Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಕ್ಸರ್ ಪಟೇಲ್‌ಗೆ ಟೆಸ್ಟ್‌ ಕ್ಯಾಪ್ ನೀಡಿದ ವಿರಾಟ್ ಕೊಹ್ಲಿ: ವಿಡಿಯೋ

Axar patel Makes His Test Debut Against England; Receives test cap from captain Virat Kohli

ಚೆನ್ನೈ: ಭಾರತದ ಬೌಲಿಂಗ್ ಆಲ್ ರೌಂಡರ್ ಅಕ್ಸರ್ ಪಟೇಲ್ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ. ಶನಿವಾರ (ಫೆಬ್ರವರಿ 13) ಆರಂಭವಾಗಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ನಲ್ಲಿ ಅಕ್ಸರ್ ಮೈದಾನಕ್ಕಿಳಿದಿದ್ದಾರೆ. ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ ವಿಶ್ರಾಂತಿ ಪಡೆದಿದ್ದಾರೆ.

ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಎರಡನೇ ಟೆಸ್ಟ್ ಪಂದ್ಯ ಆಡುತ್ತಿದೆ. ಈ ಪಂದ್ಯದ ಮೂಲಕ ಎಡಗೈ ಆರ್ಥಡಾಕ್ಸ್ ಬೌಲರ್ ಅಕ್ಸರ್ ಪಟೇಲ್ ಟೆಸ್ಟ್ ವೃತ್ತಿ ಬದುಕು ಆರಂಭಿಸಿದ್ದಾರೆ.

ಭಾರತ vs ಇಂಗ್ಲೆಂಡ್, 2ನೇ ಟೆಸ್ಟ್‌ ಪಂದ್ಯ, Live ಸ್ಕೋರ್‌ಕಾರ್ಡ್

1
49839

ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿರುವ ಪಟೇಲ್‌ಗೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ಯಾಪ್‌ ನೀಡಿದ್ದಾರೆ. ಈ ವಿಡಿಯೋವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ.

'ಟೆಸ್ಟ್‌ ಕ್ರಿಕೆಟ್‌ಗೆ ಅಕ್ಸರ್ ಪಟೇಲ್‌ಗೆ ಸ್ವಾಗತ' ಎಂದು ಬಿಸಿಸಿಐ ಟ್ವೀಟ್‌ನಲ್ಲಿ ಬರೆದುಕೊಂಡಿದೆ. ಅಕ್ಸರ್ ಪಟೇಲ್ ಭಾರತದ ಪರ 38 ಏಕದಿನ ಪಂದ್ಯಗಳಲ್ಲಿ 181 ರನ್, 45 ವಿಕೆಟ್‌ಗಳು, 11 ಟಿ20ಐ ಪಂದ್ಯಗಳಲ್ಲಿ 68 ರನ್, 9 ವಿಕೆಟ್‌, 97 ಐಪಿಎಲ್ ಪಂದ್ಯಗಳಲ್ಲಿ 913 ರನ್, 80 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Saturday, February 13, 2021, 16:05 [IST]
Other articles published on Feb 13, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+