ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಪಾಕಿಸ್ತಾನದ ಬಾಬರ್ ಅಜಮ್ ನಂ.1; ಕೊಹ್ಲಿಗೆ ಎಷ್ಟನೇ ಸ್ಥಾನ ಗೊತ್ತಾ?

ಸದ್ಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯತ್ತ ಇದೆ. ಟೂರ್ನಿ ಸೆಮಿಫೈನಲ್ ಸನಿಹಕ್ಕೆ ಬಂದಿದ್ದು, ಸೂಪರ್ 12 ಹಂತದಲ್ಲಿ ಉಳಿದಿರುವ ಪಂದ್ಯಗಳು ಸಾಕಷ್ಟು ದೊಡ್ಡ ಮಟ್ಟದ ಕುತೂಹಲ ಮತ್ತು ರೋಚಕತೆಯನ್ನು ಹುಟ್ಟುಹಾಕುತ್ತಿವೆ.
ಇನ್ನು ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ತಮ್ಮ ಅಮೋಘ ಪ್ರದರ್ಶನದಿಂದ ಅಧಿಕೃತವಾಗಿ ಸೆಮಿಫೈನಲ್ ಹಂತವನ್ನು ಪ್ರವೇಶಿಸಿವೆ. ಹೌದು, ಟೂರ್ನಿಯಲ್ಲಿ ಇದುವರೆಗೂ ಒಟ್ಟು 4 ಪಂದ್ಯಗಳನ್ನಾಡಿರುವ ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ಎಲ್ಲಾ ಪಂದ್ಯಗಳನ್ನು ಗೆಲ್ಲುವುದರ ಮೂಲಕ 8 ಅಂಕಗಳನ್ನು ಪಡೆದುಕೊಂಡು ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿದ ಮೊದಲನೇ ತಂಡ ಎನಿಸಿಕೊಂಡಿತು. ಇದಾದ ಬಳಿಕ ಇತ್ತೀಚೆಗಷ್ಟೇ ಪಾಕಿಸ್ತಾನ ತಂಡ ಕೂಡ ನಮೀಬಿಯಾ ವಿರುದ್ಧ ಗೆದ್ದು ಟೂರ್ನಿಯಲ್ಲಿ ತನ್ನ ಸತತ ನಾಲ್ಕನೇ ಗೆಲುವನ್ನು ದಾಖಲಿಸುವುದರ ಮೂಲಕ 8 ಅಂಕಗಳನ್ನು ಪಡೆದುಕೊಂಡು ಸೆಮಿಫೈನಲ್ ಸುತ್ತಿಗೆ ಅಧಿಕೃತವಾಗಿ ಲಗ್ಗೆ ಇಟ್ಟ ಎರಡನೇ ತಂಡ ಎನಿಸಿಕೊಂಡಿತು.
ಮೊದಲಿಗೆ ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ನಂತರ ತನ್ನ ದ್ವಿತೀಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗಿತ್ತು. ಇನ್ನು ತೃತೀಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೆಣಸಾಡಿದ ಪಾಕಿಸ್ತಾನ ಮೂರನೇ ಗೆಲುವನ್ನು ದಾಖಲಿಸಿತು ಹಾಗೂ ನಮೀಬಿಯಾ ವಿರುದ್ಧ ತನ್ನ ನಾಲ್ಕನೇ ಗೆಲುವನ್ನು ಪಾಕಿಸ್ತಾನ ತಂಡ ಪಡೆದುಕೊಂಡಿತು. ಈ 4 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅದರಲ್ಲಿಯೂ ಟೀಮ್ ಇಂಡಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧ ಬಾಬರ್ ಅಜಮ್ ಸಿಡಿಸಿದ ಅರ್ಧ ಶತಕಗಳು ಇದೀಗ ಅವರಿಗೆ ಟಿ ಟ್ವೆಂಟಿ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ತಂದುಕೊಟ್ಟಿವೆ. ಹೌದು, ನೂತನವಾಗಿ ಬಿಡುಗಡೆಯಾಗಿರುವ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಶ್ರೇಯಾಂಕದಲ್ಲಿ ಬಾಬರ್ ಅಜಮ್ ಅಗ್ರಸ್ಥಾನಕ್ಕೇರಿದ್ದು ಡೇವಿಡ್ ಮಲನ್ ಅವರನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದ್ದಾರೆ. ಹೀಗೆ ಹೊಸದಾಗಿ ಬಿಡುಗಡೆಯಾಗಿರುವ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಶ್ರೇಯಾಂಕದಲ್ಲಿ ಟಾಪ್ 5 ಸ್ಥಾನ ಪಡೆದುಕೊಂಡಿರುವ ಬ್ಯಾಟ್ಸ್‌ಮನ್, ಬೌಲರ್‌ಗಳು ಮತ್ತು ಆಲ್ ರೌಂಡರ್ ಆಟಗಾರರ ಪಟ್ಟಿ ಮುಂದೆ ಇದೆ ಓದಿ..

ಟಾಪ್ 5 ಬ್ಯಾಟ್ಸ್‌ಮನ್‌ಗಳು
ನೂತನವಾಗಿ ಪ್ರಕಟವಾಗಿರುವ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಶ್ರೇಯಾಂಕದಲ್ಲಿ ಟಾಪ್ 5 ಸ್ಥಾನ ಪಡೆದುಕೊಂಡಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿ ಈ ಕೆಳಕಂಡಂತಿದೆ.
1. ಬಾಬರ್ ಅಜಮ್ (ಪಾಕಿಸ್ತಾನ): 834 ಅಂಕಗಳು
2. ಡೇವಿಡ್ ಮಲನ್ (ಇಂಗ್ಲೆಂಡ್): 798 ಅಂಕಗಳು
3. ಆ್ಯರನ್ ಫಿಂಚ್ (ಆಸ್ಟ್ರೇಲಿಯಾ): 733 ಅಂಕಗಳು
4. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ): 731 ಅಂಕಗಳು
5. ವಿರಾಟ್ ಕೊಹ್ಲಿ (ಭಾರತ): 714 ಅಂಕಗಳು

ಟಾಪ್ 5 ಬೌಲರ್‌ಗಳು
ನೂತನವಾಗಿ ಪ್ರಕಟವಾಗಿರುವ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಶ್ರೇಯಾಂಕದಲ್ಲಿ ಟಾಪ್ 5 ಸ್ಥಾನ ಪಡೆದುಕೊಂಡಿರುವ ಬೌಲರ್‌ಗಳ ಪಟ್ಟಿ ಈ ಕೆಳಕಂಡಂತಿದೆ.
1. ವನಿಂದು ಹಸರಂಗ (ಶ್ರೀಲಂಕಾ): 776 ಅಂಕಗಳು
2. ತಬ್ರೈಜ್ ಸಂಶಿ ( ದ. ಆಫ್ರಿಕಾ): 770 ಅಂಕಗಳು
3. ಆದಿಲ್ ರಶೀದ್ (ಇಂಗ್ಲೆಂಡ್): 730 ಅಂಕಗಳು
4. ರಶೀದ್ ಖಾನ್ (ಅಫ್ಘಾನಿಸ್ತಾನ): 723 ಅಂಕಗಳು
5. ಮುಜೀಬ್ ಉರ್ ರಹಮಾನ್ (ಅಫ್ಘಾನಿಸ್ತಾನ): 703 ಅಂಕಗಳು

ಟಾಪ್ 5 ಆಲ್ ರೌಂಡರ್ ಆಟಗಾರರು
ನೂತನವಾಗಿ ಪ್ರಕಟವಾಗಿರುವ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಶ್ರೇಯಾಂಕದಲ್ಲಿ ಟಾಪ್ 5 ಸ್ಥಾನ ಪಡೆದುಕೊಂಡಿರುವ ಆಲ್ ರೌಂಡರ್ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.
1. ಮೊಹಮ್ಮದ್ ನಬಿ (ಅಫ್ಘಾನಿಸ್ತಾನ): 271 ಅಂಕಗಳು
1. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ): 271 ಅಂಕಗಳು
2. ಜೆಜೆ ಸ್ಮಿತ್ ( ನಮೀಬಿಯಾ ): 175 ಅಂಕಗಳು
3. ವನಿಂದು ಹಸರಂಗ (ಶ್ರೀಲಂಕಾ): 172 ಅಂಕಗಳು
4. ಜೀಶನ್ ಮಕ್ಸೂದ್ ( ಒಮನ್): 160 ಅಂಕಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications