Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Babar Azam: ಕೊಹ್ಲಿ-ರೋಹಿತ್ ಕ್ಲಬ್ ಸೇರಲು ಬಾಬರ್ ಅಜಮ್‌ಗೆ '102' ರನ್ ಅವಶ್ಯಕ

ಪಾಕಿಸ್ತಾನ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಎರಡು ತಿಂಗಳ ವಿರಾಮದ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶಾನ್ ಮಸೂದ್ ನೇತೃತ್ವದ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮೊದಲ ಟೆಸ್ಟ್ ಇಂದಿನಿಂದ (ಆಗಸ್ಟ್ 21) ರಾವಲ್ಪಿಂಡಿಯಲ್ಲಿ ಆರಂಭವಾಗಿದೆ. ಈ ಸರಣಿಯಲ್ಲಿ ಬಾಬರ್ ಅಜಮ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದು, ದೊಡ್ಡ ದಾಖಲೆ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಅಲ್ಲದೆ, ಪಾಕಿಸ್ತಾನ ಪರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸುವ ತವಕದಲ್ಲಿದ್ದಾರೆ.

Babar Azam ready to create new record in International cricket

ಬಾಬರ್ ಪಾಕಿಸ್ತಾನ ಪರ ಇದುವರೆಗೆ 52 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು 45.86 ಸರಾಸರಿಯಲ್ಲಿ 3898 ರನ್ ಗಳಿಸಿದ್ದು, ತಮ್ಮ ಹೆಸರಿನಲ್ಲಿ 9 ಶತಕ ಮತ್ತು 26 ಅರ್ಧ ಶತಕಗಳನ್ನು ಹೊಂದಿದ್ದಾರೆ. ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ಬಾಬರ್ 117 ಪಂದ್ಯಗಳಲ್ಲಿ 56.72 ಸರಾಸರಿಯಲ್ಲಿ 5729 ರನ್ ಗಳಿಸಿದ್ದಾರೆ. ಟಿ20ಯಲ್ಲೂ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. 123 ಪಂದ್ಯಗಳಲ್ಲಿ 4145 ರನ್ ಕಲೆ ಹಾಕಿದ್ದಾರೆ.

ಇತಿಹಾಸ ಸೃಷ್ಟಿಸುವ ಅವಕಾಶ

ಬಾಂಗ್ಲಾದೇಶ ವಿರುದ್ಧ ಬಾಬರ್ ವಿಶೇಷ ಸಾಧನೆ ಮಾಡುವ ಸಾಧ್ಯತೆಗಳಿವೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು 102 ರನ್ ಗಳಿಸಿದರೆ, ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ (ಟೆಸ್ಟ್, ಏಕದಿನ ಮತ್ತು ಟಿ20) 4000 ರನ್ ಬಾರಿಸಿದ ಪಾಕಿಸ್ತಾನದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪರ ಇದುವರೆಗೆ ಯಾವ ಬ್ಯಾಟರ್ ಈ ಸಾಧನೆ ಮಾಡಿಲ್ಲ. ಇನ್ನು ಈ ದಾಖಲೆ ಮಾಡುವ ಮೂಲಕ ಬಾಬರ್ ವಿಶ್ವದ ಮೂರನೇ ಬ್ಯಾಟರ್ ಆಗಲಿದ್ದಾರೆ. ಇದಕ್ಕೂ ಮುನ್ನ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈ ಮೈಲಿಗಲ್ಲು ತಲುಪಿದ್ದಾರೆ.

ವಿರಾಟ್ ಕೊಹ್ಲಿ ನಂ-1

ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ 4000 ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್. ಈ ದಾಲಖೆಯನ್ನು ಅವರು 2022ರ ಟಿ20 ವಿಶ್ವಕಪ್‌ ಸೆಮಿಫೈನಲ್ ಪಂದ್ಯದಲ್ಲಿ ಮಾಡಿದ್ದರು.

ಕೊಹ್ಲಿ ನಂತರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಸಾಧನೆಯ ಶಿಖರವನ್ನು ಏರಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು 4 ಸಾವಿರ ರನ್ ಪೂರೈಸಿದ್ದರು.

Story first published: Wednesday, August 21, 2024, 15:28 [IST]
Other articles published on Aug 21, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+