For Quick Alerts
ALLOW NOTIFICATIONS  
For Daily Alerts
 

Babar Azam: ವಿರಾಟ್ ಕೊಹ್ಲಿಯಿಂದಾಗ ವಿಶ್ವ ದಾಖಲೆ ಸರಿಗಟ್ಟಿದ ಬಾಬರ್ ಅಜಮ್

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಬಾಬರ್ ಅಜಮ್ ಇತಿಹಾಸ ಸೃಷ್ಟಿಸಿದ್ದಾರೆ. ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಬಾಬರ್ ಅಜಮ್ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಸಾಧಿಸಲು ಸಾಧ್ಯವಾಗದ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ. ಆದರೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬಾಬರ್ ಅಜಮ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಆದರೆ 29 ರನ್ ಗಳಿಸಿ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ಬಾಬರ್ ಅಜಮ್ ಏಕದಿನ ಪಂದ್ಯಗಳಲ್ಲಿ ವೇಗವಾಗಿ 6000 ರನ್‌ಗಳನ್ನು ಪೂರ್ಣಗೊಳಿಸಿದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ದಾಖಲೆಯನ್ನು ಮಾಡುವಲ್ಲಿ ವಿರಾಟ್ ಕೊಹ್ಲಿ ಹಿಂದೆ ಉಳಿದಿದ್ದಾರೆ. ಬಾಬರ್ ಅಜಮ್ ಏಕದಿನ ಮಾದರಿಯಲ್ಲಿ 6000 ರನ್ ಪೂರೈಸಲು ಕೇವಲ 10 ರನ್ ಗಳ ಅಗತ್ಯವಿತ್ತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬಾಬರ್ ಅಜಮ್ 29 ರನ್ ಗಳಿಸುವ ಮೂಲಕ ಹೊಸ ಸಾಧನೆ ಮಾಡಿದರು.

Babar Azam equals world record held by Virat Kohli

ಬಾಬರ್ ಅಜಮ್ ಏಕದಿನ ಕ್ರಿಕೆಟ್‌ನಲ್ಲಿ 123ನೇ ಇನ್ನಿಂಗ್ಸ್ ಮತ್ತು 126ನೇ ಪಂದ್ಯದಲ್ಲಿ 6000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿಗಿಂತ ಮೊದಲು ಈ ಸಾಧನೆ ಮಾಡಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆರಂಭಿಕ ಬ್ಯಾಟರ್ ಹಾಶಿಮ್ ಆಮ್ಲಾ ಕೂಡ 123 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಈಗ ಹಾಶಿಮ್ ಆಮ್ಲಾ ಮತ್ತು ಬಾಬರ್ ಅಜಮ್ ಏಕದಿನ ಪಂದ್ಯಗಳಲ್ಲಿ 6000 ರನ್‌ಗಳನ್ನು ಪೂರ್ಣಗೊಳಿಸಿದ ಅತ್ಯಂತ ವೇಗದ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಹೈದರಾಬಾದ್‌ನಲ್ಲಿ ಶ್ರೀಲಂಕಾ ವಿರುದ್ಧ 2014 ರಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 136ನೇ ಇನ್ನಿಂಗ್ಸ್‌ನಲ್ಲಿ 6000 ರನ್‌ಗಳನ್ನು ಕಲೆ ಹಾಕಿದ್ದರು. ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ (139) ಮತ್ತು ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಡೇವಿಡ್ ವಾರ್ನರ್ (139) ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 6000 ರನ್ ಗಳಿಸಿದ ಟಾಪ್ -5 ಪುರುಷ ಕ್ರಿಕೆಟಿಗರಲ್ಲಿ ಸ್ಥಾನ ಪಡೆದಿದ್ದಾರೆ.

ಬಾಬರ್ ಅಜಮ್ ಮೇ 2023 ರಲ್ಲಿ ಕೇವಲ 97 ಪಂದ್ಯಗಳಲ್ಲಿ 5000 ಏಕದಿನ ರನ್‌ಗಳನ್ನು ಪೂರ್ಣಗೊಳಿಸಿದ ದಾಖಲೆ ಸೃಷ್ಟಿಸಿದ್ದರು. ಈ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 5000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಏಕದಿನ ವಿಶ್ವಕಪ್ ನಂತರ, ಬಾಬರ್ ನಿರಂತರವಾಗಿ ಕಳಪೆ ಫಾರ್ಮ್ ಎದುರಿಸಿದರು. ಬಾಬರ್ ತಮ್ಮ ಕೊನೆಯ 7 ಏಕದಿನ ಪಂದ್ಯಗಳಲ್ಲಿ ಕೇವಲ ಎರಡು ಬಾರಿ ಮಾತ್ರ ಐವತ್ತಕ್ಕೂ ಹೆಚ್ಚು ರನ್ ಗಳಿಸಲು ಸಾಧ್ಯವಾಗಿದೆ.

ವೇಗವಾಗಿ 6000 ರನ್ ಗಳಿಸಿದ ಬ್ಯಾಟರ್ಸ್

ಹಾಶಿಮ್ ಆಮ್ಲಾ (ದಕ್ಷಿಣ ಆಫ್ರಿಕಾ) - 123 ಇನ್ನಿಂಗ್ಸ್
ಬಾಬರ್ ಅಜಮ್ (ಪಾಕಿಸ್ತಾನ) - 123 ಇನ್ನಿಂಗ್ಸ್
ವಿರಾಟ್ ಕೊಹ್ಲಿ (ಭಾರತ) - 136 ಇನ್ನಿಂಗ್ಸ್
ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) - 139 ಇನ್ನಿಂಗ್ಸ್
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 139 ಇನ್ನಿಂಗ್ಸ್

Story first published: Friday, February 14, 2025, 22:14 [IST]
Other articles published on Feb 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+