For Quick Alerts
ALLOW NOTIFICATIONS  
For Daily Alerts
 

ಕ್ಷೀಣವಾಯ್ತು ಭಾರತದ ಆಲ್‌ರೌಂಡರ್‌ನ ವಿಶ್ವಕಪ್ ಕನಸು!: ಆಸಿಸ್ ವಿರುದ್ಧದ ಅಂತಿಮ ಪಂದ್ಯದಿಂದಲೂ ಔಟ್

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಬುಧವಾರ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕುಲ್‌ದೀಪ್ ಯಾದವ್‌ ಈ ಪಂದ್ಯಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ.

ಆದರೆ ಏಷ್ಯಾಕಪ್‌ನ ಫೈನಲ್ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಅಕ್ಷರ್ ಪಟೇಲ್ ಈ ಪಂದ್ಯಕ್ಕೆ ಹೆಸರಿಸಲಾಗಿದ್ದರೂ ಅವರ ಫಿಟ್‌ನೆಸ್ ದೃಢಪಡಬೇಕಿತ್ತು. ಆದರೆ ಇದೀಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅಕ್ಷರ್ ಪಟೇಲ್ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯಕ್ಕೂ ಅಕ್ಷರ್ ಪಟೇಲ್ ಅಲಭ್ಯವಾಗುವುದು ಖಚಿತವಾಗಿದೆ.

Axar Patel ruled out of Rajkot ODI against Australia, World Cup chances bleak: Ashwin in almost conform

ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯ ಕೊನೆಯ ಪಂದ್ಯಕ್ಕೆ ಅಕ್ಷರ್ ಪಟೇಲ್ ಅಲಭ್ಯವಾಗುವುದರ ಮೂಲಕ ವಿಶ್ವಕಪ್‌ಗೂ ಯುವ ಆಲ್‌ರೌಂಡರ್ ಲಭ್ತವಾಗುವ ಸಾಧ್ಯತೆ ಕ್ಷೀಣಿಸಿದೆ. ಹೀಗಾಗಿ ಈಗಾಗಲೇ ಪ್ರಕಟಿಸಿರುವ ಭಾರತದ 15ರ ಬಳಗದಲ್ಲಿ ಬದಲಾವಣೆಗಳಾಗುವುದು ಬಹುತೇಕ ನಿಶ್ಚಿತ.

ಅಶ್ವಿನ್ ಸೇರ್ಪಡೆಗೆ ವೇದಿಕೆ
ಇನ್ನು ಅಕ್ಷರ್ ಪಟೇಲ್ ಅಲಭ್ಯವಾದರೆ ಟೀಮ್ ಇಂಡಿಯಾದಲ್ಲಿ ಆರ್ ಅಶ್ವಿನ್ ಅವರ ಸೇರ್ಪಡೆ ಖಚಿತವಾಗಲಿದೆ. ಈಗಾಗಲೇ ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಎರಡನೇ ಏಕದಿನ ಪಂದ್ಯದಲ್ಲಿ ಅಶ್ವಿನ್ ಬೌಲಿಂಗ್‌ನಲ್ಲಿ ನೀಡಿರುವ ಪ್ರದರ್ಶನ ಎಲ್ಲರ ಗಮನಸೆಳೆದಿದೆ. ಹೀಗಾಗಿ ಅಶ್ವಿನ್ ವಿಶ್ವಕಪ್ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.

ಅಶ್ವಿನ್ ಸೇರ್ಪಡೆಯಿಂದ ಸ್ಪಿನ್ ವಿಭಾಗ ಮತ್ತಷ್ಟು ಬಲಿಷ್ಠ

ಇನ್ನು ಟೀಮ್ ಇಂಡಿಯಾದ ವಿಶ್ವಕಪ್‌ಗೆ ಆರ್ ಅಶ್ವಿನ್ ಅವರನ್ನು ಕೈಬಿಟ್ಟ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಭಾರತದಲ್ಲಿ ವಿಶ್ವಕಪ್‌ ನಡೆಯುತ್ತಿರುವಾಗ ಅಶ್ವಿನ್ ಅವರನ್ನು ಕಡೆಗಣಿಸಿರುವುದು ಉತ್ತಮ ನಿರ್ಧಾರವಲ್ಲ ಎನ್ನುವ ಅಭಿಪ್ರಾಯಗಳು ಜೋರಾಗಿದ್ದವು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅಶ್ವಿನ್‌ಗೆ ಅವಕಾಶ ನೀಡುವ ಮೂಲಕ ಕುತೂಹಲಕಾರಿ ನಿರ್ಧಾರವನ್ನು ತೆಗೆದುಕೊಂಡಿತ್ತು. ಇದೀಗ ವಿಶ್ವಕಪ್‌ಗೆ ಅಶ್ವಿನ್ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದರಿಂದಾಗಿ ಭಾರತದ ಸ್ಪಿನ್ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಲಿದೆ. ವಿಶ್ವಕಪ್ ಟೂರ್ನಿ ಭಾರತಲ್ಲೇ ನಡೆಯುತ್ತಿರುವ ಕಾರಣ ಭಾರತದಲ್ಲಿ ಅನುಭವಿ ಆಟಗಾರನ ಬೌಲಿಂಗ್ ಅತ್ಯಂತ ಪರಿಣಾಮಕಾರಿಯಾಗಿರಲಿದೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಇದನ್ನು ಅಶ್ವಿನ್ ಸಾಬೀತುಪಡಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಪ್ರಸ್ತುತ ಆಯ್ಕೆಯಾಗಿರುವ ಭಾರತ ತಂಡ

ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ .

Story first published: Monday, September 25, 2023, 14:36 [IST]
Other articles published on Sep 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+