ಕೊಹ್ಲಿ, ಸ್ಮಿತ್ ಸಮೀಪಕ್ಕೆ ಬಾಬರ್ ಬರುತ್ತಿದ್ದಾರೆ: ಮಿಸ್ಬಾ ಉಲ್ ಹಕ್

ಲಾಹೋರ್, ಮೇ 25: ಕೊರೊನಾವೈರಸ್‌ನಿಂದಾಗಿ ಕಳೆದ 2 ತಿಂಗಳಿನಿಂದಲೂ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆಯುತ್ತಿಲ್ಲ. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಪಾಕಿಸ್ತಾನದ ನಿಯಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಾಮ್ ಮಾತ್ರ ದಿನನಿತ್ಯ ಸುದ್ದಿಯಾಗುತ್ತಲೇ ಇದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿನ ಸಂದರ್ಶನಗಳ ವೇಳೆ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಮತ್ತು ಬಾಬರ್ ಅಝಾಮ್ ಹೆಸರುಗಳು ಹೆಚ್ಚು ಕೇಳಿಬರುತ್ತವೆ. ಪಾಕಿಸ್ತಾನದ ಮುಖ್ಯ ಕೋಚ್ ಮತ್ತು ಮುಖ್ಯ ಆಯ್ಕೆದಾರ ಮಿಸ್ಬಾ ಉಲ್ ಹಕ್ ಕೂಡ ಹೆಚ್ಚು ಸುದ್ದಿಯಲ್ಲಿರುವ ಈ ಮೂವರು ಕ್ರಿಕೆಟಿಗರ ಬಗ್ಗೆ ತುಟಿ ಬಿಚ್ಚಿದ್ದಾರೆ.
ಒಬ್ಬರು ಆಟಗಾರರಿಗೆ ಮತ್ತೊಬ್ಬರನ್ನು ಹೋಲಿಸುವುದನ್ನು ಇಷ್ಟಪಡಲಾರೆ. ಆಟಗಾರರ ಹೋಲಿಕೆಗೆ ನನ್ನನ್ನು ಎಳೆಯಬೇಡಿ ಎಂದಿರುವ ಪಾಕ್ ಮಾಜಿ ನಾಯಕ ಮಿಸ್ಬಾ ಅವರು ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಜೊತೆ ಬಾಬರ್ ಅಝಾಮ್ ಕೂಡ ರೇಸ್ ನಲ್ಲಿದ್ದಾರೆ ಎಂದಿದ್ದಾರೆ.
'ಒಬ್ಬರಿಗೆ ಒಬ್ಬರನ್ನು ಹೋಲಿಸಲು ನಾನು ಬಯಸಲಾರೆ, ಆದರೆ ಸಾಧನೆಯ ವಿಚಾರದಲ್ಲಿ ಬಾಬರ್ ಅಝಾಮ್ ಅವರು ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಅಥವಾ ಜೋ ರೂಟ್‌ನ ಹತ್ತಿರಕ್ಕೆ ಬರುತ್ತಿದ್ದಾರೆ,' ಎಂದು ಯೂಟ್ಯೂಬ್ ಚಾನೆಲ್ ಕ್ರಿಕೆಟ್ ಬಾಝ್ ಜೊತೆಗಿನ ಸಂದರ್ಶನದ ವೇಳೆ ಮಿಸ್ಬಾ ಹೇಳಿಕೊಂಡಿದ್ದಾರೆ.
ಸದ್ಯ ಟಿ20ಐ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಬಾಬರ್ ಶ್ರಮಜೀವಿ ಆಟಗಾರ ಎಂದು ಮಿಸ್ಬಾ ಹೇಳಿದ್ದಾರೆ. 'ಕೆಲಸದ ಮೇಲೆ ಬಾಬರ್‌ಗೆ ಹೆಚ್ಚಿನ ನಂಬಿಕೆಯಿದೆ. ನೀವು ಕೊಹ್ಲಿಯನ್ನು ಮೀರಿಸಬೇಕು ಅಂತ ಬಯಸಿದರೆ, ನೀವು ಕೌಶಲ, ಫಿಟ್ನೆಸ್, ಆಟದ ಅರಿವಿನ ಕುತಿತಾಗಿ ಕೊಹ್ಲಿಗಿಂತ ಹೆಚ್ಚು ಶ್ರಮವಹಿಸಿ ದುಡಿಯಬೇಕಾಗುತ್ತದೆ,' ಎಂದು ಮಿಸ್ಬಾ ಅಭಿಪ್ರಾಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications