Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ayush Badoni: ಭಾರತಕ್ಕೆ ಸಿಕ್ಕ ಕ್ರಿಸ್‌ ಗೇಲ್‌.. 19 ಸಿಕ್ಸರ್ ಬಾರಿಸಿದ ಆಯುಷ್ ಬದೋನಿ

ಟೀಮ್ ಇಂಡಿಯಾಕ್ಕೆ ಒಬ್ಬ ಸ್ಫೋಟಕ ಬ್ಯಾಟರ್‌ ಸಿಕ್ಕಿದ್ದಾನೆ. ಈ ಬ್ಯಾಟರ್‌ ಈಗಾಗಲೇ ಐಪಿಎಲ್‌ನಲ್ಲಿ ತಮ್ಮ ಧಮಾಕೆದಾರ್‌ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಈಗ ದೆಹಲಿ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರ ಬ್ಯಾಟಿಂಗ್‌ ಶೈಲಿ ಕಂಡು ಅಭಿಮಾನಿಗಳು ಫುಲ್‌ ಖುಷ್ ಆಗಿದ್ದಾರೆ.

ಆಯುಷ್ ಬದೋನಿ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದರು. ಇವರು ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಸಿಡಿಸಿದರು. ಆಯುಷ್ ಬದೋನಿ ಅವರ ಸ್ಫೋಟಕ ಬ್ಯಾಟಿಂಗ್‌, ಯುನಿವರ್ಸಲ್‌ ಬಾಸ್‌ ಕ್ರಿಸ್ ಗೇಲ್ ಅವರ ಬ್ಯಾಟಿಂಗ್‌ ಧಾಟಿಯನ್ನು ನೆನಪಿಸಿತು. ಇವರ ಆಟವನ್ನು ಕಂಡು ಅಭಿಮಾನಿಗಳು ಕುಣಿದಾಡಿದರು.

Ayush Badoni s Explosive 165 Off 55 Balls in Delhi Premier League Reminds Fans of Chris Gayle

ಕ್ರಿಸ್‌ ಗೇಲ್‌ ಅವರು ಚುಟುಕು ಕ್ರಿಕೆಟ್‌ನಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದ ಹೆಸರುವಾಸಿ. ಇವರು ಮೈದಾನಕ್ಕೆ ಇಳಿದರೆ ಬಿಗ್ ಹಿಟ್ ಫಿಕ್ಸ್. ಕ್ರಿಸ್‌ ಗೇಲ್‌ ಐಪಿಎಲ್‌ನಲ್ಲಿ ಪಿಎಲ್ 2013ರಲ್ಲಿ 175 ರನ್ ಗಳಿಸಿದ್ದರು. ಇವರ ಬ್ಯಾಟಿಂಗ್‌ ನೆನಪಿಸುವ ಆಟವನ್ನು ಆಯುಷ್ ಬದೋನಿ ಆಡಿದ್ದಾರೆ.

55 ಎಸೆತ, 19 ಸಿಕ್ಸರ್ ಮತ್ತು 8 ಬೌಂಡರಿ...

ಆಯುಷ್ ಬದೋನಿ ಕೇವಲ 55 ಎಸೆತಗಳಲ್ಲಿ 165 ರನ್ ಗಳಿಸಿದರು. ಈ ಸ್ಫೋಟಕ ಇನಿಂಗ್ಸ್‌ನಲ್ಲಿ 19 ಸಿಕ್ಸರ್‌ಗಳು ಮತ್ತು 8 ಬೌಂಡರಿಗಳನ್ನು ಸಿಕ್ಸರ್‌ಗಳು ಸೇರಿವೆ. ಆಯುಷ್ ಬಡೋನಿ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಬಳಕೆದಾರರು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ಇವರ ಬ್ಯಾಟಿಂಗ್ ಕಂಡು ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.

ಉತ್ತರ ದೆಹಲಿ ಸ್ಟ್ರೈಕರ್ಸ್ ಮತ್ತು ದಕ್ಷಿಣ ದೆಹಲಿ ಸೂಪರ್‌ಸ್ಟಾರ್‌ಗಳ ನಡುವೆ ಕಾದಾಟ ನಡೆಯಿತು. ಈ ಪಂದ್ಯದಲ್ಲಿ ದಕ್ಷಿಣ ದೆಹಲಿ ಸೂಪರ್‌ಸ್ಟಾರ್‌ಗಳ ಪರ ಬ್ಯಾಟ್ ಮಾಡಿದ ಆಯುಷ್‌ ಅಮೋಘ ಬ್ಯಾಟ್ ಮಾಡಿದರು. ಇವರು ಕೇವಲ 39 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಇದಾದ ಬಳಿಕ 16 ಎಸೆತಗಳಲ್ಲಿ 65 ರನ್ ಸಿಡಿಸಿದರು.

ಈಗಾಗಲೇ ಐಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್ ಕ್ಷಮತೆಯನ್ನು ತೋರಿಸಿರುವ ಆಯುಷ್ ಬದೋನಿ, ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದಾರೆ. ಇವರಿಗೆ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತ ಸಿಗುವ ಸಾಧ್ಯತೆ ಇದೆ ಅಂದಾಜಿಸಲಾಗಿದೆ. ಇವರನ್ನು ಕೊಂಡುಕೊಳ್ಳಲು ತಂಡಗಳು ಹಣದ ಹೊಳೆಯನ್ನು ಹರಿಸಬಹುದು.

ಆಯುಷ್ ಬದೋನಿ ಐಪಿಎಲ್‌ನಲ್ಲಿ ಇವರೆಗೆ 42 ಪಂದ್ಯಗಳನ್ನು ಆಡಿದ್ದು, 24ರ ಸರಾಸರಿಯಲ್ಲಿ 634 ರನ್ ಸೇರಿಸಿದ್ದಾರೆ. ಇದರಲ್ಲಿ 4 ಅರ್ಧಶತಕಗಳು ಸಹ ಸೇರಿವೆ.

Story first published: Saturday, August 31, 2024, 20:09 [IST]
Other articles published on Aug 31, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+