ರಾಯುಡು ನಡೆಸಿಕೊಂಡ ಬಗೆಗೆ ಆಯ್ಕೆ ಸಮಿತಿ ಮೇಲೆ ಅಝರುದ್ದೀನ್ ಗರಂ

ನವದೆಹಲಿ, ಜುಲೈ 23: ಭಾರತದ ವಿಶ್ವಕಪ್ ತಂಡದಲ್ಲಿ ಪರಿಗಣಿಸದಿದ್ದಕ್ಕೆ ನಿರಾಶೆಗೊಂಡಿದ್ದ ಅಂಬಾಟಿ ರಾಯುಡು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ 2019ರ ವಿಶ್ವಕಪ್ ನಡೆಯುತ್ತಿದ್ದಾಗಲೇ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿದ್ದರು. ರಾಯುಡು ಅವರನ್ನು ಆಯ್ಕೆ ಸಮಿತಿ ನಡೆಸಿಕೊಂಡ ಬಗೆಗೆ ಭಾರತದ ಮಾಜಿ ನಾಯಕ ಮೊಹಮ್ಮದ್ ಅಝರುದ್ದೀನ್ ಅಸಮಾಧಾನ ಹೊರ ಹಾಕಿದ್ದಾರೆ.
ವಿಶ್ವಕಪ್‌ಗಾಗಿ ಪ್ರಕಟಿಸಲಾದ 15 ಜನರ ತಂಡದಲ್ಲಿ ಆಯ್ಕೆ ಆಗುವುದನ್ನು ರಾಯುಡು ನಿರೀಕ್ಷಿಸಿದ್ದರು. ಅಲ್ಲಿ ರಾಯುಡು ಹೆಸರಿರಲಿಲ್ಲ. ಅನಂತರ ಆಲ್ ರೌಂಡರ್ ವಿಜಯ್ ಶಂಕರ್ ಗಾಯಗೊಂಡಾಗ ಅವರ ಬದಲು ತಂಡದಲ್ಲಿ ಸ್ಥಾನ ಲಭಿಸಲಿದೆ ಎನ್ನುವ ರಾಯುಡು ನಿರೀಕ್ಷೆಯೂ ಸುಳ್ಳಾಗಿತ್ತು. ಈ ಸಾರಿ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದರು.
ವಿಶ್ವಕಪ್ ತಂಡದಲ್ಲಿ ರಾಯುಡು ಅವರನ್ನು ಪರಿಗಣಿಸಬೇಕಿತ್ತು ಎಂದಿರುವ ಅಝರ್, ಯಾಕೆ ಪರಿಗಣಿಸಬೇಕಿತ್ತು ಎಂಬುದನ್ನೂ ಹೇಳಿಕೊಂಡಿದ್ದಾರೆ.

ರಾಯುಡುಗೆ ತೀವ್ರ ಅವಮಾನ
ಸ್ಟ್ಯಾಂಡ್‌ಬೈ ಆಟಗಾರನ ಪಟ್ಟಿಯಲ್ಲಿದ್ದರೂ ರಾಯುಡು ಅವರನ್ನು ಕಡೆಗಣಿಸಿ ಮಯಾಂಕ್ ಅವರನ್ನು ಆರಿಸಿದ್ದು ರಾಯುಡುಗೆ ತೀವ್ರ ಅವಮಾನ ತಂದಿತ್ತು. ಇದಕ್ಕೆ ಪ್ರತಿಕ್ರಿಯೆಂಬಂತೆ ರಾಯುಡು ಆ ಕೂಡಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿದ್ದರು. ಈ ಘಟನೆ ಅಝರ್ ಅವರನ್ನು ಮಾತಾಡುವಂತೆ ಮಾಡಿದೆ.

ಸ್ಟ್ಯಾಂಡ್‌ಬೈ ಆಟಗಾರನನ್ನೇ ಆರಿಸಬೇಕು
'ಒಬ್ಬ ಆಟಗಾರ ಸ್ಟ್ಯಂಡ್‌ಬೈನಲ್ಲಿ ಇದ್ದಾನೆ ಅಂದಾಗ, ಆಟಗಾರರ ಬದಲಾವಣೆ ಬೇಕಾದಾಗ ಸ್ಟ್ಯಾಂಡ್‌ಬೈ ಆಟಗಾರನನ್ನೇ ಆರಿಸಬೇಕು. ನೀವು ಆಯ್ಕೆದಾರರ ಸಾಲಿನಲ್ಲಿದ್ದರೆ ನಿಮಗೆ ನಾಯಕ ಮತ್ತು ಕೋಚನ್ನು ನಿರಾಕರಿಸುವ ಹಕ್ಕೂ ಇರುತ್ತದೆ' ಎಂದು ಡೆಕನ್ ಕ್ರಾನಿಕಲ್ ಜೊತೆ ಮಾತನಾಡುತ್ತ ಅಝರ್ ಹೇಳಿದ್ದಾರೆ.

ಆಯ್ಕೆ ಸಮಿತಿಗೆ ವಿಶೇಷ ಅಧಿಕಾರ
'ಆರಿಸುವವರು ನೀವಾದರೆ ನೀವು, ಇಲ್ಲ, ನೀನು ಕೇಳಿದವನನ್ನು ಕೊಡೋಕ್ಕಾಗಲ್ಲ. ನಾವು ಈತನನ್ನು ಕಳುಹಿಸುತ್ತೇವೆ ಎನ್ನುವ ಅಧಿಕಾರ ನಿಮಗಿರುತ್ತದೆ. ನಾಯಕನಾಗಿದ್ದಾಗ ನಾನೂ ಬೇರೆ ಆಟಗಾರರಿಗಾಗಿ ಬೇಡಿಕೆಯಿಟ್ಟಿದ್ದೆ. ಆಗ ಆಯ್ಕೆ ಸಮಿತಿ ಅದಕ್ಕೆ ನಕಾರ ಸೂಚಿಸಿತ್ತು,' ಎಂದು ಹಿಂದಿನ ಕ್ಷಣವೊಂದನ್ನು ಮೊಹಮ್ಮದ್ ಸ್ಮರಿಸಿಕೊಂಡರು.

ನಾನದಕ್ಕೆಲ್ಲ ಒಪ್ಪಲಾರೆ
'ಸ್ಟ್ಯಾಂಡ್‌ಬೈ ಆಟಗಾರರು ಆಯ್ಕೆಯಾಗದಿದ್ದರೆ ಅವರಿಗೆ ಸಹಜವಾಗೇ ಬೇಸರವಾಗಿತ್ತದೆ. ಆದರೆ ಎಂಎಸ್‌ಕೆ ಪ್ರಸಾದ್ ಇದಕ್ಕೆ ಬೇರೆನೇ ವಿವರಣೆ ಕೊಡುತ್ತಾರೆ. ನಾನದಕ್ಕೆಲ್ಲ ಒಪ್ಪಲಾರೆ,' ಎಂದು ಅಝರ್ ತಿಳಿಸಿದ್ದಾರೆ. ಜನವರಿವರೆಗೂ ವಿಶ್ವಕಪ್ 4ನೇ ಕ್ರಮಾಂಕ ಅಂಬಾಟಿ ರಾಯಡು ಅವರದ್ದು ಎಂದು ಬಿಂಬಿಸಲಾಗಿತ್ತು. ಆದರೆ ವಿಶ್ವಕಪ್‌ನಲ್ಲಿ ನಾಲ್ಕನೇ ಕ್ರಮಾಂಕ ತಮಿಳುನಾಡು ಆಲ್ ರೌಂಡರ್ ವಿಜಯ್ ಶಂಕರ್ ಪಾಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications