾಜ್ ನದೀಮ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ. ಮೊದಲ ಟೆಸ್ಟ್‌ನಲ್ಲಿ ನದೀಮ್ ಹೇಳಿಕೊಳ್ಳುವಂತಾ ಬೌಲಿಂಗ್ ಪ್ರದರ್ಶನ ನೀಡಲು ವಿಫಲರಾಗಿದ್ದರು. ಮತ್ತೆ ಅದೇ ಪಿಚ್‌ನಲ್ಲಿ ಆಡುತ್ತಿರುವ ಕಾರಣ ಮತ್ತೊಂದು ಅವಕಾಶ ಪಡೆಯುವ ಸಾಧ್ಯತೆಯಿಲ್ಲ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ಅಂತ್ಯದ ಬಂತರ ಮಾತನಾಡುತ್ತಾ ಬೌಲಿಂಗ್ ವಿಭಾಗದ ಪ್ರದರ್ಶನದ ಬಗ್ಗೆ ಬೇಸರವನ್ನು ಹೊರಹಾಕಿದ್ದರು. ಜಸ್ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ ಹಾಗೂ ಆರ್ ಅಶ್ವಿನ್ ಅವರ ದಾಳಿಯಿಂದ ಸೃಷ್ಟಿಯಾದ ಒತ್ತಡವನ್ನು ಕಾಯ್ದುಕೊಳ್ಳಲು ನದೀಮ್ ಹಾಗೂ ವಾಶಿಂಗ್ಟನ್ ಸುಂದರ್ ವಿಫಲರಾದರು ಎಂದು ಕೊಹ್ಲಿ ಹೇಳಿಕೊಂಡಿದ್ದರು.
ಎರಡು ಇನ್ನಿಂಗ್ಸ್‌ಗಳಲ್ಲಿ 59 ಓವರ್‌ಗಳ ಬೌಲಿಂಗ್ ದಾಳಿಯನ್ನು ನಡೆಸಿದ ನದೀಮ್ 233 ರನ್‌ಗಳನ್ನು ನೀಡಿ 4 ವಿಕೆಟ್ ಪಡೆದರು. ಎರಡು ಇನ್ನಿಂಗ್ಸ್‌ಗಳಲ್ಲಿ ಅವರ ರನ್‌ರೇಟ್ 4ರ ಸಮೀಪವಿತ್ತು. ನದೀಮ್ ಕೆಲ ನೋ ಬಾಲ್‌ಗಳನ್ನು ಕೂಡ ಎಸೆದಿರುವುದು ಕ್ರಿಕೆಟ್ ವಿಶ್ಲೇಷಕರಿಂದ ಟೀಕೆಗೂ ಗುರಿಯಾಗಿತ್ತು.