T20 World Cup 2024: ಪಾಕಿಸ್ತಾನ ಸೋಲಿಗೆ ಕಾರಣ ಬಿಚ್ಚಿಟ್ಟ ಬಾಬರ್ ಅಜಮ್; ನಾಯಕತ್ವ ತೊರೆಯುವ ಬಗ್ಗೆ ಹೇಳಿದ್ದೇನು?
ಭಾರತ ಮತ್ತು ಯುಎಸ್ಎ ವಿರುದ್ಧದ ತನ್ನ ಸೋಲಿನ ಬಗ್ಗೆ ಪಾಕಿಸ್ತಾನ ತೀವ್ರವಾಗಿ ವಿಷಾದಿಸಿದೆ. ಹೀಗಿರುವಾಗ ಐರ್ಲೆಂಡ್ ವಿರುದ್ಧದ ಗೆಲುವಿನ ಬಳಿಕ ನಾಯಕ ಬಾಬರ್ ಅಜಮ್ ತಮ್ಮ ತಂಡದ ಸೋಲಿನ ಬಗ್ಗೆ ಹಾಗು ನಾಯಕತ್ವ ತೊರೆಯುವ ಬಗ್ಗೆ ಮೌನ ಮುರಿದಿದ್ದಾರೆ.
ಭಾನುವಾರ ನಡೆದ ಗುಂಪು ಹಂತದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಪಾಕಿಸ್ತಾನ 3 ವಿಕೆಟ್‌ಗಳ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 107 ರನ್‌ಗಳ ಗುರಿ ನೀಡಿತ್ತು. ಇದನ್ನು ಹಿಂಬಾಲಿಸಿದ ಪಾಕಿಸ್ತಾನ 7 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿ ಜಯಿಸಿತು.

ಐರ್ಲೆಂಡ್ ವಿರುದ್ಧ ಬಾಬರ್ 34 ಎಸೆತಗಳಲ್ಲಿ 32 ರನ್ ಗಳಿಸಿದರು. ಈ ಗೆಲುವಿನೊಂದಿಗೆ ಪಾಕಿಸ್ತಾನ ಟಿ20 ವಿಶ್ವಕಪ್ 2024ರ ಟೂರ್ನಿಗೆ ವಿದಾಯ ಹೇಳಿದೆ.
ಬಾಬರ್ ಅಜಮ್ ಹೇಳಿದ್ದೇನು?
ಪಂದ್ಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಬರ್, 'ನಿಮಗಿಂತ (ಅಭಿಮಾನಿಗಳು) ನಾವು ಹೆಚ್ಚು ದುಃಖಿತರಾಗಿದ್ದೇವೆ. ಆಟಗಾರರು ಮತ್ತು ಮ್ಯಾನೇಜ್‌ಮೆಂಟ್ ಕೂಡ ದುಃಖಿತರಾಗಿದ್ದಾರೆ.
ನಾವು ಆಡಬೇಕಾದ ರೀತಿಯಲ್ಲಿ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ. ಒಬ್ಬ ಆಟಗಾರ ಮಾತ್ರವಲ್ಲ ಇಡೀ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ. ನನ್ನ ಪ್ರಕಾರ ನಮ್ಮ ಬ್ಯಾಟಿಂಗ್ ಈ ಬಾರಿ ಕ್ಲಿಕ್ ಆಗಲಿಲ್ಲ. ಇದರಿಂದಾಗಿ ನಾವು ದೊಡ್ಡ ಪಂದ್ಯಗಳಲ್ಲಿ ಸೋತಿದ್ದೇವೆ ಎಂದು ಹೇಳಿದ್ದಾರೆ.
ನಾಯಕತ್ವದ ಬಗ್ಗೆ ಬಾಬರ್ ಪ್ರತಿಕ್ರಿಯೆ
ನಾಯಕತ್ವದ ಬಗ್ಗೆ ಮಾತನಾಡಿದ ಬಾಬರ್ ಅಜಮ್, ಈ ಹಿಂದೆ ನಾಯಕತ್ವ ತೊರೆಯುವಾಗ ಇನ್ನು ಮುಂದೆ ನಾಯಕನಾಗಿ ಉಳಿಯಬಾರದು ಎಂದು ಅನಿಸಿತ್ತು. ಆದರೆ ಪಿಸಿಬಿ ನಾಯಕತ್ವವನ್ನು ನನಗೆ ಹಿಂದಿರುಗಿಸಿದಾಗ, ಅದು ಅವರ ನಿರ್ಧಾರವಾಗಿತ್ತು.
ಈಗ ಇಲ್ಲಿ ನಡೆದಿರುವ ಬಗ್ಗೆ ಚರ್ಚೆಯಾಗುತ್ತಿದೆ, ಮತ್ತೊಮ್ಮೆ ನಾಯಕತ್ವ ಬಿಟ್ಟರೆ ಎಲ್ಲರಿಗೂ ತಿಳಿಸುತ್ತೇನೆ. ಸದ್ಯಕ್ಕೆ ನಾನು ಅದರ ಬಗ್ಗೆ ಯೋಚಿಸಿಲ್ಲ. ಯಾವುದೇ ನಿರ್ಧಾರ ತೆಗೆದುಕೊಂಡರೂ ಪಿಸಿಬಿ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಟಿ20 ವಿಶ್ವಕಪ್ 2024ರಲ್ಲಿ ಪಾಕ್ ಜರ್ನಿ
ಬಾಬರ್ ಅಜಮ್ ನಾಯಕತ್ವದ ತಂಡವು ಎ ಗುಂಪಿನಲ್ಲಿ ಮೂರನೇ ಸ್ಥಾನ ಗಳಿಸಿತು. ಭಾರತ ಮತ್ತು ಯುಎಸ್ಎ ವಿರುದ್ಧ ತನ್ನ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಸೋಲು ಕಂಡಿತ್ತು. ಹೀಗಾಗಿ ಆರಂಭದಲ್ಲೇ ಪಾಕಿಸ್ತಾನ ಟೂರ್ನಿಯಿಂದ ಹೊರಗುಳಿಯುವ ಸಂಕಷ್ಟದಲ್ಲಿತ್ತು.
ನಂತರ ಕೆನಡಾ ಮತ್ತು ಐರ್ಲೆಂಡ್ ತಂಡಗಳನ್ನು ಪಾಕಿಸ್ತಾನ ಮಣಿಸಿತ್ತು. ಆದಾಗ್ಯೂ, ಪಾಕಿಸ್ತಾನ ಟಿ20 ವಿಶ್ವಕಪ್ 2024ರ ಸೂಪರ್-8 ಸುತ್ತಿಗೆ ಆರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಪರಿಣಾಮ ಭಾನುವಾರ ಐರ್ಲೆಂಡ್ ವಿರುದ್ಧ ಗೆದ್ದ ಪಾಕಿಸ್ತಾನ ತನ್ನ ಟಿ20 ವಿಶ್ವಕಪ್ ಜರ್ನಿಯನ್ನು ಮುಗಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications