Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐರ್ಲೆಂಡ್ vs ಬಾಂಗ್ಲಾದೇಶ: ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾ ಪಡೆಗೆ ಭರ್ಜರಿ ಗೆಲುವು

Ban vs Ire, 1st t20: Bangladesh won match by 22 runs against Ireland

ಬಾಂಗ್ಲಾದೇಶ ತಂಡ ತವರಿನಲ್ಲಿ ವೈಟ್‌ಬಾಲ್ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡುವುದನ್ನು ಮುಂದುವರಿಸಿದೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಬಾಂಗ್ಲಾದೇಶ ಭರ್ಜರಿ ಗೆಲುವು ಸಾಧಿಸಿದ್ದು ಮೂರು ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ ವಿಕೆಟ್‌ಗೆ ಲಿಟನ್ ದಾಸ್ ಹಾಗೂ ರೋನಿ ತಾಲೂಕ್‌ದಾರ್ 7.1 ಓವರ್‌ಗಳಲ್ಲಿ 91 ರನ್‌ಗಳ ಸ್ಪೋಟಕ ಜೊತೆಯಾಟ ನೀಡಿ ಭರ್ಜರಿ ಆರಂಭ ನೀಡಿದರು. ರೋನಿ ಭರ್ಜರಿ 67 ರನ್‌ಗಳನ್ನು ಗಳಿಸದರೆ ಲಿಟನ್ ದಾಸ್ 47 ರನ್‌ಗಳಿಸಿ ಔಟಾದರು.

ಉಳಿದಂತೆ ಶಮಿಮ್ ಹುಸೈನ್ 30, ನಾಯಕ ಶಕೀಬ್ ಅಲ್ ಹಸನ್ 20 ರನ್‌ಗಳ ಕೊಡುಗೆ ನೀಡಿದರು. ಬಾಂಗ್ಲಾದೇಶ ಇನ್ನಿಂಗ್ಸ್‌ನ ನಾಲ್ಕು ಎಸೆತಗಳು ಬಾಕಿಯಿರುವಂತೆಯೇ ಮಳೆ ಸುರಿಯಲು ಆರಂಬಿಸಿದ ಕಾರಣ ಬಾಂಗ್ಲಾದೇಶ ಇನ್ನಿಂಗ್ಸನ್ನು ಮೊಟಕಯಗೊಳಿಸಲಾಯಿತು. ಈ ಹಂತದಲ್ಲಿ ಬಾಂಗ್ಲಾದೇಶ ತಂಡ 19.2 ಓವರ್‌ಗಳಲ್ಲಿ ಭರ್ಜರಿ 207 ರನ್‌ಗಳನ್ನು ಗಳಿಸಿತ್ತು.

ಇನ್ನು ಮಳೆ ಅಡ್ಡಿಪಡಿಸಿದ ಕಾಣದಿಂದಾಗಿ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಗುರಿಯನ್ನು ಪರಿಷ್ಕರಿಸಲಾಯಿತು. ಹೀಗಾಗಿ 8 ಓವರ್‌ಗಳಲ್ಲಿ ಐರ್ಲೆಂಡ್ ತಂಡಕ್ಕೆ 103 ರನ್‌ಗಳನ್ನು ಗಳಿಸುವ ಸವಾಲು ನಿಗದಿಪಡಿಸಲಾಯಿತು. ಆದರೆ ಇದರಲ್ಲಿ ವಿಫಲವಾದ ಐರ್ಲೆಂಡ್ ತಂಡ 8 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 81 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಐರ್ಲೆಂಡ್ ತಂಡ 22 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.

ಬಾಂಗ್ಲಾದೇಶ ಆಡುವ ಬಳಗ: ಲಿಟ್ಟನ್ ದಾಸ್ (ವಿಕೆಟ್ ಕೀಪರ್), ರೋನಿ ತಾಲುಕ್ದಾರ್, ನಜ್ಮುಲ್ ಹೊಸೈನ್ ಶಾಂಟೋ, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದಯ್, ಶಮೀಮ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್
ಬೆಂಚ್: ಶೋರಿಫುಲ್ ಇಸ್ಲಾಂ, ಜಾಕರ್ ಅಲಿ, ರಿಶಾದ್ ಹೊಸೈನ್

ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್ (ನಾಯಕ), ರಾಸ್ ಅಡೈರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ,
ಮಾರ್ಕ್ ಅಡೇರ್, ಕ್ರೇಗ್ ಯಂಗ್, ಗ್ರಹಾಂ ಹ್ಯೂಮ್, ಬೆಂಜಮಿನ್ ವೈಟ್
ಬೆಂಚ್: ಮ್ಯಾಥ್ಯೂ ಹಂಫ್ರೀಸ್, ಫಿಯಾನ್ ಹ್ಯಾಂಡ್, ಥಾಮಸ್ ಮೇಯಸ್

Story first published: Monday, March 27, 2023, 20:14 [IST]
Other articles published on Mar 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+