Ban vs Eng T20: ಲಿಟ್ಟನ್ ದಾಸ್, ನಜ್ಮುಲ್ ಶಾಂಟೋ ಭರ್ಜರಿ ಬ್ಯಾಟಿಂಗ್ : ಸವಾಲಿನ ಮೊತ್ತ ಕಲೆಹಾಕಿದ ಬಾಂಗ್ಲಾದೇಶ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕುವ ಮೂಲಕ ಇಂಗ್ಲೆಂಡ್ ಗೆಲುವಿಗೆ ಸವಾಲಿನ ಗುರಿ ನೀಡಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಮಾಡಲು ನಿರ್ಧರಿಸಿತು. ಆದರೆ, ಬಾಂಗ್ಲಾದೇಶದ ಆರಂಭಿಕರಾದ ಲಿಟ್ಟನ್ ದಾಸ್ ಮತ್ತು ರೋನಿ ತಾಲೂಕ್ದಾರ್ ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 55 ರನ್‌ಗಳನ್ನು ಪೇರಿಸಿತು. ರೋನಿ ತಾಲೂಕ್ದಾರ್ 22 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ನಂತರ ಬಂದ ನಜ್ಮುಲ್ ಹೊಸೈನ್ ಶಾಂಟೊ ಕೂಡ ಲಿಟ್ಟನ್ ದಾಸ್ ಜೊತೆಗೂಡಿ 2ನೇ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ಆಡಿದರು.
ಲಿಟ್ಟನ್ ದಾಸ್ 57 ಎಸೆತಗಳಲ್ಲಿ 10 ಬೌಂಡರಿ ಮತ್ತು ಒಂದು ಭರ್ಜರಿ ಸಿಕ್ಸರ್ ನೆರವಿನಿಂದ 73 ರನ್ ಗಳಿಸಿ ಔಟಾದರು. ನಜ್ಮುನ್ ಶಾಂಟೋ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಮುಂದುವರೆಸಿದರು. 36 ಎಸೆತಗಳಲ್ಲಿ 1 ಬೌಂಡರಿ ಎರಡು ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 47 ರನ್ ಗಳಿಸಿದರು. ನಾಯಕ ಶಕೀಬ್ ಅಲ್ ಹಸನ್ 6 ಎಸೆತಗಳಲ್ಲಿ ಅಜೇಯ 4 ರನ್ ಗಳಿಸಿದರು.
ಅಂತಿಮವಾಗಿ ಬಾಂಗ್ಲಾದೇಶ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕುವ ಮೂಲಕ ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡಿದೆ. ಇಂಗ್ಲೆಂಡ್ ಪರವಾಗಿ ಆದಿಲ್ ರಶೀದ್ 4 ಓವರ್ ಗಳಲ್ಲಿ 23 ರನ್ ನೀಡಿ ಒಂದು ವಿಕೆಟ್ ಪಡೆದರು. ಕ್ರಿಸ್ ಜೋರ್ಡಾನ್ 3 ಓವರ್ ಗಳಲ್ಲಿ 21 ರನ್ ನೀಡಿ ಒಂದು ವಿಕೆಟ್ ಪಡೆದುಕೊಂಡರು.

ಗುರಿ ತಲುಪುತ್ತಾ ಇಂಗ್ಲೆಂಡ್
ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯದಿಂದ ಸೋಲನುಭವಿಸಿರುವ ಇಂಗ್ಲೆಂಡ್ ಈ ಸವಾಲಿನ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿದರೆ ಮಾತ್ರ ಮುಖಭಂಗವನ್ನು ತಪ್ಪಿಸಿಕೊಳ್ಳಬಹುದಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಗೆದ್ದಿರುವ ಬಾಂಗ್ಲಾದೇಶ ಈ ಪಂದ್ಯವನ್ನು ಗೆದ್ದು ವಿಶ್ವಚಾಂಪಿಯನ್ನರಿಗೆ ಮಣ್ಣುಮುಕ್ಕಿಸುವ ವಿಶ್ವಾಸದಲ್ಲಿದೆ.

ಉಭಯ ತಂಡಗಳ ಆಡುವ ಬಳಗ
ಇಂಗ್ಲೆಂಡ್ : ಫಿಲಿಪ್ ಸಾಲ್ಟ್, ಡೇವಿಡ್ ಮಲನ್, ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಬೆನ್ ಡಕೆಟ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್.
ಬಾಂಗ್ಲಾದೇಶ : ಲಿಟನ್ ದಾಸ್ (ವಿಕೆಟ್ ಕೀಪರ್), ರೋನಿ ತಾಲುಕ್ದಾರ್, ನಜ್ಮುಲ್ ಹೊಸೈನ್ ಶಾಂಟೋ, ತೌಹಿದ್ ಹೃದಯೋಯ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ನಸುಮ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಹಸನ್ ಮಹಮೂದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications