For Quick Alerts
ALLOW NOTIFICATIONS  
For Daily Alerts
 

Delhi Capitals Captain: ಚಾಂಪಿಯನ್‌ ಪ್ಲೇಯರ್‌ಗೆ ಪಟ್ಟ ಕಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌: ಕನ್ನಡಿಗನಿಗೆ ನಿರಾಸೆ

ಐಪಿಎಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಐಪಿಎಲ್‌ನ ಎಲ್ಲ ತಂಡಗಳು ತಮ್ಮ ತಮ್ಮ ನಾಯಕರನ್ನು ಘೋಷಣೆ ಮಾಡಿವೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾತ್ರ ತನ್ನ ನಾಯಕನನ್ನು ಘೋಷಣೆ ಮಾಡಿರಲಿಲ್ಲ. ಈ ತಂಡದ ಪಟ್ಟವನ್ನು ಯಾರಿಗೆ ಕಟ್ಟುತ್ತಾರೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಈ ಪಟ್ಟದ ಮೇಲೆ ಕನ್ನಡಿಗ ಕೆಎಲ್ ರಾಹುಲ್‌ ಸಹ ಕಣ್ಣು ನೆಟ್ಟಿದ್ದರು. ಆಗಲೇ ಡೆಲ್ಲಿ ಕ್ಯಾಪಿಟಲ್ಸ್ ಮಹತ್ವದ ಘೋಷಣೆಯನ್ನು ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್‌ ತನ್ನ ತಂಡದ ಮುಂದಾಳತ್ವವನ್ನು ಚಾಂಪಿಯನ್ ಪ್ಲೇಯರ್‌ಗೆ ನೀಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದ ಮೇಲೆ ಫಾಫ್‌ ಡುಪ್ಲೇಸಿಸ್‌, ಕೆಎಲ್ ರಾಹುಲ್‌ ಹಾಗೂ ಅಕ್ಷರ್‌ ಪಟೇಲ್‌ ಕಣ್ಣು ನೆಟ್ಟಿದ್ದರು. ಅಂತಿಮವಾಗಿ ಡೆಲ್ಲಿ ಮ್ಯಾನೇಜ್ಮೆಂಟ್‌ ಬಹು ಚರ್ಚೆಯನ್ನು ನಡೆಸಿ ತನ್ನ ತಂಡದ ಸ್ಟಾರ್ ಆಟಗಾರನಿಗೆ ಪಟ್ಟವನ್ನು ಕಟ್ಟಿದೆ. 18ನೇ ಐಪಿಎಲ್‌ನಲ್ಲಿ ಡೆಲ್ಲಿ ತಂಡವನ್ನು ಸ್ಟಾರ್‌ ಆಲ್‌ರೌಂಡರ್ ಅಕ್ಷರ್‌ ಪಟೇಲ್‌ ಮುನ್ನಡೆಸಲಿದ್ದಾರೆ.

Axar Patel Named Delhi Capitals Captain for IPL 2025 KL Rahul amp amp Faf du Plessis Miss Out

ಬಣ್ಣದ ಹಬ್ಬದ ವಿಶೇಷ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತನ್ನ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ ನೀಡಿದೆ. ನಾಯಕ ಸ್ಥಾನದಲ್ಲಿ ರೇಸ್‌ನಲ್ಲಿದ್ದ ಮೊದಲ ಆಯ್ಕೆಯ ಆಟಗಾರ ಎಂದೇ ಪರಿಗಣಿಸಲಾಗಿದ್ದ, ಅಕ್ಷರ್‌ ಪಟೇಲ್‌ ಅವರಿಗೆ ಡೆಲ್ಲಿ ಮ್ಯಾನೇಜ್ಮೆಂಟ್‌ ಪಟ್ಟ ಕಟ್ಟಿದೆ. ಇವರು ತಮ್ಮ ಆಲ್‌ರೌಂಡರ್‌ ಪ್ರದರ್ಶನದ ಮೂಲಕ ತಂಡಕ್ಕೆ ನೆರವಾಗಿದ್ದರು. ಇವರು ಇತ್ತೀಚಿಗೆ ಪಾಕಿಸ್ತಾನ ಆಶ್ರಯದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲೂ ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದರು. ಇದನ್ನೆಲ್ಲಾ ಲೆಕ್ಕಾಚಾರ ಹಾಕಿ ಡೆಲ್ಲಿ ಇವರಿಗೆ ನಾಯಕತ್ವ ನೀಡಿದೆ.

Take a Poll

ಡೆಲ್ಲಿ ಕ್ಯಾಪಿಟಲ್ಸ್ ತಂಡ ಭವಿಷ್ಯದ ದೃಷ್ಟಿಯಿಂದ ಸ್ಟಾರ್ ಆಟಗಾರನಿಗೆ ಮಣೆ ಹಾಕಿದೆ. 31 ವರ್ಷದ ಯುವ ಆಟಗಾರನಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಪಟ್ಟ ಕಟ್ಟಿದೆ. ಇವರು ತಮ್ಮ ಸ್ಥಿರ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾಗಬಲ್ಲ ಆಟಗಾರರು. ಡೆಲ್ಲಿ ಕ್ಯಾಪಿಟಲ್ಸ್ ಈ ವರೆಗೆ ಆರು ಋತುವಿನಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಇವರ ಈ ಸಮಾರ್ಥ್ಯದ ಆಧಾರದ ಮೇಲೆ ಇವರಿಗೆ ಮಣೆ ಹಾಕಲಾಗಿದೆ. ಡೆಲ್ಲಿ ಪರ ಅಕ್ಷರ್‌ ಆಡಿದ 82 ಪಂದ್ಯಗಳಲ್ಲಿ 967 ರನ್‌ ಸಿಡಿಸಿದ್ದಾರೆ. ಇವರ ಈ ಸ್ಥಿರ ಪ್ರದರ್ಶನಕ್ಕೆ ಕಾರಣ ಟೀಮ್ ಇಂಡಿಯಾದಲ್ಲಿ ಇವರಿಗೆ ಸಿಗುತ್ತಿರುವ ಅವಕಾಶಗಳು ಹಾಗೂ ಈ ವೇಳೆ ಅವುಗಳನ್ನು ಬಳಸಿಕೊಂಡು ಎಲ್ಲರ ಚಿತ್ತ ಕದ್ದಿದ್ದಾರೆ.

ಐಪಿಎಲ್‌ನಲ್ಲಿ ಅಕ್ಷರ್ ಸಾಧನೆ

ಅಕ್ಷರ್ ಪಟೇಲ್‌ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆರು ಆವೃತ್ತಿಗಳಲ್ಲಿ ಆಡಿ ಸೈ ಎನಿಸಿಕೊಂಡಿರಬಹುದು. ಆದರೆ ಇವರು 2016ರಿಂದ ಐಪಿಎಲ್‌ನಲ್ಲಿ ತಮ್ಮ ಕ್ಷಮತೆಯನ್ನು ಪ್ರದರ್ಶಿಸುತ್ತಿದ್ದಾರೆ. ಇವರು ಆಡಿದ 150 ಐಪಿಎಲ್‌ ಪಂದ್ಯಗಳಲ್ಲಿ 1653 ರನ್‌ ಹಾಗೂ 123 ವಿಕೆಟ್‌ ಪಡೆದಿದ್ದಾರೆ. ಐಪಿಎಲ್ 2025 ಡೆಲ್ಲಿ ತನ್ನ ಅಭಿಯಾನವನ್ನು ಮಾರ್ಚ್ 24, ರಂದು ವಿಶಾಖಪಟ್ಟಣಂನಲ್ಲಿ ಲಕ್ನೋ ವಿರುದ್ಧ ಪ್ರಾರಂಭಿಸಲಿದೆ.

Story first published: Friday, March 14, 2025, 12:23 [IST]
Other articles published on Mar 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+