Ban vs Eng T20: ಶಕೀಬ್ ತಂಡದ ಆರ್ಭಟಕ್ಕೆ ಇಂಗ್ಲೆಂಡ್ ಧೂಳಿಪಟ: ಸರಣಿ ವೈಟ್‌ವಾಶ್ ಮಾಡಿದ ಬಾಂಗ್ಲಾದೇಶ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ 16 ರನ್‌ಗಳಿಂದ ಗೆದ್ದ ಬಾಂಗ್ಲಾದೇಶ ಸರಣಿಯನ್ನು ವೈಟ್‌ವಾಶ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಮೂಲಕ ಶಕೀಬ್ ಅಲ್ ಹಸನ್ ಬಳಗ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ.
ಢಾಕಾದ ಶೇರ್ ಇ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿದರು.
ಆರಂಭಿಕರಾದ ಲಿಟ್ಟನ್ ದಾಸ್ ಮತ್ತು ರೋನಿ ತಾಲೂಕ್ದಾರ್ ಬಾಂಗ್ಲಾ ತಂಡಕ್ಕೆ ಉತ್ತಮ ಆರಂಭ ನೀಡಿದರು. ರೋನಿ ತಾಲೂಕ್ದಾರ್ 22 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಲಿಟ್ಟನ್ ದಾಸ್ 57 ಎಸೆತಗಳಲ್ಲಿ 10 ಬೌಂಡರಿ ಮತ್ತು ಒಂದು ಭರ್ಜರಿ ಸಿಕ್ಸರ್ ನೆರವಿನಿಂದ 73 ರನ್ ಗಳಿಸಿ ಔಟಾದರು. ನಜ್ಮುನ್ ಶಾಂಟೋ 36 ಎಸೆತಗಳಲ್ಲಿ 1 ಬೌಂಡರಿ ಎರಡು ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 47 ರನ್ ಗಳಿಸಿದರು. ಆದಿಲ್ ರಶೀದ್, ಕ್ರಿಸ್ ಜೋರ್ಡಾನ್ ತಲಾ ಒಂದು ವಿಕೆಟ್ ಪಡೆದುಕೊಂಡರು.

ದಿಢೀರ್ ಕುಸಿತ ಕಂಡ ಇಂಗ್ಲೆಂಡ್
ಟಿ20 ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಇಂಗ್ಲೆಂಡ್ ಮೂರನೇ ಪಂದ್ಯದಲ್ಲಿ ಕೂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಫಿಲಿಪ್ ಸಾಲ್ಟ್ ಶೂನ್ಯಕ್ಕೆ ಔಟಾದರು.
ಡೇವಿಡ್ ಮಲನ್ ಮತ್ತು ಜೋಸ್ ಬಟ್ಲರ್ ಇಂಗ್ಲೆಂಡ್ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಡೇವಿಡ್ ಮಲನ್ 47 ಎಸೆತಗಳಲ್ಲಿ 6 ಬೌಂಡರಿ 2 ಸಿಕ್ಸರ್ ಸಹಿತ 43 ರನ್ ಗಳಿಸಿದರು. ಜೋಸ್ ಬಟ್ಲರ್ 31 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್ ಸಹಿತ 40 ರನ್ ಗಳಿಸಿದರು. ಎರಡನೇ ವಿಕೆಟ್‌ಗೆ 95 ರನ್ ಕಲೆಹಾಕುವ ಮೂಲಕ ಇಂಗ್ಲೆಂಡ್ ಸುಲಭ ಜಯ ಪಡೆಯುವ ಮುನ್ಸೂಚನೆ ನೀಡಿತು.
ಆದರೆ ಇಂಗ್ಲೆಂಡ್ 100 ರನ್ ಗಳಿಸಿದ್ದಾಗ ಡೇವಿಡ್ ಮಲನ್ ಮತ್ತು ಬಟ್ಲರ್ ಔಟಾಗುವ ಮೂಲಕ ಮತ್ತೆ ಸೋಲಿನ ಸುಳಿಗೆ ಸಿಲುಕಿತು. ಬೆನ್ ಡಕೆಟ್ 11 ರನ್ ಗಳಿಸಿದರೆ, ಮೊಯೀನ್ ಅಲಿ 9 ರನ್ ಗಳಿಸಿದರು. ಸ್ಯಾಮ್ ಕರನ್ 4, ಕ್ರಿಸ್ ವೋಕ್ಸ್ 13 ರನ್ ಗಳಸಿದರು. 20 ಓವರ್ ಗಳ್ಲಲಿ 6 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿದ ಇಂಗ್ಲೆಂಡ್ 16 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಉಭಯ ತಂಡಗಳ ಆಡುವ ಬಳಗ
ಇಂಗ್ಲೆಂಡ್ : ಫಿಲಿಪ್ ಸಾಲ್ಟ್, ಡೇವಿಡ್ ಮಲನ್, ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಬೆನ್ ಡಕೆಟ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್.
ಬಾಂಗ್ಲಾದೇಶ : ಲಿಟನ್ ದಾಸ್ (ವಿಕೆಟ್ ಕೀಪರ್), ರೋನಿ ತಾಲುಕ್ದಾರ್, ನಜ್ಮುಲ್ ಹೊಸೈನ್ ಶಾಂಟೋ, ತೌಹಿದ್ ಹೃದಯೋಯ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ನಸುಮ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಹಸನ್ ಮಹಮೂದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications