ಮೆಸ್ಸಿಗೆ ಒಂದು ನಿಯಮ, ಬಾಲೋಗನ್‌ಗೆ ಇನ್ನೊಂದು ನಿಯಮ? ವಿವಾದಾತ್ಮಕ VAR ತೀರ್ಪಿನಿಂದ ಯುಎಸ್‌ಎ ಸ್ಟ್ರೈಕರ್‌ಗೆ ರೆಡ್ ಕಾರ್ಡ್
ಫಿಫಾ ವಿಶ್ವಕಪ್ 2026ರ ಮಹತ್ವದ ಪಂದ್ಯಗಳ ರೋಚಕತೆ ಅಭಿಮಾನಿಗಳ ಮನ ಗೆದ್ದಿದೆ. ಗುರುವಾರ ಬೋಸ್ನಿಯಾ ಮತ್ತು ಹರ್ಜೆಗೋವಿನಾ ವಿರುದ್ಧದ ಯುಎಸ್‌ಎ ಪಂದ್ಯ ಈಗ ಚರ್ಚೆಗೆ ಗ್ರಾಸವಾಸಗಿದೆ. ಈ ಪಂದ್ಯದಲ್ಲಿ ಅಮೆರಿಕದ ಸ್ಟಾರ್ ಆಟಗಾರ ಬಾಲೋಗುನ್ ಅವರಿಗೆ ನೀಡಿದ್ದ ರೆಡ್ ಕಾರ್ಡ್ ನೀಡಿದ್ದು ವಿವಾದ ಹುಟ್ಟಿಸಿದೆ.
ಪಂದ್ಯದಲ್ಲಿ ಅಮೆರಿಕ ಅಮೋಘ ಪ್ರದರ್ಶನ ನೀಡಿ ಪಂದ್ಯದ ಮೇಲೆ ತನ್ನ ಹಿಡಿತವನ್ನು ಸಾಧಿಸಿತ್ತು. ಮೊದಲ ಅರ್ಧದ 45ನೇ ನಿಮಿಷದಲ್ಲಿ ಅಮೆರಿಕದ ಸ್ಟ್ರೈಕರ್ ಬಾಲೋಗುನ್ ಗೋಲು ಬಾರಿಸಿ ಮಿಂಚಿದರು. ಪರಿಣಾಮ ಯುಎಸ್‌ಎ ಈ ಅವಧಿಯಲ್ಲಿ 1-0 ಮುನ್ನಡೆ ಸಾಧಿಸಿತು. ಈ ಪಂದ್ಯದ 64ನೇ ನಿಮಿಷದಲ್ಲಿ ಬಾಲೋಗುನ್ ಅವರಿಗೆ ರೆಡ್ ಕಾರ್ಡ್ ನೀಡಲಾಯಿತು. ಈಗ ಇವರಿಗೆ ರೆಡ್ ಕಾರ್ಡ್ ನೀಡಿದ್ದು ವಿವಾದ ಹುಟ್ಟಿಸಿದೆ.

ಆಗಿದ್ದೇನು?
ಅಮೆರಿಕದ ಬಾಲೋಗುನ್ ಹಾಗೂ ಬೋಸ್ನಿಯಾ ತಂಡದ ತಾರಿಕ್ ಮುಹಾರೆಮೋವಿಚ್ ಜೊತೆ ಚೆಂಡಿಗಾಗಿ ಸೆಣಸಾಟ ನಡೆಸುತ್ತಿದ್ದಾಗ, ಇಬ್ಬರ ಕಾಲುಗಳು ಸಿಲುಕಿಕೊಂಡವು. ಈ ದೃಶ್ಯವನ್ನು ಸೂಪರ್-ಸ್ಲೋ ಮೋಷನ್‌ನಲ್ಲಿ ನೋಡಿದಾಗ ಬಾಲೋಗುನ್ ಅವರ ಕಾಲು ಬೋಸ್ನಿಯನ್ ಡಿಫೆಂಡರ್ ಅವರ ಪಾದದ ಮೇಲ್ಭಾಗದ ಸ್ನಾಯುವಿಗೆ ಬಡಿದಿದ್ದರಿಂದ ಅವರು ಕೆಳಗೆ ಬಿದ್ದರು.
ಈ ಪಂದ್ಯದಲ್ಲಿ ರೆಫ್ರಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಬ್ರೆಜಿಲ್‌ನ ರಾಫೆಲ್ ಕ್ಲಾಸ್ ಅವರಿಗೆ ವಿಎಆರ್ ಮೈದಾನದ ಪಕ್ಕದಲ್ಲಿದ್ದ ಸ್ಕ್ರೀನ್ ನೋಡಲು ಸೂಚಿಸಿದರು. ಈ ವರೆಗೆ ಪಂದ್ಯ ನಿಂತಿತ್ತು. ದೃಶ್ಯವನ್ನು ಸ್ಕ್ರೀನ್ ಮೇಲೆ ನೋಡಿದ ರೆಫ್ರಿ ಕ್ಲಾಸ್ ತಮ್ಮ ನಿರ್ಣಯವನ್ನು ಅಂತಿಮಗೊಳಿಸಿದರು. ಮೈದಾನಕ್ಕೆ ಬರುತ್ತಲೇ ರೆಫ್ರಿ ಅಮೆರಿಕದ ಆಟಗಾರ ಬಾಲೋಗುನ್ ಅವರಿಗೆ ರೆಡ್ ಕಾರ್ಡ್ ನೀಡಿದರು.
ಬಾಲೋಗುನ್ ಅವರಿಗೆ ರೆಡ್ ಕಾರ್ಡ್ ನೀಡುತ್ತಿದ್ದಂತೆ ಅಭಿಮಾನಿಗಳು ಚರ್ಚೆ ಆರಂಭಿಸಿದರು. ಅರ್ಜೆಂಟೀನಾ ಹಾಗೂ ಅಲ್ಜಿರಿಯಾ ವಿರುದ್ಧದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಅವರು ಸಹ ಇಂತಹದ್ದೇ ತಪ್ಪನ್ನು ಮಾಡಿದ್ದರು. ಆದರೆ ಮೆಸ್ಸಿ ಅವರಿಗೆ ರೆಫ್ರಿ ಯಾವುದೇ ಶಿಕ್ಷೆ ವಿಧಿಸಲಿಲ್ಲ ಎಂದು ತಿಳಿಸಿದ್ದಾರೆ.
ಪಂದ್ಯದ ಫಲಿತಾಂಶ
ರೌಂಡ್ ಆಫ್ 32ರಲ್ಲಿ ಯುಎಸ್‌ಎ 2-0 ಗೋಲುಗಳಿಂದ ಬೋಸ್ನಿಯಾ ಮತ್ತು ಹರ್ಜೆಗೋವಿನಾ ವಿರುದ್ಧ ಭರ್ಜರಿ ಜಯ ಸಾಧಿಸಿತು. ಯುಎಸ್‌ಎ ರೌಂಡ್ ಆಫ್ 16ನಲ್ಲಿ ಬೆಲ್ಜಿಯಂ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯ ಜುಲೈ 7 ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications