Ayush Mhatre: ಲೀಸ್ಟ್ ಎ ಕ್ರಿಕೆಟ್‌ನಲ್ಲಿ ಯಶಸ್ವಿ ದಾಖಲೆ ಅಳಿಸಿದ ಮುಂಬೈ ತಂಡದ ಯುವ ಬ್ಯಾಟರ್
ಭಾರತ ತಂಡ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿಎ. ಭಾರತದಲ್ಲಿ ಸದ್ಯ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿವೆ. ರಣಜಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಕರ್ನಾಟಕ, ವಿಜಯ್ ಹಜಾರೆ ಟೂರ್ನಿಯಲ್ಲಿ ಅಬ್ಬರ ನಡೆಸಿದ್ದು, ಎಲ್ಲರ ಗಮನ ಸೆಳೆದಿದೆ. ಇನ್ನು ಇದೇ ಟೂರ್ನಿಯಲ್ಲಿ ಆಡುತ್ತಿರುವ ಮುಂಬೈ ತಂಡದ ಪೋರ ಯಶಸ್ವಿ ಜೈಸ್ವಾಲ್ ದಾಖಲೆ ಅಳಿಸಿ ಹಾಕಿದ್ದಾರೆ. ಮುಂಬೈ ಬ್ಯಾಟರ್ ನಿರ್ಮಿಸಿದ ಆ ದಾಖಲೆ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.
ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಮುಂಬೈ ತಂಡ ಸ್ಥಿರ ಪ್ರದರ್ಶನ ನೀಡುತ್ತಿದೆ. ಮುಂಬೈ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, ಮತ್ತೊಂದು ಪಟ್ಟದ ಕನಸು ಹೊಂದಿದೆ. ಮುಂಬೈ ವಿಜಯ್ ಹಜಾರೆ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ 189 ರನ್‌ಗಳಿಂದ ನಾಗಾಲ್ಯಾಂಡ್ ತಂಡವನ್ನು ಮಣಿಸಿ 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಮುಂಬೈಗೆ ಜಯ
ಮುಂಬೈ ತಂಡದ ಗೆಲುವಿನಲ್ಲಿ 17 ವರ್ಷದ ಆಯುಷ್ ಮ್ಹಾತ್ರೆ ಮಿಂಚಿದ್ದಾರೆ. ಈ ಮೂಲಕ ಇವರು ತಮ್ಮ ಮೇಲೆ ತಂಡ ವಿಶ್ವಾಸವನ್ನು ಇಟ್ಟುಕೊಳ್ಳಬಹುದು ಎಂದು ಸಾರಿ ಹೇಳಿದ್ದಾರೆ. ಟಾಸ್ ಸೋತ ಮುಂಬೈ ತಂಡದ ಪರ ಭರವಸೆಯ ಆಟಗಾರ ಆಯುಷ್ ಹಾಗೂ ಆಂಗ್ಕ್ರಿಶ್ ರಘುವಂಶಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 24.5 ಓವರ್‌ಗಳಲ್ಲಿ 156 ರನ್ ಸೇರಿಸಿ ಅಬ್ಬರಿಸಿತು. ಆಂಗ್ಕ್ರಿಶ್ ರಘುವಂಶಿ 56 ರನ್ ಸಿಡಿಸಿದರು.
ಯಶಸ್ವಿ ದಾಖಲೆ ಅಳಿಸಿದ ಆಯುಷ್
ಆರಂಭಿಕನಾಗಿ ಆಡುವ ಅವಕಾಶ ಪಡೆದ ಆಯುಷ್ ಮ್ಹಾತ್ರೆ ತಮ್ಮಲ್ಲಿರುವ ಬ್ಯಾಟಿಂಗ್ ಕಲೆಯನ್ನು ಅಹಮದಾಬಾದ್‌ನಲ್ಲಿ ಹೊರ ಹಾಕಿದರು. ಇವರು ಕ್ಲಾಸಿಕ್ ಬ್ಯಾಟಿಂಗ್‌ನ ಪರಿಣಾಮ ಮುಂಬೈ ಸವಾಲಿನ ಮೊತ್ತವನ್ನು ಕಲೆ ಹಾಕಿತು. ಆಯುಷ್ 117 ಎಸೆತಗಳಲ್ಲಿ 15 ಬೌಂಡರಿ, 11 ಸಿಕ್ಸರ್ ಸಹಾಯದಿಂದ 181 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಈ ಮೂಲಕ ಆಯುಷ್, ಯಶಸ್ವಿ ಜೈಸ್ವಾಲ್ ಅವರ ದಾಖಲೆ ಅಳಿಸಿ ಹಾಕಿದರು.
ಆಯುಷ್ ಮ್ಹಾತ್ರೆ ಕೇವಲ 17 ವರ್ಷ ಮತ್ತು 168 ದಿನಗಳು ಮತ್ತು ಲಿಸ್ಟ್-ಎ ಕ್ರಿಕೆಟ್‌ನಲ್ಲಿ 150 ಪ್ಲಸ್ ರನ್ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ತಮ್ಮ ಅತ್ಯುತ್ತಮ ಬ್ಯಾಟಿಂಗ್ ಮೂಲಕ ವಿಶ್ವ ದಾಖಲೆ ನಿರ್ಮಿಸಿರುವ ಅವರು ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಜೈಸ್ವಾಲ್ 2019 ರಲ್ಲಿ ಜಾರ್ಖಂಡ್ ವಿರುದ್ಧ ಲಿಸ್ಟ್-ಎ ಕ್ರಿಕೆಟ್‌ನಲ್ಲಿ 150 ಪ್ಲಸ್ ಸ್ಕೋರ್ ಗಳಿಸಿದ್ದರು. ಆಗ ಅವರ ವಯಸ್ಸು 17 ವರ್ಷ 291 ದಿನ ಆಗಿತ್ತು.
ಕರ್ನಾಟಕದ ಜೆ.ಸುಚಿತ್ ಶತಕ
ಕರ್ನಾಟಕದ ಸ್ಟಾರ್ ಆಟಗಾರ ಜಗದೀಶ್ ಸುಚಿತ್ ಈಗ ನಾಗಾಲ್ಯಾಂಡ್ ತಂಡದ ಪರ ಆಡುತ್ತಿದ್ದಾರೆ. ಇವರು ಮುಂಬೈ ವಿರುದ್ಧದ ಪಂದ್ಯದಲ್ಲಿ 97 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ 104 ರನ್ ಸಿಡಿಸಿ ಗೆಲುವಿನ ಅಂತರವನ್ನು ಕಡಿಮೆ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications