Ban Vs Eng 1st ODI: ಡೇವಿಡ್ ಮಲಾನ್ ಶತಕದ ಆಸರೆ: ಬಾಂಗ್ಲಾದೇಶದ ವಿರುದ್ಧ ಇಂಗ್ಲೆಂಡ್‌ಗೆ ರೋಚಕ ಜಯ

ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಡೇವಿಡ್ ಮಲಾನ್ ಶತಕದ ನೆರವಿನಿಂದ ಇಂಗ್ಲೆಂಡ್ ಮೊದಲ ಪಂದ್ಯವನ್ನು ಗೆದ್ದು ನಿಟ್ಟುಸಿರು ಬಿಟ್ಟಿದೆ.
ಢಾಕಾದ ಶೇರ್ ಇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರರಾದ ನಾಯಕ ತಮೀಮ್ ಇಕ್ಬಾಲ್ 23 ರನ್ ಗಳಿಸಿದರೆ, ಲಿಟ್ಟನ್ ದಾಸ್ ಕೇವಲ 7 ರನ್‌ಗಳಿಗೆ ಔಟಾದರು.
ನಂತರ ಬಂದ ನಜ್ಮುಲ್ ಹೊಸೈನ್ ಶಾಂಟೋ ಅರ್ಧಶತಕ ಗಳಿಸುವ ಮೂಲಕ ಬಾಂಗ್ಲಾದೇಶ ತಂಡಕ್ಕೆ ಆಸರೆಯಾದರು. ಮುಷ್ಫೀಕರ್ ರಹೀಮ್ 16 ರನ್ ಗಳಿಸಿದರೆ, ಶಕೀಬ್ ಅಲ್ ಹಸನ್ ಕೇವಲ 8 ರನ್ ಗಳಿಸಿ ಔಟಾದರು.
ಮಹಮುದುಲ್ಲಾ ಮಾತ್ರ 31 ರನ್ ಗಳಿಸಿ ಇಂಗ್ಲೆಂಡ್ ಬೌಲರ್ ಗಳನ್ನು ಎದುರಿಸಿದರು. ಆಫಿಫ್ ಹೊಸೈನ್ 9 ರನ್, ಮೆಹದಿ ಹಸನ್ 7 ರನ್, ಟಸ್ಕಿನ್ ಅಹ್ಮದ್ 14 ರನ್, ತೈಜುಲ್ ಇಸ್ಲಾಂ 10 ರನ್ ಗಳಿಸಿ ಔಟಾದರು, ಅಂತಿಮವಾಗಿ ಬಾಂಗ್ಲಾದೇಶ 47.2 ಓವರ್ ಗಳಲ್ಲಿ 209 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಜೋಫ್ರಾ ಆರ್ಚರ್, ಮಾರ್ಕ್ ವುಡ್, ಮೊಯೀನ್ ಅಲಿ, ಆದಿಲ್ ರಶೀದ್ ತಲಾ ಎರಡು ವಿಕೆಟ್ ಪಡೆದರು. ವಿಲ್ ಜ್ಯಾಕ್ಸ್ ಮತ್ತು ಕ್ರಿಸ್ ವೋಕ್ಸ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್
ಸಾಧಾರಣ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್‌ಗೆ ಬಾಂಗ್ಲಾದೇಶದ ಬೌಲರ್ ಗಳು ಸವಾಲಾದರು. ಆರಂಭಿಕ ಆಟಗಾರರದ ಜೇಸನ್ ರಾಯ್ 6 ರನ್ ಗಳಿಸಿ ಔಟಾದರೆ, ಫಿಲಿಪ್ ಸಾಲ್ಟ್ 12 ರನ್ ಗಳಿಸಿ ಔಟಾದರು.
ಜೇಮ್ಸ್ ವಿನ್ಸ್ (6), ಜೋಸ್ ಬಟ್ಲರ್ (9), ರನ್ ಗಳಿಸಿ ಔಟಾದರು. 103 ರನ್ ಗಳಿಸುವವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಡೇವಿಡ್ ಮಲನ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. 145 ಎಸೆತಗಳಲ್ಲಿ 8 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 114 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಗೆಲುವಿಗೆ ಕಾರಣವಾದರು. ವಿಲ್ ಜ್ಯಾಕ್ಸ್ 26 ರನ್ ಗಳಿಸುವ ಮೂಲಕ ಡೇವಿಡ್ ಮಲಾನ್‌ಗೆ ಜೊತೆಯಾದರು.
ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ಕಡೆ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಡೇವಿಡ್ ಮಲಾನ್ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications