For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಯಿಂದ ಕಲಿತ ಪಾಠವೇನೆಂದು ವಿವರಿಸಿದ ಪಾಕಿಸ್ತಾನ ನಾಯಕ ಬಾಬರ್ ಅಜಂ

ಕ್ರಿಕೆಟ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪೈಪೋಟಿ ಇಂದು ನಿನ್ನೆಯದಲ್ಲ. ಸುದೀರ್ಘ ಕಾಲದಿಂದ ಈ ಎರಡು ತಂಡಗಳು ಕ್ರಿಕೆಟ್ ಮೈದಾನದಲ್ಲಿ ಬದ್ಧ ಎದುರಾಳಿಗಳಾಗಿ ಕಾದಾಟ ನಡೆಸುತ್ತಿವೆ. ಈ ಬಾರಿಯ ಮತ್ತೊಮ್ಮೆ ಅಂಥಾದ್ದೇ ಮುಖಾಮುಖಿಗೆ ಏಷ್ಯಾಕಪ್ ಟೂರ್ನಿ ಸಿದ್ಧವಾಗಿದ್ದು ಶನಿವಾರ ಭಾರತ ಹಾಗೂ ಪಾಕ್ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಈ ಪಂದ್ಯದ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಮಡಿಯಾದ ಮಾಜಿ ನಾಯಕ ಹಿರಿಯ ಆಟಗಾರ ವಿರಾಟ್ ಕೊಹ್ಲಿ ವಿಚಾರವಾಗಿ ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. 2019ರಲ್ಲಿ ನಡೆದ ಏಕದಿನ ವಿಶ್ವಕಪ್‌ನ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜೊತೆಗೆ ನಡೆದ ಮಾತುಕತೆ ಹಾಗೂ ಅದರಿಂದ ಪಡೆದುಕೊಂಡ ಪ್ರಯೋಜನದ ಬಗ್ಗೆ ವಿವರಿಸಿದ್ದಾರೆ ಬಾಬರ್ ಅಜಂ.

Babar Azam statement on Virat Kohli said learned lot from Indian legend

"ನಾನು ವಿರಾಟ್ ಕೊಹ್ಲಿಯಿಂದ ಸಾಕಷ್ಟು ಕಲಿತಿದ್ದೇನೆ. ವಿರಾಟ್ ಕೊಹ್ಲಿಯಂತಾ ದೊಡ್ಡ ಆಟಗಾರ ನಿಮ್ಮ ಬಗ್ಗೆ ಸಕಾರಾತ್ನಕವಾಗಿ ಏನಾದರು ಹೇಳಿದರೆ ಅದು ನಿಮಗೆ ಸಾಖಷ್ಟು ಆತ್ಮವಿಶ್ವಾಸ ನೀಡುತ್ತದೆ. ಅದು ನನಗೆ ಹೆಮ್ಮೆಯ ಸಂದರ್ಭ" ಎಂದು ಬಾಬರ್ ಅಜಂ ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತುನಾಡುತ್ತಾ ವಿವರಿಸಿದ್ದಾರೆ.

"2019ರಲ್ಲಿ ನಾನು ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿದ್ದಾಗ ಅವರು ಆಗ ತಮ್ಮ ಅತ್ಯುನ್ನತ ಫಾರ್ಮ್‌ನಲ್ಲಿದ್ದರು. ಈಗಲೂ ಕೂಡ ಅವರು ತಮ್ಮ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಬ್ಯಾಟಿಂಗ್‌ನ ವಿಚಾರವಾಗಿ ನಾನು ಅವರಲ್ಲಿ ಕೆಲ ಸಂದೇಹಗಳನ್ನು ಕೇಳಿದ್ದೆ. ಅದಕ್ಕೆ ಅವರು ಸವಿವರವಾಗಿ ಪ್ರತಿಕ್ರಿಯೆ ನೀಡಿದ್ದರು. ಅದರಿಂದಾಗಿ ನನಗೆ ಸಾಕಷ್ಟು ಸಹಾಯವಾಗಿದೆ" ಎಂದಿದ್ದಾರೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ.

"ನಾನು ಅವರನ್ನು ಆರಂಭದಲ್ಲಿ ನೋಡಿದಾಗಿನಿಂದಲೂ ನ್ನ ಮೇಲೆ ಗೌರವ ಆದರವನ್ನು ತೋರಿಸಿದ್ದಾರೆ. ವಿಶ್ವದ ಅಗ್ರ ಕ್ರಿಕೆಟಿಗನಿಂದ ಅದು ಯಾವತ್ತೂ ಕಡಿಮೆಯಾಗಿರಲಿಲ್ಲ. ನನ್ನ ಮೇಲೆ ಅವರ ವರ್ತನೆ ಬದಲಾಗಿದ್ದು ಯಾವತ್ತೂ ನಾನು ಕಂಡಿಲ್ಲ" ಎಂದಿದ್ದಾರೆ ಪಾಕಿಸ್ತಾನದ ನಾಯಕ ಬಾಬರ್ ಅಜಂ.

ಇನ್ನು ಬಾಬರ್ ಅಜಂ ಈ ಬಾರಿಯ ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದು 151 ರನ್‌ಗಳನ್ನು ಕಲೆಹಾಕಿದ್ದರು. ಈ ಮೂಲಕ ನೇಪಾಳದ ವಿರುದ್ಧ ಪಾಕಿಸ್ತಾನ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು. ಮೊದಲ ಪಂದ್ಯದಲ್ಲಿ ನೇಪಾಳದ ವಿರುದ್ಧ ಗೆಲುವು ಸಾಧಿಸಿರುವ ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು ಶನಿವಾರ ಭಾರತದ ವಿರುದ್ಧ ಆಡಲಿದೆ.

Story first published: Thursday, August 31, 2023, 17:20 [IST]
Other articles published on Aug 31, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+