ಬಾಬರ್ ಅಝಾಮ್ ವಿರಾಟ್ ಕೊಹ್ಲಿನ ನೋಡಿ ಕಲೀಬೇಕು: ರಮೀಝ್ ರಾಜಾ

ಕರಾಚಿ: ಪಂದ್ಯಗಳನ್ನು ಗೆಲ್ಲೋದು ಹೇಗೆಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ನೋಡಿ ಕಲೀಬೇಕು ಎಂದು ಪಾಕಿಸ್ತಾನ ಮಾಜಿ ಆಟಗಾರ ರಮೀಝ್ ರಾಜಾ ಅವರು ಬಾಬರ್ ಅಝಾಮ್‌ಗೆ ಕಿವಿ ಮಾತು ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಸಂಬಂಧಿಸಿ ರಾಜಾ ಈ ಹೇಳಿಕೆ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕ್ 1-0ಯ ಸೋಲನುಭವಿಸಿದೆ (2 ಪಂದ್ಯ ಡ್ರಾ). ಪಾಕಿಸ್ತಾನ ವೈಟ್ ಬಾಲ್ ಕ್ರಿಕೆಟ್ ನಾಯಕ ಬಾಬರ್ ಅವರನ್ನು ವಿರಾಟ್‌ಗೆ ಹೋಲಿಸಲಾಗುತ್ತಿರುವುದರಿಂದ ಟೆಸ್ಟ್ ವೇಳೆ ಬಾಬರ್ ಮೇಲೆ ಪಾಕ್ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು.
ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳಲ್ಲಿ ಬಾಬರ್ 48.75ರ ಸರಾಸರಿಯಂತೆ 195 ರನ್ ಗಳಿಸಲಷ್ಟೇ ಶಕ್ತವಾಗಿದ್ದಾರೆ. ಇದರಲ್ಲಿ 2 ಅರ್ಧ ಶತಕಗಳು ಸೇರಿವೆ. ಆದರೆ ಬಾಬರ್ ಈ ರನ್ ಪಾಕ್ ಅಭಿಮಾನಿಗಳಿಗೆ ಅಥವಾ ಕ್ರಿಕೆಟ್ ಅಭಿಮಾನಿಗಳಿಗೆ ಸಮಾಧಾನ ತಂದಿಲ್ಲ. ರಾಜಾ ಕೂಡ ಇದೇ ಅರ್ಥದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ಬಾಬರ್ ಅವರನ್ನು ಕೊಹ್ಲಿಗೆ ಹೋಲಿಸೋದು ಸರಿಯಲ್ಲ. ಕೊಹ್ಲಿ ಮ್ಯಾಚ್ ವಿನ್ನರ್. ಬಾಬರ್ ಈಗಷ್ಟೇ ಬೆರಳೆಣಿಕೆಯ ಪಂದ್ಯಗಳನ್ನಾಡುತ್ತಿದ್ದಾರೆ. ಕೊಹ್ಲಿಗೆ ಹೋಲಿಸುವುದನ್ನು ಬಾಬರ್ ಒತ್ತಡವಾಗಿ ತೆಗೆದುಕೊಳ್ಳಬಾರದು,' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆಗಿನ ಸಂದರ್ಶನದಲ್ಲಿ ರಮೀಝ್ ಹೇಳಿದ್ದಾರೆ.
ಮಾತು ಮುಂದುವರೆಸಿದ ರಮೀಝ್, 'ಪಂದ್ಯಗಳನ್ನು ಗೆಲ್ಲೋದು ಹೇಗೆಂದು ಬಾಬರ್ ಅಝಾಮ್ ಅವರು ಕೊಹ್ಲಿಯಿಂದ ಕಲಿಯಬೇಕಿದೆ. ಬ್ಯಾಟಿಂಗ್ ಮಾಡುವಾಗ ಬಾಬರ್ ಚೆಂಡಿನ ಕಡೆಗೆ ನೋಡಬೇಕೇ ಹೊರತು ಕೊಹ್ಲಿ ಜೊತೆಗಿನ ಹೋಲಿಕೆಯ ಬಗ್ಗೆ ಚಿಂತಿಸಬಾರದು,' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications