For Quick Alerts
ALLOW NOTIFICATIONS  
For Daily Alerts
 

ವಿರಾಟ್‌ ಕೊಹ್ಲಿ ಜೊತೆಗಿನ ಹೋಲಿಕೆಗೆ ಬಾಬರ್ ಗರಂ

ವಿಶ್ವ ಕ್ರಿಕೆಟ್‌ನಲ್ಲಿ ಬೆಸ್ಟ್‌ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿರಾಟ್‌ ಕೊಹ್ಲಿ. ಸದ್ಯ ಭಾರತದ ಪರ ಏಕದಿನ ಕ್ರಿಕೆಟ್ ಮಾತ್ರ ಆಡುತ್ತಿದ್ದಾರೆ. ಇವರು ಈಗಾಗಲೇ ಟೆಸ್ಟ್‌ ಹಾಗೂ ಟಿ20 ಫಾರ್ಮೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇವರನ್ನು ಹಲವು ಬಾರಿ ಪಾಕಿಸ್ತಾನದ ಬಾಬರ್ ಅಜಮ್ ಅವರೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಅಂಕಿಅಂಶಗಳ ಲೆಕ್ಕಾಚಾರ, ಆಟದ ಶೈಲಿಯಲ್ಲಿ ಬಾಬರ್ ಅವರಿಗಿಂತ ವಿರಾಟ್ ಎಷ್ಟೋ ಮುಂದಿದ್ದಾರೆ. ಆದರೂ ಪಾಕ್‌ ಈ ಹೋಲಿಕೆ ಮಾಡುತ್ತಲೇ ಇರುತ್ತದೆ.

ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಇನ್ನು ಪಾಕಿಸ್ತಾನದಲ್ಲಿ ಪಿಎಸ್‌ಎಲ್‌ ನಡೆಯುತ್ತಿದೆ. ಪಿಎಸ್‌ಎಲ್‌ನಲ್ಲಿ ಬಾಬರ್ ಪೇಶಾವರ್ ಜಲ್ಮಿ ತಂಡದ ಪರ ಬ್ಯಾಟ್ ಮಾಡುತ್ತಿದ್ದಾರೆ. ಇದೇ ವೇಳೆ ಪತ್ರಿಕಾಗೋಷ್ಠಿಗೆ ಬಾಬರ್ ಹಾಜರಾಗಿದ್ದರು. ಇದೇ ವೇಳೆ ಪತ್ರಕರ್ತರು ಕೆಣಕಿದರು.

Babar Azam

ಬಾಬರ್ ಅಜಮ್ ಪೇಶಾವರ್ ಜಲ್ಮಿಯ ನಾಯಕರಾಗಿ ಕಣಕ್ಕೆ ಇಳಿದಿದ್ದಾರೆ. ಬುಧವಾರ ಪೇಶಾವರ್ ಕೊನೆಯ ಓವರ್‌ನಲ್ಲಿ ಪಂದ್ಯವನ್ನು ಗೆದ್ದಿತು. ಈ ಪಂದ್ಯವನ್ನು ಪೇಶಾವರ್ ಕಷ್ಟ ಪಟ್ಟು ಗೆದ್ದಿತು. ಈ ಪಂದ್ಯದಲ್ಲಿ ಬಾಬರ್ ಅಜಮ್‌ ಚೆನ್ನಾಗಿ ಬ್ಯಾಟ್ ಮಾಡಿದರೂ ಸಹ ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಲ್ಲಿ ವಿಫಲರಾದರು. ಪಂದ್ಯದ ನಂತರ ಬಾಬರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಾದರು. ಈ ವೇಳೆ ಪತ್ರಕರ್ತ ಅವರಿಗೆ ಕೆಣಕುವ ಪ್ರಶ್ನೆಯೊಂದನ್ನು ಕೇಳಿದರು. ಅದು ಅವರನ್ನು ಕೋಪಗೊಳಿಸಿತು.

ಪತ್ರಕರ್ತ ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಹಾಗೂ ನಿಮ್ಮನ್ನು ಹೋಲಿಕೆ ಮಾಡಲಾಗುತ್ತದೆ. ಆದರೆ ಇಂತಹ ಪಂದ್ಯಗಳಲ್ಲಿ ವಿರಾಟ್‌ ಬ್ಯಾಟ್ ಮಾಡಿದಾಗ ತಂಡವನ್ನು ಜಯದ ಗೆರೆ ದಾಟಿಸುತ್ತಾರೆ ಎಂದು ಪ್ರಶ್ನೆ ಕೇಳಲಾಯಿತು. ಆಗ ಬಾಬರ್‌ ನೀವು ಕೇಳುತ್ತಿರುವ ಪ್ರಶ್ನೆಯನ್ನು ಇಲ್ಲಿಗೆ ನಿಲ್ಲಿಸಿಬಿಡಿ. ನಾನು ಸಹ ಬಹಳ ಪಂದ್ಯಗಳನ್ನು ಫಿನಿಷ್ ಮಾಡಿರುವೆ. ನಿಮಗೆ ಹಾಗೆ ಅನಿಸುತ್ತಿಲ್ಲ ಅಷ್ಟೇ ಎಂದು ತಿಳಿಸಿದರು. ಈ ವಿಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಪಂದ್ಯದ ಫಲಿತಾಂಶ

ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಕಿಂಗ್ಸ್‌ಮೆನ್ 18.2 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟ್ ಆಯಿತು. ಹೈದರಾಬಾದ್ ತಂಡದ ಪರ ಕುಸಾಲ್ ಪೆರೆರಾ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 58 ರನ್‌ ಬಾರಿಸಿದರು. ಮಾರ್ನಸ್‌ ಲಬುಶೇನ್‌ 27 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಗುರಿಯನ್ನು ಬೆನ್ನಟ್ಟಿದ ಪೇಶಾವರ್ ತಂಡದ ಪರ ಬಾಬರ್ ಅಜಮ್‌ ಸ್ಥಿರ ಪ್ರದರ್ಶನ ನೀಡಿದರು. ಇವರು 37 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 43 ರನ್‌ ಬಾರಿಸಿದರು. ತಂಡದ ಗೆಲುವಿನಗೆ ಇನ್ನು 30 ರನ್ ಅವಶ್ಯಕತೆ ಇದ್ದಾಗ ಬಾಬರ್‌ ನಾಲ್ಕನೇ ವಿಕೆಟ್‌ ರೂಪದಲ್ಲಿ ಔಟ್ ಆದರು. ಅಂತಿಮವಾಗಿ ಪೇಶಾವರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 146 ರನ್‌ ಸೇರಿಸಿ ಜಯ ಸಾಧಿಸಿತು.

Story first published: Thursday, April 9, 2026, 17:18 [IST]
Other articles published on Apr 9, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+