ಅಕ್ಸರ್ ಪಟೇಲ್ ಹೋರಾಟ ವ್ಯರ್ಥ, ರೋಚಕ ಪಂದ್ಯ ಗೆದ್ದ ವಿಂಡೀಸ್ 'ಎ'

ಆ್ಯಂಟಿಗುವಾ, ಜುಲೈ 20: ಆ್ಯಂಟಿಗುವಾದ ಕೂಲಿಡ್ಜ್ ಸ್ಟೇಡಿಯಂನಲ್ಲಿ ಶುಕ್ರವಾರ (ಜುಲೈ 19) ನಡೆದ ಭಾರತ 'ಎ' ಮತ್ತು ವೆಸ್ಟ್ ಇಂಡೀಸ್ 'ಎ' ನಡುವಿನ 4ನೇ ಅನಧಿಕೃತ ಏಕದಿನ ಪಂದ್ಯದಲ್ಲಿ ವಿಂಡೀಸ್ ಮೊದಲ ಜಯ ದಾಖಲಿಸಿದೆ. ಆದರೆ ಭಾರತ ಪರ ಅಕ್ಸರ್ ಪಟೇಲ್ ಅವರ ಆಲ್ ರೌಂಡರ್ ಹೋರಾಟ ವ್ಯರ್ಥ ಗೊಂಡಿತು. ವಿಂಡೀಸ್ 5 ರನ್ ರೋಚಕ ಜಯ ಗಳಿಸಿದೆ.
ಐದು ಪಂದ್ಯಗಳ ಈ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ ಸತತ 3 ಗೆಲುವುಗಳೊಂದಿಗೆ ಸರಣಿ ವಶಕ್ಕೆ ಪಡೆದುಕೊಂಡಿದೆ. ನಾಲ್ಕನೇ ಪಂದ್ಯವನ್ನೂ ಭಾರತ ಗೆದ್ದುಕೊಂಡಿದ್ದರೆ ಕ್ಲೀಸ್ ಸ್ವೀಪ್‌ಗೆ ಅವಕಾಶವಿತ್ತು. ಆದರೆ ಆಲ್ ರೌಂಡರ್ ಅಕ್ಸರ್ ಪಟೇಲ್ ಅಜೇಯ 81 (63 ಎಸೆತ) ರನ್ ಸೇರಿಸಿ ತಂಡದ ಪರ ಮಾಡಿದ ಹೋರಾಟ ಫಲ ನೀಡಲಿಲ್ಲ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ 'ಎ', ಆರಂಭಿಕ ಬ್ಯಾಟ್ಸ್ಮನ್ ಸುನಿಲ್ ಆ್ಯಂಬ್ರಿಸ್ 46, ಡೇವನ್ ಥೋಮಸ್ 70, ರೋಸ್ಟನ್ ಚೇಸ್ 84, ಜೊನಾಥನ್ ಕಾರ್ಟರ್ 50, ರೊಮಾರಿಯೋ ಶೆಫರ್ಡ್ 21 ರನ್ ಕೊಡುಗೆಯೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 298 ರನ್ ಗಳಿಸಿತು.
ಗುರಿ ಬೆಂಬತ್ತಿದ ಭಾರತ 'ಎ' ಆರಂಭಿಕ ಬ್ಯಾಟ್ಸ್ಮನ್‌ಗಳ ಬೆಂಬಲ ಗಮನಾರ್ಹವೆನಿಸಲಿಲ್ಲ. ರಿತುರಾಜ್ ಗಾಯಕ್ವಾಡ್ 20, ಅನ್ಮೋಲ್‌ಪ್ರೀತ್ ಸಿಂಗ್ 11, ಹನುಮ ವಿಹಾರಿ 20, ಕೃನಾಲ್ ಪಾಂಡ್ಯ 45, ನಾಯಕ ಮನೀಷ್ ಪಾಂಡೆ 24, ಅಕ್ಸರ್ 81, ಇಶಾನ್ ಕಿಶನ್ 14, ವಾಷಿಂಗ್ಟನ್ ಸುಂದರ್ 45, ಖಲೀಲ್ ಅಹ್ಮದ್ 15 ರನ್ ಕೊಡುಗೆಯಿತ್ತರು.
ಭಾರತ 50 ಓವರ್ ಮುಕ್ತಾಯಕ್ಕೆ 9 ವಿಕೆಟ್ ಕಳೆದು 293 ರನ್ ಪೇರಿಸಿ ಶರಣಾಯಿತು. ವಿಂಡೀಸ್ ಇನ್ನಿಂಗ್ಸ್ ವೇಳೆ ಖಲೀಲ್ ಅಹ್ಮದ್ 4, ಆವೇಶ್ ಖಾನ್ 3 ವಿಕೆಟ್ ಪಡೆದು ಮಿಂಚಿದರೆ, ಭಾರತದ ಇನ್ನಿಂಗ್ಸ್ ವೇಳೆ ವಿಂಡೀಸ್‌ನ ಕೀಮೋ ಪೌಲ್ ಮತ್ತು ರೋಮನ್ ಪೊವೆಲ್ 2 ವಿಕೆಟ್‌ಗಳೊಂದಿಗೆ ಗಮನ ಸೆಳೆದರು. ಪಂದ್ಯದಲ್ಲಿ ಒಟ್ಟು 9 ಓವರ್ ಎಸೆದಿದ್ದ ಅಕ್ಸರ್ ಒಂದು ಮೇಡ್‌ಇನ್‌ನೊಂದಿಗೆ 36 ರನ್ ನೀಡಿದ್ದರು. ಆದರೆ ಪಟೇಲ್‌ಗೆ ವಿಕೆಟ್ ಲಭಿಸಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications